ಕಿವೀಸ್ ಜಯದಲ್ಲಿ ಮಿಂಚಿದ ರಚಿನ್ ರವೀಂದ್ರ: ಲಂಕಾ ಟಿ20 ವಿಶ್ವಕಪ್‌ನಿಂದ ಹೊರಕ್ಕೆ
ಕೊಲಂಬೊ: ಭರವಸೆಯ ಆಲ್‌ರೌಂಡರ್ ರಚಿನ್ ರವೀಂದ್ರ ಅವರ ಭರ್ಜರಿ ಪ್ರದರ್ಶನದ ಫಲದಿಂದ ನ್ಯೂಜಿಲೆಂಡ್ ಟಿ20 ವಿಶ್ವಕಪ್ ಸೂಪರ್ 8 ಹಂತದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ, ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಲಂಕಾ ತಂಡ ಟಿ20 ವಿಶ್ವಕಪ್‌ನಿಂದ ಹೊರ ನಡೆದಿದೆ. ಪಾಕಿಸ್ತಾನಕ್ಕೆ ಇನ್ನು ಅವಕಾಶ ಇದ್ದು, ನ್ಯೂಜಿಲೆಂಡ್ ತಂಡದ ಪ್ರದರ್ಶನವನ್ನು ಪಾಕ್ ತಂಡ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಸಾಧಾರಣವಾಗಿತ್ತು. ಕಿವೀಸ್ ತಂಡದ ವಿಕೆಟ್ ಕೀಪರ್ ಟೀಮ್ ಸೀಫರ್ಟ್ (8) ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಫಿನ್ ಅಲೆನ್ 13 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 23 ರನ್ ಸೇರಿಸಿತು. ನ್ಯೂಜಿಲೆಂಡ್ ತಂಡ ಪವರ್ ಪ್ಲೇನಲ್ಲಿ 44 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಮೂರನೇ ವಿಕೆಟ್‌ಗೆ ರಚಿನ್ ರವೀಂದ್ರ ಹಾಗೂ ಗ್ಲೆನ್ ಫಿಲಿಪ್ಸ್ ಜೋಡಿ 31 ಎಸೆತಗಳಲ್ಲಿ 41 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.

ಗ್ಲೆನ್ ಫಿಲಿಪ್ಸ್ 18, ರಚಿನ್ ರವೀಂದ್ರ 22 ಎಸೆತಗಳಲ್ಲಿ 32 ರನ್ ಸಿಡಿಸಿದರು. ಡೇರಿಲ್ ಮಿಚೆಲ್ (3), ಮಾರ್ಕ್ ಚಾಂಪ್ಮನ್ (0), ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ನ್ಯೂಜಿಲೆಂಡ್ 84 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಾಯಕ ಮಿಚೆಲ್ ಸ್ಯಾಂಟ್ನರ್ ಹಾಗೂ ಕೋಲ್ ಮೆಕ್‌ಕಾಂಚಿ ಅವರು ಏಳನೇ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 47 ಎಸೆತಗಳಲ್ಲಿ 84 ರನ್ ಸೇರಿಸಿತು. ಮಿಚೆಲ್ ಸ್ಯಾಂಟ್ನರ್ 47 ರನ್ ಸಿಡಿಸಿದರು. ಕೋಲ್ ಮೆಕ್‌ಕಾಂಚಿ ಅಜೇಯ 37 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 168 ರನ್ ಸೇರಿಸಿತು. ಶ್ರೀಲಂಕಾ ಪರ ಮಹೇಶ್ ತೀಕ್ಷಣ್, ದುಶಮಂತ ಚಮೀರಾ ತಲಾ ಮೂರು ವಿಕೆಟ್ ಪಡೆದರು.
ರಚಿನ್ ರವೀಂದ್ರಗೆ 4 ವಿಕೆಟ್
ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡದ ಆರಂಭ ಕಳಪೆಯಾಗಿತ್ತು. ಲಂಕಾ ತಂಡದ ಬ್ಯಾಟರ್‌ಗಳು ನೆಲಕಚ್ಚಿ ಬ್ಯಾಟ್ ಮಾಡುವಲ್ಲಿ ವಿಫಲರಾದರು. ನ್ಯೂಜಿಲೆಂಡ್ ತಂಡದ ಬೌಲರ್‌ಗಳ ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ಲಂಕಾ ಬ್ಯಾಟರ್‌ಗಳು ವಿಫಲರಾದರು. ಶ್ರೀಲಂಕಾ ಪರ ಕುಸಾಲ್ ಮೆಂಡೀಸ್ 11, ಪವನ್ ರಥನಾಯಕೆ 10, ಕಮಿಂಡು ಮೆಂಡೀಸ್ 31, ಡುನಿತ್ ವೆಲ್ಲಾಲಗೆ 29 ರನ್ ಬಾರಿಸಿದರು. ಉಳಿದ ಬ್ಯಾಟರ್‌ಗಳು ಒಂದಂಕ್ಕಿಯಲ್ಲಿ ಆಟ ಮುಗಿಸಿದರು. ಅಂತಿಮವಾಗಿ ಲಂಕಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 107 ರನ್ ಸೇರಿಸಿ ಸೋಲು ಕಂಡಿತು.

ನ್ಯೂಜಿಲೆಂಡ್ ತಂಡದ ಪರ ಆಲ್‌ರೌಂಡರ್ ರಚಿನ್ ರವೀಂದ್ರ 27 ರನ್‌ಗಳಿಗೆ 4 ವಿಕೆಟ್ ಕಬಳಿಸಿ ಮಿಂಚಿದರು. ವೇಗಿ ಮ್ಯಾಟ್ ಹೆನ್ರಿ 2 ವಿಕೆಟ್ ಪಡೆದರು. ರಚಿನ್ ರವೀಂದ್ರ ಆಲ್‌ರೌಂಡರ್ ಆಟದ ಪರಿಣಾಮ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications