For Quick Alerts
ALLOW NOTIFICATIONS  
For Daily Alerts
 

ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯಕ್ಕೆ ರಹಾನೆ ಕ್ಯಾಪ್ಟನ್

Rahane to lead India against Afghanistan

ಮುಂಬೈ, ಮೇ 7: ಟೀಮ್ ಇಂಡಿಯಾ ನಾಯಕ ವಿರಾಟ್ ಹೊಹ್ಲಿ ಅನುಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಜೂನ್ 14ರಂದು ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.

ಈ ವರ್ಷ ಸರ್ರೆಯಲ್ಲಿ ಕಂಟ್ರಿ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇಂಗ್ಲೆಂಡ್ ನತ್ತ ಭಾರತ ಧೀರ್ಘ ಪ್ರವಾಸ ಹೊರಡಲಿದ್ದು, ಇದಕ್ಕೂ ಮುನ್ನ ಅಫ್ಘಾನಿಸ್ತಾನ ಟೆಸ್ಟ್ ಪಂದ್ಯಾಟ ನಡೆಯಲಿದೆ. ಈ ಸಂದರ್ಭ ಕೊಹ್ಲಿ ಅಲಭ್ಯರಿರುವುದರಿಂದ ನಾಯಕತ್ವದ ಹೊಣೆ ರಹಾನೆ ವಹಿಸಿಕೊಳ್ಳಲಿದ್ದಾರೆ.

ಈ ಸಂಬಂಧ ಮೇ 8ರಂದು ರಾಷ್ಟ್ರೀಯ ಆಯ್ಕೆ ಸಮಿತಿ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದು, ಭಾರತ ಕ್ರಿಕೆಟ್ ನ ಎಂಟು ವಿಭಿನ್ನ ತಂಡಗಳನ್ನು ರಚಿಸಲಿದೆ.

ಅಫ್ಘಾನಿಸ್ತಾನ ಟೆಸ್ಟ್ ಪಂದ್ಯಕ್ಕಾಗಿ ಒಂದು ತಂಡ, ಇಂಗ್ಲೆಂಡ್ ಪ್ರವಾಸಕ್ಕಾಗಿ ಒಂದು 'ಎ' ತಂಡ, ಇಂಗ್ಲೆಂಡ್ ನ 'ಎ' ಮತ್ತು ವೆಸ್ಟ್ ಇಂಡೀಸ್ ನ 'ಎ' ತಂಡಗಳ ನಡುವೆ ನಡೆಯಲಿರುವ ತ್ರಿಕೋನ ಸರಣಿಗಾಗಿ ಒಂದು 'ಎ' ತಂಡ, ಐರ್ಲ್ಯಾಂಡ್ ನಲ್ಲಿನ ಟಿ20ಗಾಗಿ ಒಂದು ತಂಡ, ಇಂಗ್ಲೆಂಡ್ ಟಿ20ಗಾಗಿ ಒಂದು ತಂಡ, ಇಂಗ್ಲೆಂಡ್ ನಲ್ಲಿ ನಡೆಯಲಿರುವ ಏಕದಿನ ಪಂದ್ಯಗಳಿಗಾಗಿ ಒಂದು ತಂಡ. ಹೀಗೆ ಒಟ್ಟು 6 ವಿಭಿನ್ನ ಭಾರತ ತಂಡಗಳನ್ನು ಅಯ್ಕೆ ಸಮಿತಿ ರಚಿಸಲಿದೆ.

ಐರ್ಲ್ಯಾಂಡ್ ನಲ್ಲಿ ನಡೆಯುವ ಪಂದ್ಯದ ವೇಳೆ ನಾಯಕ ಕೊಹ್ಲಿ ತಂಡವನ್ನು ಮರಳಿ ಸೇರಿಕೊಳ್ಳಲಿದ್ದಾರೆ.

Story first published: Monday, May 7, 2018, 18:56 [IST]
Other articles published on May 7, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+