ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ

ವೆಲ್ಲಿಂಗ್ಟನ್: ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್ ತಂಡ ಪ್ರಕಟಗೊಂಡಿದೆ. ಚೊಚ್ಚಲ ಬಾರಿಗೆ ತಂಡದಲ್ಲಿ ಆಲ್ ರೌಂಡರ್ ರಾಚಿನ್ ರವೀಂದ್ರ ಮತ್ತು ವೇಗಿ ಜೇಕಬ್ ಡಫ್ಫೀ ಅವರಿಗೆ ಸ್ಥಾನ ನೀಡಲಾಗಿದೆ.
2016ರ ಆಗಸ್ಟ್‌ನಲ್ಲಿ ನ್ಯೂಜಿಲೆಂಡ್ ಪರ ಕಡೇಯ ಟೆಸ್ಟ್ ಪಂದ್ಯ ಆಡಿದ್ದ ಡೌಗ್ ಬ್ರೇಸ್ವೆಲ್ ಅವರಿಗೂ ಸುದೀರ್ಘ ಸಮಯದ ಬಳಿಕ ರಾಷ್ಟ್ರೀಯ ತಂಡಕ್ಕೆ ಕರೆ ನೀಡಿಲಾಗಿದೆ. ರವೀಂದ್ರ ಮತ್ತು ಡಫ್ಫೀ ಅಲ್ಲದೆ ಟೆಸ್ಟ್ ತಂಡದಲ್ಲಿ ಮತ್ತೊಬ್ಬ ಅನ್‌ಕ್ಯಾಪ್ಡ್ ಆಟಗಾರ ಡೆವೊನ್ ಕಾನ್ವೇ ಅವರನ್ನೂ ಹೆಸರಿಸಲಾಗಿದೆ.
ಭಾರತದಲ್ಲಿ ಏಪ್ರಿಲ್ 9ರಿಂದ ಮೇ 30ರ ವರೆಗೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಬಳಿಕ, ಅಂದರೆ ಜೂನ್ 2ರಿಂದ ಇಂಗ್ಲೆಂಡ್-ನ್ಯೂಜಿಲೆಂಡ್ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದಕ್ಕಾಗಿ ಕ್ರಿಕೆಟ್ ನ್ಯೂಜಿಲೆಂಡ್ 20 ಜನರ ಬಲಿಷ್ಠ ತಂಡ ಪ್ರಕಟಿಸಿದೆ.
ನ್ಯೂಜಿಲೆಂಡ್ ಟೆಸ್ಟ್ ತಂಡ
ಕೇನ್ ವಿಲಿಯಮ್ಸನ್ (ಸಿ), ಟಾಮ್ ಬ್ಲುಂಡೆಲ್, ಟ್ರೆಂಟ್ ಬೌಲ್ಟ್, ಡೌಗ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಜೇಕಬ್ ಡಫ್ಫಿ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲಾಥಮ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ರಾಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿ.ಜೆ.ವಾಟ್ಲಿಂಗ್ (ವಿಕೆ), ವಿಲ್ ಯಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications