ರಾಹುಲ್ ದ್ರಾವಿಡ್ ಕನಸಿನ ತಂಡ ವಿಶ್ವಕಪ್ ಗೆಲ್ಲುವುದೇ?
ಬೆಂಗಳೂರು, ಜ.6: ಐಸಿಸಿ ವಿಶ್ವಕಪ್ ಗೆ ಬಿಸಿಸಿಐ 15 ಜನ ತಂಡವನ್ನು ಆಯ್ಕೆ ಮಾಡಿದೆ. ಇದಕ್ಕೂ ಮುನ್ನ ಒನ್ ಇಂಡಿಯಾ ಸಹ ಸಂಭಾವ್ಯ ತಂಡವನ್ನು ಪ್ರಕಟಿಸಿತ್ತು. ಜತೆಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಸಹ ತಮ್ಮ ಕನಸಿನ ತಂಡ ಘೋಷಣೆ ಮಾಡಿದ್ದರು.
ವೇಗದ ಬೌಲರ್ ಗಳಿಗೆ ಮಣೆ ಹಾಕಿರುವ ಆಯ್ಕೆ ಸಮಿತಿ ಪಟ್ಟಿಯಲ್ಲಿದ್ದ ಹಿರಿಯ ಆಟಗಾರರನ್ನು ಕೈ ಬಿಟ್ಟಿದೆ. ಒನ್ ಇಂಡಿಯಾ ಮತ್ತು ದ್ರಾವಿಡ್ ತಂಡ ಹಾಗೂ ಈಗ ಪ್ರಕಟವಾಗಿರುವ ತಂಡದಲ್ಲಿ ಅಂಥ ಮಹತ್ವದ ವ್ಯತ್ಯಾಸಗಳೇನಿಲ್ಲ.[ದ್ರಾವಿಡ್ ಆಯ್ಕೆ: ವಿಶ್ವಕಪ್ ಗಾಗಿ 15 ಜನರ ಭಾರತ]

ಅದರಲ್ಲೂ ರಾಹುಲ್ ದ್ರಾವಿಡ್ ಹೇಳಿದ್ದ 15 ಜನರ ಪಟ್ಟಿಯನ್ನೇ ಬಿಸಿಸಿಐ ಘೋಷಣೆ ಮಾಡಿರುವುದು ವಿಶೇಷ. ಒನ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದಿದ್ದ ತಮಿಳುನಾಡಿನ ಮುರಳಿ ವಿಜಯ್ ಬದಲು ಬಿಸಿಸಿಐ ಕರ್ನಾಟಕದ ಸ್ಟುವರ್ಟ್ ಬಿನ್ನಿಗೆ ಅವಕಾಶ ಕಲ್ಪಿಸಿದೆ.[ವಿಶ್ವಕಪ್ ಗೆ 15 ಆಟಗಾರರ ಭಾರತ ತಂಡ - ನಮ್ಮ ಆಯ್ಕೆ]
15 ಜನರ ತಂಡದಲ್ಲಿ 7 ಬ್ಯಾಟ್ಸ್ ಮನ್ ಗಳು, ಇಬ್ಬರು ಆಲ್ ರೌಂಡರ್, ಇಬ್ಬರು ಸ್ಪಿನರ್ ಗಳು ಮತ್ತು ನಾಲ್ವರು ವೇಗದ ಬೌಲರ್ ಗಳಿದ್ದಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ವಿಶ್ವಕಪ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ವೇಗದ ಬೌಲರ್ ಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ರಾಹುಲ್ ದ್ರಾವಿಡ್ ಆಯ್ಕೆ ಸಮಿತಿಯಲ್ಲಿ ಇಲ್ಲವಾದರೂ ಸರಳವಾಗಿ ತಂಡ ಪ್ರಕಟ ಮಾಡಿದ್ದರು.[ಪಿಟಿಐ ಚಿತ್ರ]
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications