ತಮ್ಮ ಬಯೋಪಿಕ್‌ಗೆ ನಾಯಕನನ್ನು ಆಯ್ಕೆ ಮಾಡಿದ ರಾಹುಲ್ ದ್ರಾವಿಡ್: ಯಾರು ಅಂತ ಗೊತ್ತಾದ್ರೆ ಶಾಕ್ ಫಿಕ್ಸ್
ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ತಮ್ಮ ವಿಶಿಷ್ಠ ಬ್ಯಾಟಿಂಗ್ ಶೈಲಿಯಿಂದ ಸದ್ದು ಮಾಡಿದ್ದ, ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಬಳಿಕ ಕೋಚ್ ಆಗಿ ತಮ್ಮ ಛಾಪು ಮೂಡಿಸಿದ್ದಾರೆ. ಇವರ ಕೋಚಿಂಗ್ ಸ್ಕಿಲ್‌ಗೆ ವಿಶ್ವವೇ ತಲೆ ಬಾಗಿದೆ.
ಚಕ್ ದೆ ಇಂಡಿಯಾದಲ್ಲಿ ಶಾರೂಖ್ ಖಾನ್ ಅಂದು ಕೋಚ್ ಆಗಿ ಮಿಂಚಿದ ಚಿತ್ರವನ್ನು ನೀವು ನೋಡಿರುತ್ತಿರಿ. ಆದರೆ ಈ ಚಿತ್ರ ಕ್ರಿಕೆಟ್ ಅಂಗಳಕ್ಕೆ ಹೊಂದಿಕೊಂಡು ಬರುವುದಾದರೆ ಇದರ ಸೂತ್ರಧಾರ ರಾಹುಲ್ ದ್ರಾವಿಡ್. ಅಲ್ಲಿ ಶಾರೂಖ್ ಖಾನ್ ತಮ್ಮ ಮೇಲೆ ಇದ್ದ ಟೀಕೆಗಳಿಗೆ ಹೇಗೆ, ಕೋಚ್ ಆಗಿ ಉತ್ತರ ನೀಡಿದರು. ಹಾಗೇ ರಾಹುಲ್ ಸಹ ಮಾಡಿದ್ದಾರೆ.

ಖ್ಯಾತ ಕೋಚ್
2007ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಿತ್ತು. ಈ ವೇಳೆ ಬ್ಲ್ಯೂ ಬಾಯ್ಸ್ ಲೀಗ್ ಹಂತದಿಂದಲೇ ಟೂರ್ನಿಗೆ ಗುಡ್ ಬೈ ಹೇಳಿತ್ತು. ಆಗ ರಾಹುಲ್ ಅವರ ಮೇಲೆ ಹಲವು ಪ್ರಶ್ನೆಗಳು ಎದ್ದವು. ಆದರೆ ಇದಕ್ಕೆ ರಾಹುಲ್ ಸುಮಾರು 17 ವರ್ಷಗಳ ಬಳಿಕ ಅದೇ ವಿಂಡೀಸ್‌ನ ಬಾಬ್ರಡೋಸ್ ಅಂಗಳದಲ್ಲಿ ಉತ್ತರ ನೀಡಿದ್ದಾರೆ. ತಾನೋಬ್ಬ ಚಾಂಪಿಯನ್ ಕೋಚ್ ಎಂದು ಸಾಬೀತು ಪಡಿಸಿದ್ದಾರೆ.
ಯುವಕರ ಪಾಲಿನ ಆಶಾ ಕಿರಣ
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ದ್ರಾವಿಡ್, ಅಂಡರ್19 ಹಾಗೂ ಭಾರತ ಎ ತಂಡಗಳಿಗೆ ಕೋಚಿಂಗ್ ಮಾಡಿದ ಅನುಭವಿ. ಇವರಿಗೆ ಬಿಸಿಸಿಐ ಕೋಚ್ ಆಗುವಂತೆ ಮನವಿ ಮಾಡಿತ್ತು. ಇದಕ್ಕೆ ಆರಂಭದಲ್ಲಿ ಒಲ್ಲೆ ಎಂದಿದ್ದ ರಾಹುಲ್ ಕೊನೆಗೆ ಹಸಿರು ನಿಶಾನೆ ತೋರಿದರು. ಈಗ ರಾಹುಲ್ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದ ಕೋಚ್.

ಅಂದಹಾಗೆ ಕ್ರಿಕೆಟ್ ಆಟಗಾರರ ಮೇಲೆ ಬಯೋಪಿಕ್ ತೆರೆಯ ಮೇಲೆ ಅಬ್ಬರಿಸಿವೆ. ಈ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಅವರ ಜೀವನಾಧಾರಿತ ಚಿತ್ರಗಳು ಬಂದಿವೆ. ಇನ್ನು ಯುವರಾಜ್ ಸಿಂಗ್ ಬಯೋಪಿಕ್ ಆಗಲು ಸಿದ್ಧತೆ ನಡೆದಿದೆ. ಈ ಬೆನ್ನಲ್ಲೆ ರಾಹುಲ್ ದ್ರಾವಿಡ್ ಅವರಿಗೆ ಸಮಾರಂಭ ಒಂದರಲ್ಲಿ ಒಂದು ಪ್ರಶ್ನೆ ಕೇಳಲಾಯಿತು.
ಬಯೋಪಿಕ್ ಬಂದರೆ ಹೀರೊ ಯಾರು?
ನಿಮ್ಮ ಬಗ್ಗೆ ಬಯೋಪಿಕ್ ಮಾಡಿದರೆ ಹೀರೊ ಯಾರು ಆಗಬೇಕು ಎಂದು ಕೇಳಿದರು. ಇದಕ್ಕೆ ರಾಹುಲ್ ದ್ರಾವಿಡ್ ಹೇಳಿದ ಉತ್ತರ ಕೇಳಿ ಎಲ್ಲರ ನಗಲು ಆರಂಭಿಸಿದರು. ಅಂದಹಾಗೆ ರಾಹುಲ್ ದ್ರಾವಿಡ್, ಈ ಅವಕಾಶವನ್ನು ನಾನು ಬೇರೆಯವರಿಗೆ ಏಕೆ ಬಿಟ್ಟುಕೊಡಲಿ. ಉತ್ತಮ ಸಂಭಾವನೆಯನ್ನು ನೀಡುವುದಾದರೆ ನಾನೇ ನಟಿಸುವೆ ಎಂದು ತಿಳಿಸಿದರು. ಇದನ್ನು ಕೇಳಿದ ಫ್ಯಾನ್ಸ್ ನಕ್ಕರು.
ರಾಹುಲ್ ದ್ರಾವಿಡ್ ತಾವು ಸಹ ಬಣ್ಣ ಹಚ್ಚಲು ರೆಡಿ ಆಗಿರುವುದಾಗಿ ತಿಳಿಸಿದ್ದಾರೆ. ಈ ಮಾತನ್ನು ಕೇಳಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆದರೆ ಇದನ್ನು ರಾಹುಲ್ ದ್ರಾವಿಡ್ ಕಾರ್ಯಕ್ರಮದಲ್ಲಿ ತಮಾಶೆಯಾಗಿ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications