Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಿತಾಸಕ್ತಿ ಸಂಘರ್ಷ ಆರೋಪ ಮುಕ್ತರಾದ ಕನ್ನಡಿಗ ರಾಹುಲ್ ದ್ರಾವಿಡ್

ದ್ರಾವಿಡ್ ಸಂಘರ್ಷ ಹಿತಾಸಕ್ತಿ ಆರೋಪವನ್ನು ತೆಗೆದುಹಾಕಿದ ಡಿಕೆ ಜೈನ್
Rahul Dravid cleared of conflict of interest charges

ಬೆಂಗಳೂರು, ನವೆಂಬರ್ 14: ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಅವರ ಮೇಲೆ ಹೊರಿಸಲಾಗಿದ್ದ ಸಂಘರ್ಷ ಹಿತಾಸಕ್ತಿ ಆರೋಪವನ್ನು ಬಿಸಿಸಿಐಯ ನೈತಿಕ ಅಧಿಕಾರಿ, ನ್ಯಾಯಮೂರ್ತಿ ಡಿಕೆ ಜೈನ್ ತೆಗೆದು ಹಾಕಿದ್ದಾರೆ.

ಮಧ್ಯ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಂಪಿಸಿಎ) ಆಜೀವ ಸದಸ್ಯ ಸಂಜೀವ್ ಗುಪ್ತಾ ನೀಡಿದ್ದ ದೂರನ್ನು ಗುರುವಾರ (ನವೆಂಬರ್ 14) ವಿಚಾರಣೆ ನಡೆಸಿದ ಡಿಕೆ ಜೈನ್, ದ್ರಾವಿಡ್ ಆರೋಪ ಮುಕ್ತರೆಂದು ಆದೇಶ ಹೊರಡಿಸಿದ್ದಾರೆ.

ಜುಲೈನಲ್ಲಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಅವರು ಎರಡೆರಡು ಪೋಸ್ಟ್‌ನಲ್ಲಿದ್ದು ತಪ್ಪೆಸಗಿದ್ದಾರೆ ಎಂದು ಗುಪ್ತಾ ಅವರು ಆರೋಪಿಸಿದ್ದರು. ದ್ರಾವಿಡ್ ಎನ್‌ಸಿಎ ಅಧ್ಯಕ್ಷರಾಗಿರುವುದಲ್ಲದೆ ಇಂಡಿಯಾ ಸಿಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷರೂ ಆಗಿದ್ದಾರೆ. ಇದು ಐಸಿಸಿ ನಿಯಮ ಬಾಹಿರ ಎಂದು ದೂರಿನಲ್ಲಿ ಹೇಳಲಾಗಿತ್ತು.

ಆದರೆ ದ್ರಾವಿಡ್ ಅವರನ್ನು ಆರೋಪ ಮುಕ್ತಗೊಳಿಸಿರುವ ಜೈನ್, ದ್ರಾವಿಡ್ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಲಿಖಿತ ಪತ್ರದ ಮೂಲಕ ನಿರಾಕರಿಸಿದ್ದಾರೆ. ತಾನು ಬಿಸಿಸಿಐ ಸಲಹೆಯಂತೆ ಎನ್‌ಸಿಎ ಜವಾಬ್ದಾರಿ ಹೊತ್ತಂದಿನಿಂದ ಗೈರು ಹಾಜರಿ ರಜೆ (ಲೀವ್ ಆಫ್ ಆಬ್ಸೆನ್ಸ್) ಪಡೆದು ಇಂಡಿಯಾ ಸಿಮೆಂಟ್‌ನಿಂದ ಸಂಬಳ ಪಡೆದಿಲ್ಲವೆಂದು ದ್ರಾವಿಡ್ ಹೇಳಿರುವುದಾಗಿ ಜೈನ್ ತನ್ನ ತೀರ್ಪಿನ ವೇಳೆ ತಿಳಿಸಿದ್ದಾರೆ.

Story first published: Thursday, November 14, 2019, 23:27 [IST]
Other articles published on Nov 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+