ಟೀಂ ಇಂಡಿಯಾ ಹಿರಿಯ ಆಟಗಾರರಿಗೆ ದ್ರಾವಿಡ್ ಸಲಹೆ ಸಿಗಲ್ಲ!
ನವದೆಹಲಿ, ಜುಲೈ 23: ಟೀಂ ಇಂಡಿಯಾ ಹಿರಿಯ ತಂಡದ ಪರ ಸಲಹೆಗಾರರಾಗಿ ರಾಹುಲ್ ದ್ರಾವಿಡ್ ಅವರು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಕ್ರಿಕೆಟ್ ಆಡಳಿತ ಸಮಿತಿ(ಸಿಒಎ) ಮುಖ್ಯಸ್ಥ ವಿನೋದ್ ರೈ ಹೇಳಿದ್ದಾರೆ.
ಆದರೆ, ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಅವರು ಟೀಂ ಇಂಡಿಯಾ ಸಲಹೆಗಾರರಾಗಿ ವಿದೇಶಿ ಪ್ರವಾಸದ ವೇಳೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಆದರೆ, ಜಹೀರ್ ಖಾನ್ ಅವರ ಗುತ್ತಿಗೆ ಸಮಸ್ಯೆ ಬಗೆಹರಿಯಬೇಕಿದೆ. ಐಪಿಎಲ್ ಫ್ರಾಂಚೈಸಿ ಡೆಲ್ಲಿ ಡೇರ್ ಡೆವಿಲ್ಸ್ ನ ನಾಯಕರಾಗಿ ಆಡುತ್ತಿದ್ದಾರೆ. ಈ ಗುತ್ತಿಗೆಗೆ ಮುಕ್ತಾಯ ಹಾಡಿದರೆ ಮುಂದಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಜಹೀರ್ ಅವರು ಸಲಹೆಗಾರರಾಗಿ ತಂಡವನ್ನು ಸೇರಿಕೊಳ್ಳಬಹುದು ಸಿಇಒ ರಾಹುಲ್ ಜೋಹ್ರಿ ಕೂಡಾ ಸ್ಪಷ್ಟಪಡಿಸಿದ್ದಾರೆ.
ಟೀಂ ಇಂಡಿಯಾ ಎ ಹಾಗೂ ಅಂಡರ್ 19 ತಂಡಗಳ ಕೋಚಿಂಗ್ ನಲ್ಲಿ ರಾಹುಲ್ ದ್ರಾವಿಡ್ ಅವರು ನಿರತರಾಗಿದ್ದು, ಅವರು ಸದ್ಯ ಹಿರಿಯ ತಂಡದ ಪರ ಸಲಹೆಗಾರರಾಗಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿಎಸಿ ಮುಖ್ಯಸ್ಥ ವಿನೋದ್ ಹೇಳಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications