Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy: ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ; ನ್ಯೂಜಿಲೆಂಡ್‌ಗೆ ಗೋಲ್ಡನ್ ಬ್ಯಾಟ್-ಬಾಲ್

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದಿದೆ. ಇದು ಟೀಮ್ ಇಂಡಿಯಾದ ಮೂರನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯಾಗಿದೆ. ಇದಕ್ಕೂ ಮೊದಲು ಭಾರತ ತಂಡ 2002 ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಮತ್ತು 2013 ರಲ್ಲಿ ಎಂಎಸ್‌ ಧೋನಿ ನೇತೃತ್ವದಲ್ಲಿ
ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು. ಈಗ 12 ವರ್ಷಗಳ ನಂತರ, ರೋಹಿತ್ ಶರ್ಮಾ ನಾಯಕತ್ವದಲ್ಲಿ ದುಬೈನಲ್ಲಿ ಅದ್ಭುತ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರನೇ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ಐಸಿಸಿ ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿದ್ದ ನ್ಯೂಜಿಲೆಂಡ್ ತಂಡೆ ನಿರಾಸೆ ಆಗಿದೆ. ಆದರೆ ನ್ಯೂಜಿಲೆಂಡ್ ತಂಡದ ಆಟಾಗಾರರ ಅದ್ಭುತ ಪ್ರದರ್ಶನಕ್ಕೆ ಎರಡು ಪ್ರಮುಖ ಪ್ರಶಸ್ತಿಗಳು ಸಿಕ್ಕಿವೆ.

Rachin Ravindra to receive Golden Bat and Matt Henry to receive Golden Ball in Champions Trophy 2025

ಚಾಪಿಯನ್ಸ್‌ ಟ್ರೋಫಿಯ ವೇಳೆ ಅತಿಹೆಚ್ಚು ರನ್ ಮತ್ತು ವಿಕೆಟ್ ಪಡೆದ ಆಟಗಾರರಿಗೆ ಗೋಲ್ಡನ್‌ ಬ್ಯಾಟ್‌ ಮತ್ತು ಬಾಲ್ ಅವಾರ್ಡ್‌ ನೀಡಲಾಗುತ್ತದೆ. ಈ ಎರಡು ಪ್ರಶಸ್ತಿಗಳು ನ್ಯೂಜಿಲೆಂಡ್ ಆಟಗಾರರ ಮಡಿಲು ಸೇರಿರುವುದು ವಿಶೇಷ. ಟೂರ್ನಿಯುದಕ್ಕೂ ಮಿಂಚಿದ ಯುವ ಬ್ಯಾಟರ್ ರಚಿನ್ ರವೀಂದ್ರ ಅವರಿಗೆ ಗೋಲ್ಡನ್ ಬ್ಯಾಟ್ ಪ್ರಶಸ್ತಿ ಸಿಕ್ಕರೆ, ಕಿವೀಸ್ ಪಡೆಯ ಪ್ರಮುಖ ವೇಗದ ಬೌಲಿಂಗ್ ಅಸ್ತ್ರ ಮ್ಯಾಟ್ ಹೆನ್ರಿ ಅವರು ಗೋಲ್ಡನ್ ಬಾಲ್ ಪ್ರಶಸ್ತಿ ಪಡೆದಿದ್ದಾರೆ.

ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ರಚಿನ್ ರವೀಂದ್ರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ ಮ್ಯಾನ್ ಆಫ್ ಟೂರ್ನಮೆಂಟ್‌ ಪ್ರಶಸ್ತಿಯನ್ನು ನೀಡಲಾಯಿತು. ಫೈನಲ್ ಪಂದ್ಯದಲ್ಲಿ ರಚಿನ್ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. ಒಟ್ಟು ಟೂರ್ನಿಯಲ್ಲಿ ಅವರು 263 ರನ್ ಬಾರಿಸಿದರು.

ಮ್ಯಾಟ್ ಹೆನ್ರಿ ಟೂರ್ನಿಯಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ ಭಾರತ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಅವರು ತಮ್ಮ 10 ಓವರ್‌ಗಳಲ್ಲಿ 42 ನೀಡಿ 5 ವಿಕೆಟ್‌ಗಳು ಉರುಸಿದ್ದರು. ಈ ಅದ್ಭುತ ಬೌಲಿಂಗ್ ಪ್ರದರ್ಶನಕ್ಕಾಗಿ ಅವರಿಗೆ ಗೋಲ್ಡನ್ ಬಾಲ್ ಪ್ರಶಸ್ತಿ ಸಿಕ್ಕಿದೆ. ಮ್ಯಾಟ್ ಹೆನ್ರಿ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ಫೈನಲ್ ಪಂದ್ಯದಿಂದ ಹೊರಗುಳಿಯಬೇಕಾಯಿತು. ಒಂದು ವೇಳೆ ಭಾರತ ವಿರುದ್ಧ ಮ್ಯಾಟ್ ಹೆನ್ರಿ ಆಡಿದ್ದರೆ, ಮತ್ತಷ್ಟು ವಿಕೆಟ್ ಉರುಳಿಸುವ ನಿರೀಕ್ಷೆಯಿತ್ತು.

Story first published: Sunday, March 9, 2025, 22:38 [IST]
Other articles published on Mar 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+