ಭಾರತ 'ಎ' ತಂಡದ ಕೋಚ್ ಆಗಿ ದ್ರಾವಿಡ್ ಮುಂದುವರಿಕೆ
ನವದೆಹಲಿ, ಜೂನ್ 30: ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಮುಂದಿನ ಎರಡು ವರ್ಷಗಳ ವರೆಗೆ ಭಾರತ 'ಎ' ಹಾಗೂ ಅಂಡರ್-19 ತಂಡದ ಕೋಚ್ ಆಗಿ ಮುಂದುವರೆಯಲಿದ್ದಾರೆ.
ಟೀಂ ಇಂಡಿಯಾ 'ಎ' ಹಾಗೂ ಅಂಡರ್-19 ತಂಡದ ಕೋಚ್ ಆಗಿ ಕ್ರಿಕೆಟ್ ದಿಗ್ಗಜ ದ್ರಾವಿಡ್ ಅವರನ್ನೇ ಮುಂದುವರೆಸಲ್ಲಾಗುವುದು ಎದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶುಕ್ರವಾರ(ಜೂನ್ 30)ದಂದು ಪ್ರಕಟಿಸಿದೆ.

ಕಳೆದ ಹತ್ತು ದಿನಗಳ ಹಿಂದೆಯೇ ಈ ಬಗ್ಗೆ ಸುದ್ದಿ ಹರಿದಾಡಿತ್ತು. ಈಗ ಅಧಿಕೃತ ಮಾಹಿತಿ ಹೊರ ಬಂದಿದೆ.ಸಿಎಸಿಯ ಸದಸ್ಯರಾದ ಮಾಜಿ ಕ್ರಿಕೆರ್ಸ್ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಶಿಫಾರಸ್ಸಿನಂತೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
ಜುಲೈನಲ್ಲಿ ಭಾರತ ಅಂಡರ್-19 ತಂಡ ಇಂಗ್ಲೆಂಡ್ ತಂಡದೊಂದಿಗೆ ಎರಡು ನಾಲ್ಕು ದಿನದ ಪಂದ್ಯ ಹಾಗೂ ಐದು ಏಕದಿನ ಪಂದ್ಯಗಳನ್ನು ಆಡಲಿದೆ. ಟೀಂ ಇಂಡಿಯಾ ಎ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಇತ್ತೀಚೆಗೆ ತಂಡವನ್ನು ಪ್ರಕಟಿಸಲಾಗಿದೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications