Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಚಿನ್ ರವೀಂದ್ರ ಒಟ್ಟು ಆಸ್ತಿ ಮೌಲ್ಯ= ಐಪಿಎಲ್ ಹರಾಜಿನಲ್ಲಿ ಬಾಚುವ ಮೊತ್ತ!

ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಅಖಾಡದಲ್ಲಿರುವ ಸ್ಟಾರ್ ಆಟಗಾರರು ತಮ್ಮ ಖಾತೆಗೆ ಜಮೆ ಆಗ ಬಹುದಾದ ಹಣದ ಲೆಕ್ಕಾಚಾರ ನಡೆಸಿದ್ದಾರೆ. ಈ ಬಾರಿ ಐಪಿಎಲ್‌ ಹರಾಜಿನಲ್ಲಿ ಎಲ್ಲರ ಚಿತ್ತವನ್ನು ಕದ್ದ ಪ್ಲೇಯರ್‌ ರಚಿನ್‌ ರವೀಂದ್ರ..

ಬೆಂಗಳೂರು ಮೂಲದ ಈ ಪ್ಲೇಯರ್‌ ಸಿಕ್ಕ ಅವಕಾಶದಲ್ಲಿ ಅಬ್ಬರಿಸಿ, ತಂಡದಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ ಅವರ ಅನುಪಸ್ಥಿತಿಯಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದ ರಚಿನ್‌, ಇತಿಹಾಸದ ಪುಟದಲ್ಲಿ ತಮ್ಮ ಹೆಸರು ನಮೂದಿಸಿದ್ದಾರೆ.

Rachin Ravindra Net Asset Value= Amount To Get In IPL Auction!

ರಚಿನ್‌ ರವೀಂದ್ರ ಅವರ ಎಡಗೈ ಬ್ಯಾಟಿಂಗ್ ನೋಡಿದ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. ಅವರು ಬಾರಿಸುವ ಕವರ್ ಡ್ರೈವ್, ಆನ್ ಡ್ರೈವ್‌, ಲೆಗ್‌ ಸೈಡ್‌ನಲ್ಲಿ ಬಾರಿಸುವ ಶಾಟ್‌ಗಳು ಅಭಿಮಾನಿಗಳನ್ನು ತನ್ನನ್ನು ಪ್ರೀತಿಸುವಂತೆ ಮಾಡಿದೆ. ರಚಿನ್‌ ರವೀಂದ್ರ ಅವರ ಭರ್ಜರಿ ಆಟದ ಪರಿಣಾಮವೇ ಅವರಿಗೆ ತಂಡದಲ್ಲಿ ಮೂರನೇ ಸ್ಥಾನ ಫಿಕ್ಸ್‌ ಆದಂತೆ ಕಾಣುತ್ತಿದೆ. ಅಲ್ಲದೆ ಇವರನ್ನು ಕೇನ್‌ ವಿಲಿಯಮ್ಸನ್‌ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದೆ.

ಸಚಿನ್ ದಾಖಲೆ ಅಳಿಸಿದ ರಚಿನ್

ರಚಿನ್ ರವೀಂದ್ರ ತನ್ನ ಧಮಾಕೆದಾರ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಛಾಪು ಮೂಡಿಸಿದ ಆಟಗಾರ. ಏಕದಿನ ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿದ ಧೀರ. ಚಿಕ್ಕ ವಯಸ್ಸಿನಲ್ಲಿ ರಚಿನ್ ಏಕದಿನ ವಿಶ್ವಕಪ್‌ನಲ್ಲಿ ಮೂರು ಶತಕ ಬಾರಿಸಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಇವರು ತನ್ನ ಏಕದಿನ ವಿಶ್ವಕಪ್‌ನಲ್ಲಿ ಎರಡು ಶತಕ ಬಾರಿಸಿದ್ದರು. 1996 ರ ವಿಶ್ವಕಪ್‌ನಲ್ಲಿ ತೆಂಡೂಲ್ಕರ್ ಅವರ 523 ರನ್‌ಗಳ ದಾಖಲೆಯನ್ನು ಇದೀಗ ರಚಿನ್‌ ರವೀಂದ್ರ ಹಿಂದಿಕ್ಕಿದ್ದಾರೆ.

Rachin Ravindra Net Asset Value= Amount To Get In IPL Auction!

ಏಕದಿನ ವಿಶ್ವಕಪ್‌ನಲ್ಲಿ ರಚಿನ್ ನೀಡಿದ ಪ್ರದರ್ಶನ ಐಪಿಎಲ್‌ ಫ್ರಾಂಚೈಸಿಗಳ ಮನ ಗೆದ್ದಿದೆ. ಅಲ್ಲದೆ ರಚಿನ್‌ ಒಬ್ಬ ಆಲ್‌ರೌಂಡರ್‌.. ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗ ಬಲ್ಲ ಪ್ಲೇಯರ್‌. ಇವರಿಗೆ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ತಾಮುಂದು ನಾಮುಂದೆ ಎಂಬಂತೆ ಬಾಜಿ ಕಟ್ಟಲ್ಲಿದ್ದಾರೆ.

ಐಪಿಎಲ್ ಹರಾಜಿನಲ್ಲಿ ರಚಿನ್ ರವೀಂದ್ರ ಅವರ ಬೇಸ್ ಪ್ರೈಸ್‌ 50 ಲಕ್ಷ ಆಗಿದೆ. ನಿಶ್ಚಿತವಾಗಿಯೂ ಇವರು ತಮ್ಮ ಬೇಸ್‌ ಪ್ರೈಸ್‌ನ 10ಕ್ಕೂ ಹೆಚ್ಚು ಪಟ್ಟು ಹಣವನ್ನು ಬಾಚುವ ನಿರೀಕ್ಷೆ ಇದೆ. ಇನ್ನೊಂದು ಮಾಹಿತಿ ಪ್ರಕಾರ ರಚಿನ್‌ ರವೀಂದ್ರ ಐಪಿಎಲ್‌ ಹರಾಜಿನಲ್ಲಿ ಅತಿ ಹೆಚ್ಚು ಹಣವನ್ನು ತಮ್ಮ ಜೇಬಿಗೆ ಇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ ರಚಿನ್ ರವೀಂದ್ರ ಅವರ ಒಟ್ಟು ಆಸ್ತಿ ಮೌಲ್ಯ 1 ಮಿಲಿಯನ್ ಡಾಲರ್ ಎಂದು ತಿಳಿದು ಬಂದಿದೆ. ತಮ್ಮ ಒಟ್ಟು ಮೌಲ್ಯವನ್ನು ಒಂದೇ ದಿನ ರಚಿನ್ ರವೀಂದ್ರ ಡಬಲ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ರಚಿನ್ ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ 10 ಕೋಟಿಗೂ ಹೆಚ್ಚು ಹಣ ಇವರ ಖಾತೆ ಸೇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇವರ ಆಸ್ತಿ ಮೌಲ್ಯವು, ಐಪಿಎಲ್‌ ಹರಾಜಿಗೆ ಹೋಲಿಸಲಾಗುತ್ತಿದೆ.

Story first published: Monday, December 18, 2023, 17:28 [IST]
Other articles published on Dec 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+