NCA ಗ್ರೌಂಡ್ ಸ್ಟಾಫ್ ಜೊತೆಗೆ ಕ್ರಿಕೆಟ್ ಆಡಿದ ರಾಹುಲ್ ದ್ರಾವಿಡ್: ವಿಡಿಯೋ ವೈರಲ್
ಟೀಮ್ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಎಷ್ಟು ಸಿಂಪಲ್ ಆಗಿ ಇದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇತ್ತಿಚಿಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ಹೆಂಡತಿಯೊಂದಿಗೆ ಮತಗಟ್ಟೆಗೆ ಬಂದು ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದರು. ಈ ದೃಶ್ಯ ಆಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿತ್ತು.
ರಾಹುಲ್ ದ್ರಾವಿಡ್ ಮಗ ಸಮಿತ್ ಕೂಚ್ ಬಿಹಾರಿ ಟೂರ್ನಿಯಲ್ಲಿ ಕರ್ನಾಟಕದ ಪರ ಆಡುವುದನ್ನು ಕಣ್ಣು ತುಂಬಿಕೊಳ್ಳಲು ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಅವರು ಯಾವುದೇ ವಿಶೇಷ ಸವಲತ್ತುಗಳನ್ನು ಕೇಳದೆ ಸಾಮಾನ್ಯರಂತೆ ಸ್ಟ್ಯಾಂಡ್‌ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಿ ಖುಷಿ ಪಟ್ಟಿದ್ದರು. ಈಗ ಇದರಂತೆ ಮತ್ತೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋ
ಈ ವಿಡಿಯೋದಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಬೌಲಿಂಗ್ ಮಾಡುವುದನ್ನು ಕಾಣಬಹುದು. ಇವರ ಬೌಲಿಂಗ್ ಆಕ್ಷನ್ ನೋಡಿ ಅಭಿಮಾನಿಗಳು ಸಹ ಥ್ರಿಲ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಅಲನ್ ಡೊನಾಲ್ಡ್ ರೀತಿಯ ಬೌಲಿಂಗ್ ಆಕ್ಷನ್‌ನೊಂದಿಗೆ ಬೌಲ್ ಮಾಡಿದ ರಾಹುಲ್ ದ್ರಾವಿಡ್ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಗ್ರೌಂಡ್ ಸ್ಟಾಫ್ ಜೊತೆ ಆಟ
ದ್ರಾವಿಡ್ ಸದ್ಯ ಬೆಂಗಳೂರಿನಲ್ಲಿದ್ದಾರೆ. ಟೀಮ್ ಇಂಡಿಯಾದ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ದ್ರಾವಿಡ್, ಕುಟುಂಬಸ್ಥರ ಜೊತೆ ಟೈಮ್ ಸ್ಪೆಂಡ್ ಮಾಡುತ್ತಾ ಇದ್ದಾರೆ. ಇದೇ ವೇಳೆ ದ್ರಾವಿಡ್ ಬೆಂಗಳೂರಿನಲ್ಲಿರುವ ಎನ್‌ಸಿಎಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಗ್ರೌಂಡ್ ಸ್ಟಾಫ್ ಅಲ್ಲಿ ಎನ್‌ಸಿಎ ಹೊರಗಡೆ ಕ್ರಿಕೆಟ್ ಪಂದ್ಯವನ್ನು ಆಡುತ್ತಿದ್ದರು. ಇದನ್ನು ಕಂಡು ಮಾಜಿ ಕೋಚ್ ತಾನು ರೆಡಿ ಎಂದು ಅಖಾಡ ಪ್ರವೇಶಿಸಿದರು.
ರಾಹುಲ್ ದ್ರಾವಿಡ್, ಪಂದ್ಯದ ವೇಳೆ ಬೌಲಿಂಗ್ ಮಾಡಿ ಗಮನ ಸೆಳೆದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಧಮಾಕೆದಾರ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ದ್ರಾವಿಡ್, ಈಗ ಬೌಲಿಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ.
ಜೆಂಟಲ್ ಮ್ಯಾನ್
ದ್ರಾವಿಡ್ ಸಿಂಪಲ್ ಸಿಟಿ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲವೇ ಇಲ್ಲ. ಇತ್ತೀಚಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಾಗ, ಬಿಸಿಸಿಐ ತಂಡದ ಪ್ರತಿ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ನಗದು ಬಹುಮಾನ ಘೋಷಣೆ ಮಾಡಿತು. ಈ ವೇಳೆ ಕೋಚ್ ಹಾಗೂ ಆಟಗಾರರಿಗೆ ಒಂದೇ ಮೊತ್ತದ ಬಹುಮಾನವನ್ನು ಬಿಸಿಸಿಐ ನೀಡಿತ್ತು.
ಆದರೆ ಬಿಸಿಸಿಐ ನಿರ್ಧಾರಕ್ಕೆ ದ್ರಾವಿಡ್ ಇದಕ್ಕೆ ಒಪ್ಪಲಿಲ್ಲ. ತಮ್ಮ ಕೋಚ್ ಸಿಬ್ಬಂದಿಗೆ ಎಷ್ಟು ಬಹುಮಾನ ನೀಡಿದ್ದಿರೋ ಅಷ್ಟೇ, ತಮಗೂ ನೀಡಿ ಸಾಕು ಎಂದು ಬಿಸಿಸಿಐಗೆ ಮನವಿ ಮಾಡಿದರು. ಬಿಸಿಸಿಐ ಇವರ ಮನವಿಗೆ ಪುರಸ್ಕರಿಸಿತು. ದ್ರಾವಿಡ್ ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಅಂಡರ್ 19 ವಿಶ್ವಕಪ್ ಗೆದ್ದಾಗಲೂ ತಂಡಕ್ಕೆ ಬಹುಮಾನ ಘೋಷಿಸಿದ್ದರು. ಆಗಲೂ ಕೋಚ್ ದ್ರಾವಿಡ್ ಎಲ್ಲರಿಗೂ ನೀಡಿದಷ್ಟೇ ಹಣವನ್ನು ನೀಡುವಂತೆ ಸೂಚಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications