Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೈದಾನಕ್ಕೆ ಇಳಿಯುವ ಮುನ್ನವೇ ದಕ್ಷಿಣ ಆಫ್ರಿಕಾಕ್ಕೆ ಶುರುವಾಯ್ತು ಭಯ

2025ನೇ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್‌ ವಿಜೇತರಾಗಿರುವ ದಕ್ಷಿಣ ಆಫ್ರಿಕಾ ತಂಡ, ಭಾರತದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ಸರಣಿಗೆ ಭಾರತ ಆತಿಥ್ಯ ವಹಿಸಲಿದೆ. ಈ ಸರಣಿಗೂ ಮುನ್ನ ಉಭಯ ದೇಶಗಳ "ಎ" ತಂಡಗಳ ನಡುವೆ ಅನಧಿಕೃತ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ "ಎ" ತಂಡದ ಪರ ಕಣಕ್ಕೆ ಇಳಿದಿದ್ದ ಟೀಮ್ ಇಂಡಿಯಾದ ಭರವಸೆಯ ಬೌಲರ್‌ಗಳು ಅಬ್ಬರಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ "ಎ" ಹಾಗೂ ದಕ್ಷಿಣ ಆಫ್ರಿಕಾ "ಎ" ನಡುವಣ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಎರಡನೇ ದಿನದ ಅಂತ್ಯಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಎರಡನೇ ದಿನದಾಟದಲ್ಲಿ ಮೊದಲ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ 221 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 34 ರನ್‌ಗಳ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ. ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಭಾರತ ತಂಡ ದಿನದಾಟದಂತ್ಯಕ್ಕೆ 3 ವಿಕೆಟ್‌ಗೆ 78 ರನ್‌ ಕಲೆ ಹಾಕಿದೆ. ಈ ಮೂಲಕ ಟೀಮ್ ಇಂಡಿಯಾ 112 ರನ್‌ಗಳ ಮುನ್ನಡೆ ಸಾಧಿಸಿದೆ.

Rahul anchors India A after Siraj Prasidh Star Leads by 112 vs South Africa A

ಟೀಮ್ ಇಂಡಿಯಾ ಪರ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ಅಭಿಮನ್ಯು ಈಶ್ವರನ್‌ (0) ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿರುವ ಸಾಯಿ ಸುದರ್ಶನ್‌ ಎರಡನೇ ಇನಿಂಗ್ಸ್‌ನಲ್ಲಿ 23 ರನ್‌ಗಳಿಗೆ ಔಟ್ ಆದರು. ಕರ್ನಾಟಕದ ಭರವಸೆಯ ಬ್ಯಾಟರ್‌ 24 ರನ್‌ ಬಾರಿಸಿ ಔಟ್ ಆದರು. ಭರವಸೆಯ ಆರಂಭಿಕ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಅಜೇಯ 26 ರನ್‌ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ಕುಲ್‌ದೀಪ್ ಯಾದವ್ ಸಾಥ್ ನೀಡಲಿದ್ದಾರೆ. ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆ ಹಾಕುವ ಕನಸು ಕಾಣುತ್ತಿದ್ದು, ಇದು ಸಾಕಾರವಾಗ ಬೇಕಾದಲ್ಲಿ ರಾಹುಲ್ ಬಿಗ್ ಇನಿಂಗ್ಸ್ ಕಟ್ಟಬೇಕಿದೆ.

ಅಕರ್ಮನ್ ಶತಕ

ದಕ್ಷಿಣ ಆಫ್ರಿಕಾ ಪರ ಜೋರ್ಡಾನ್ ಹರ್ಮನ್ (26), ಪ್ರೆನೆಲನ್ ಸುಬ್ರಯೆನ್ (20) ಕೊಂಚ ಭಾರತೀಯ ಬೌಲರ್‌ಗಳನ್ನು ಕಾಡಿದರು. ಉಳಿದಂತೆ ಮಾರ್ಕ್ಸ್ ಅಕರ್ಮನ್ ಸೊಗಸಾದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಅಲ್ಲದೆ ಹಿನ್ನಡೆಯ ಅಂತರವನ್ನು ಕಡಿಮೆ ಮಾಡುವಲ್ಲಿ ಶ್ರಮಿಸಿದರು. ಇವರು 118 ಎಸೆತಗಳಲ್ಲಿ 17 ಬೌಂಡರಿ, 5 ಸಿಕ್ಸರ್ ಸಹಾಯದಿಂದ 134 ರನ್‌ ಸಿಡಿಸಿ ಮಿಂಚಿದರು.

ಭಾರತದ ಪರ ಮೊಹಮ್ಮದ್‌ ಸಿರಾಜ್‌ ಹಾಗೂ ಆಕಾಶ್‌ ದೀಪ್‌ ತಲಾ 2 ವಿಕೆಟ್‌ ಪಡೆದರು. ಕನ್ನಡಿಗ ಪ್ರಸಿದ್ಧ್ ಕೃಷ್ಣಾ 3 ವಿಕೆಟ್‌ ಉರುಳಿಸಿದರು. ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್, ಹರ್ಷ್ ದುಬೆ ತಲಾ 1 ವಿಕೆಟ್‌ ಕಬಳಿಸಿದರು. ಎರಡನೇ ಇನಿಂಗ್ಸ್‌ನಲ್ಲೂ ಈ ಬೌಲರ್‌ಗಳು ಮನಮೋಹಕ ದಾಳಿ ಸಂಘಟಿಸಿದರೆ, ಭಾರತ ಮತ್ತೊಂದು ಜಯ ಸಾಧಿಸಬೇಕಾದರೆ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡಬೇಕಿದೆ.

Story first published: Friday, November 7, 2025, 20:38 [IST]
Other articles published on Nov 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+