Rahul Dravid: ರಾಹುಲ್ ದ್ರಾವಿಡ್‌ಗೆ ಆಗಿದ್ದು ಏನು? ವೀಲ್‌ಚೇರ್‌ನಲ್ಲಿ ಬಂದಿದ್ದು ಏಕೆ?
ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಟೂರ್ನಿ ಮುಗಿದ ಬಳಿಕ ರಾಹುಲ್ ತಮ್ಮ ಪದವನ್ನು ತ್ಯಾಗ ಮಾಡಿದರು. ಅಲ್ಲದೆ ಮತ್ತೆ ಐಪಿಎಲ್‌ನಲ್ಲಿ ತಮ್ಮ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ಪರ ಅಖಾಡಕ್ಕೆ ಇಳಿದಿದ್ದಾರೆ. ಹೆಡ್ ಕೋಚ್ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಂತೆ ರಾಹುಲ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ.
ದ್ರಾವಿಡ್ ಅವರ ಕೋಚಿಂಗ್ ಅವಧಿಯ ಮೊದಲ ಪಂದ್ಯದಲ್ಲಿ ರಾಜಸ್ಥಾನ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆಡಿದ ಮೊದಲ ಪಂದ್ಯದಲ್ಲಿ ರಾಜಸ್ಥಾನ ಸೋಲು ಕಂಡಿದೆ. ಈಗ ರಾಜಸ್ಥಾನ ತನ್ನ ಎರಡನೇ ಪಂದ್ಯವನ್ನು ಆಡಲಿದ್ದು, ಬರಸಾಪುರದಲ್ಲಿ ತನ್ನ ತವರು ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೂ ಮುನ್ನ ರಾಯಲ್ಸ್ ಫ್ರಾಚೈಸಿ ಒಂದು ವಿಡಿಯೋವನ್ನು ತನ್ನ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದೆ.

ಈ ವಿಡಿಯೋದಲ್ಲಿ ರಾಯಲ್ಸ್ ತಂಡದ ಕೋಚ್ ರಾಹುಲ್ ದ್ರಾವಿಡ್ ವೀಲ್‌ಚೇರ್‌ನಲ್ಲಿ ಕುಳಿತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರನ್ನು ಭೇಟಿ ಆಗುತ್ತಿದ್ದಾರೆ. 52 ವರ್ಷದ ರಾಹುಲ್ ದ್ರಾವಿಡ್ ಕೆಕೆಆರ್ ತಂಡದ ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ಸೇರಿದಂತೆ ಉಳಿದ ಆಟಗಾರರು ರಾಹುಲ್ ದ್ರಾವಿಡ್ ಅವರನ್ನು ಭೇಟಿ ಯಾಗಲು ಬಂದು ಅವರ ಕೈ ಕುಲುಕಿ ಕುಶಲೋಪರಿ ವಿಚಾರಿಸಿದ್ರು.
ಟೀಮ್ ಇಂಡಿಯಾದ ದಿಗ್ಗಜ ಆಟಗಾರರನ್ನು ಕಂಡು ಕೆಕೆಆರ್ ತಂಡದ ಆಟಗಾರರು ಹಿರಿ ಹಿರಿ ಹಿಗ್ಗಿದ್ರು. ಇದೇ ವೇಳೆ ರಾಹುಲ್ ದ್ರಾವಿಡ್ ಇಲೆಕ್ಟ್ರಿಕ್ ವೀಲ್ ಚೇರ್ ಮೇಲೆ ಕುಳಿತು ಅಂಗಳಕ್ಕೆ ಇಳಿದ್ರು.
ರಾಹುಲ್ ದ್ರಾವಿಡ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಲೀಗ್ ಪಂದ್ಯದ ವೇಳೆ ವಿಜಯ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದಾಗ ದ್ರಾವಿಡ್ ಗಾಯಗೊಂಡಿದ್ದರು.
ರಾಹುಲ್ ದ್ರಾವಿಡ್ ಅವರು ಇದೇ ಮೊದಲ ಬಾರಿಗೆ ಪ್ರಸಕ್ತ ಐಪಿಎಲ್‌ನಲ್ಲಿ ತಂಡದೊಂದಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದಕ್ಕೂ ಮೊದಲ ದ್ರಾವಿಡ್ ಎಸ್‌ಆರ್‌ಎಚ್ ವಿರುದ್ಧದ ಪಂದ್ಯವನ್ನು ಟಿವಿಯಲ್ಲಿ ನೋಡಿದ್ದರು. ಹೀಗಾಗಿ ಕೆಕೆಆರ್ ವಿರುದ್ಧದು ಮೊದಲ ಪಂದ್ಯ. ರಾಹುಲ್ ದ್ರಾವಿಡ್ ತಮ್ಮ 39ನೇ ವಯಸ್ಸಿನಲ್ಲಿ ಐಪಿಎಲ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications