Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ರಾಹುಲ್‌ ದ್ರಾವಿಡ್‌ಗೆ ಸಿಗುತ್ತಾ ಟಿ20 ವಿಶ್ವಕಪ್‌ ಗೆಲುವಿನ 'ಗುರು' ಕಾಣಿಕೆ?

ಜೂನ್‌ 29 ಶನಿವಾರ, ಟಿ20 ವಿಶ್ವಕಪ್‌ನ ಅಂತಿಮ ಪಂದ್ಯ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಇತ್ತಂಡಗಳು ಅಂತಿಮ ಪಂದ್ಯಕ್ಕಾಗಿ ಸಜ್ಜಾಗಿವೆ.

ವಿಶ್ವಕಪ್‌ ಗೆಲ್ಲುವ ಮೂಲಕ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಅದ್ಧೂರಿ ಬೀಳ್ಕೊಡುಗೆ ನೀಡಲು ರೋಹಿತ್‌ ಶರ್ಮಾ ಬಳಗ ಪ್ಲಾನ್‌ ಮಾಡಿದೆ. ಕೋಚ್‌ ಆಗಿ ರಾಹುಲ್‌ಗೆ ಇದು ಕೊನೆಯ ಟೂರ್ನಿಯಾಗಿದೆ.

Rahul Dravid getting T20 World Cup win gift

ಐಸಿಸಿ ಟ್ರೋಫಿ ಹೊರತಾಗಿ ಹಲವು ಸರಣಿಗಳಲ್ಲಿ ಭಾರತ ದ್ರಾವಿಡ್‌ ಸಾರಥ್ಯದಲ್ಲಿ ವಿಜಯ ಸಾಧಿಸಿದೆ. ಭಾರತೀಯ ಕ್ರಿಕೆಟ್‌ನ ಇತ್ತೀಚಿನ ದಿನಗಳಲ್ಲಿ ಅತ್ಯಂತ ಯಶಸ್ವಿ ಅವಧಿಯಾಗಿದೆ. ಭಾರತ ತಂಡವು ತವರಿನಲ್ಲಿ ಮತ್ತು ವಿದೇಶದಲ್ಲಿ ದ್ವಿಪಕ್ಷೀಯ ಸರಣಿಗಳಲ್ಲಿ ಪ್ರಾಬಲ್ಯ ಸಾಧಿಸಿದೆ.

ದ್ರಾವಿಡ್‌ ನೇತೃತ್ವದಲ್ಲಿ ತವರಿನಲ್ಲಿ ನಡೆದ ಸರಣಿಯು ನ್ಯೂಜಿಲ್ಯಾಂಡ್‌ ಆಗಿತ್ತು. ಅದರಲ್ಲಿ ತಂಡ 3-0 ಅಂತದಲ್ಲಿ ಕ್ಲೀನ್‌ಸ್ವೀಪ್‌ ಮಾಡಿತ್ತು. ಇದಲ್ಲದೇ ಇಂಗ್ಲೆಂಡ್‌, ಆಸ್ಟ್ರೇಲಿಯಾ, ವೆಸ್ಟ್‌ ಇಂಡೀಸ್,ದಕ್ಷಿಣ ಆಫ್ರಿಕಾ ವಿರುದ್ಧವೂ ಸರಣಿ ಜಯಿಸಿದೆ.

2022,2023 ರ ವಿಶ್ವಕಪ್‌ ಸೋಲು

ದ್ರೋಣ ರಾಹುಲ್‌ರ ನೇತೃತ್ವದಲ್ಲಿ ಭಾರತ ತಂಡ ಹಲವು ಸರಣಿಗಳಲ್ಲಿ ಜಯ ಸಾಧಿಸಿದ್ದರೂ ವಿಶ್ವಕಪ್‌ ಟೂರ್ನಿಗಳಲ್ಲಿ ಹಿನ್ನಡೆ ಹೊಂದಿದೆ. 2022 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋಲು ಕಂಡಿತ್ತು.

ಬಳಿಕ 2023 ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಿರಾಸೆ ಅನುಭವಿಸಿತ್ತು. ಇವೆರಡೂ ಲೆಕ್ಕವನ್ನು ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ತೀರಿಸಬೇಕಿದೆ.

ಟೆಸ್ಟ್ ಚಾಂಪಿಯನ್‌ನಲ್ಲಿ ಸಾಧನೆ

ಏಕದಿನ ಮತ್ತು ಟಿ20 ಯಲ್ಲಿ ಮಾತ್ರವಲ್ಲದೇ, ಟೆಸ್ಟ್‌ನಲ್ಲೂ ಭಾರತ ತಂಡ ಮಹತ್ತರ ಸಾಧನೆ ಮಾಡಿದೆ. 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ತಲುಪಿತ್ತು.

ಆಸ್ಟ್ರೇಲಿಯಾ ಎದುರು ಸೋಲು ಕಂಡಿತ್ತು. ದ್ರಾವಿಡ್‌ ನೇತೃತ್ವದಲ್ಲಿ ಆಡಿದ 24 ಪಂದ್ಯಗಳಲ್ಲಿ 14 ರಲ್ಲಿ ಗೆಲುವು ಸಾಧಿಸಿದೆ. 7 ರಲ್ಲಿ ಸೋತಿದೆ.

ಟಿ20 ವಿಶ್ವಕಪ್‌ ಗೆದ್ದು ವಿದಾಯ

ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಫೈನಲ್‌ ತಲುಪಿದ್ದು, ಗೆಲ್ಲುವ ವಿಶ್ವಾಸವಿದೆ. ಈ ಮೂಲಕ ರಾಹುಲ್‌ ದ್ರಾವಿಡ್‌ಗೆ ಅದ್ಧೂರಿ ಬೀಳ್ಕೊಡುಗೆ ನೀಡಲು ತಂಡ ಯೋಜಿಸಿದೆ. ಅಮೆರಿಕ ಮತ್ತು ಕೆರಿಬಿಯನ್‌ ನಾಡಿನಲ್ಲಿ ಟೂರ್ನಿ ಗೆಲುವು ಸಾಧಿಸಿದರೆ 11 ವರ್ಷಗಳ ವಿಶ್ವಕಪ್‌ ಬರವೂ ನೀಡಗಲಿದೆ.

Story first published: Saturday, June 29, 2024, 13:18 [IST]
Other articles published on Jun 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+