ವಿಜಯ್ ಹಜಾರೆ ಟ್ರೋಫಿ : ಮುಂಬೈ ತಂಡಕ್ಕೆ ರಹಾನೆ ನಾಯಕ

ಮುಂಬೈ, ಸೆಪ್ಟೆಂಬರ್ 13: ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಮಧ್ಯಮ ಕ್ರಮಾಂಕ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ ಅವರನ್ನು ಮುಂಬೈ ನಾಯಕರಾಗಿ ಹೆಸರಿಸಲಾಗಿದೆ. ಮುಂಬರುವ ನಿಗದಿತ ಓವರ್ ಗಳ ವಿಜಯ್ ಹಜಾರೆ ಟ್ರೋಫಿ ಆಡಲಿರುವ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ.
ಸೆಪ್ಟೆಂಬರ್ 19ರಿಂದ 50 ಓವರ್ ಗಳ ಪಂದ್ಯಾವಳಿಗಳು ಬೆಂಗಳೂರು ಸಮೀಪದ ಆಲೂರು ಮೈದಾನದಲ್ಲಿ ಆರಂಭವಾಗಲಿದೆ. ಎ ಗುಂಪಿನಲ್ಲಿರುವ ಮುಂಬೈ ತನ್ನ ಮೊದಲ ಪಂದ್ಯವನ್ನು ಬರೋಡಾ ವಿರುದ್ಧ ಆಡಲಿದೆ.
ಏಷ್ಯಾಕಪ್ ಗೆ ಆಯ್ಕೆಯಾಗದ ಅಜಿಂಕ್ಯ ರಹಾನೆ ನಾಯಕರಾಗಿದ್ದರೆ, ಶ್ರೇಯಸ್ ಅಯ್ಯರ್ ಅವರು ಉಪನಾಯಕರಾಗಿದ್ದಾರೆ
ಕೊನೆ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿದ್ದ ಮುಂಬೈ ಪೃಥ್ವಿ ಶಾ ಅವರು ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ, ಬರೋಡಾ, ರೈಲ್ವೇಸ್, ವಿದರ್ಭ, ಪಂಜಾಬ್, ಹಿಮಾಚಲ ಪ್ರದೇಶ, ಗೋವಾ ಹಾಗೂ ಮಹಾರಾಷ್ಟ್ರ ಇರುವ ಗುಂಪಿನಲ್ಲಿ ಮುಂಬೈ ಇದೆ.
ಮುಂಬೈ : ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್(ಉಪ ನಾಯಕ), ಪೃಥ್ವಿ ಶಾ, ಜಾ ಬಿಸ್ತಾ, ಸೂರ್ಯ ಕುಮಾರ್ ಯಾದವ್, ಸಿದ್ದೇಶ್ ಲಾಡ್, ಅದಿತ್ಯಾ ತಾರೆ, ಏಕನಾಥ್ ಕೇರ್ಕಾರ್, ಶಿವಮ್ ದುಬೇ, ಆಕಾಶ್ ಪಾರ್ಕರ್, ಧವಳ್ ಕುಲಕರ್ಣಿ, ಶಾಮ್ಸ್ ಮುಲಾನಿ, ವಿಜಯ್ ಗೋಹಿಲ್, ತುಷಾರ್ ದೇಶಪಾಂಡೆ ಹಾಗೂ ರಾಯ್ ಸ್ಟನ್ ಡಯಾಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications