IPL 2025: ರಾಜಸ್ಥಾನ ರಾಯಲ್ಸ್ ತಂಡದ ಜವಾಬ್ದಾರಿ ಹೊತ್ತ ಚಾಂಪಿಯನ್ ಕೋಚ್
ಭಾರತ ತಂಡವನ್ನ ಟಿ20 ವಿಶ್ವ ಚಾಂಪಿಯನ್ ಮಾಡಿದ ನಂತರ, ಇದೀಗ ರಾಹುಲ್ ದ್ರಾವಿಡ್ ಐಪಿಎಲ್‌ನಲ್ಲಿ ತನ್ನ ಹಳೆಯ ತಂಡಕ್ಕೆ ಪ್ರಶಸ್ತಿಯನ್ನು ತಂದು ಕೊಡಲು ಸಜ್ಜಾಗಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ದ್ರಾವಿಡ್ ರಾಜೀನಾಮೆ ನೀಡಿದ್ದರು.
ದ್ರಾವಿಡ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಗೌತಮ್ ಗಂಭೀರ್ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ದ್ರಾವಿಡ್ ಬಹಳ ದಿನಗಳ ನಂತರ ಐಪಿಎಲ್‌ಗೆ ಮರಳಿದ್ದಾರೆ. ಅವರು ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ.

ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, 2025ರ ಐಪಿಎಲ್ ಟೂರ್ನಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಒಪ್ಪಂದಕ್ಕೆ ರಾಹುಲ್ ದ್ರಾವಿಡ್ ಸಹಿ ಹಾಕಿದ್ದಾರೆ. ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ಮಾತುಕತೆ ಆರಂಭಿಸಿದ್ದಾರೆ. ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಜೊತೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆನೇಕ ಬಾರಿ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಹೊಗಳಿಕೊಂಡಿದ್ದಾರೆ.
ರಾಜಸ್ಥಾನದೊಂದಿಗೆ ರಾಹುಲ್ ಸಂಬಂಧ
ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ದ್ರಾವಿಡ್ ಅಳವಾದ ಸಂಬಂಧ ಹೊಂದಿದ್ದಾರೆ. ಅವರು 2012 ಮತ್ತು 2013 ರಲ್ಲಿ ರಾಜಸ್ಥಾನ ತಂಡದ ನಾಯಕರಾಗಿದ್ದರು. ಬಳಿಕ 2014 ಮತ್ತು 2015 ರ ಋತುಗಳಲ್ಲಿ ತಂಡದ ನಿರ್ದೇಶಕರಾಗಿ ಮತ್ತು ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು.
ಆದರೆ 2016ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ಗೆ (ಈಗ ಡೆಲ್ಲಿ ಕ್ಯಾಪಿಟಲ್ಸ್) ತೆರಳಿದ್ದರು. ಇದಾದ ಬಳಿಕ ದ್ರಾವಿಡ್ ಅವರನ್ನು 2019ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮಖ್ಯಸ್ಥರಾಗಿ ನೇಮಿಸಲಾಗಿತ್ತು. 2021ರಲ್ಲಿ ರವಿಶಾಸ್ತ್ರಿ ಅವರ ಟೀಮ್ ಇಂಡಿಯಾದ ಕೋಚ್ ಸ್ಥಾನಕ್ಕೆ ನೇಮಕಗೊಂಡಿದ್ದರು. .
ದ್ರಾವಿಡ್‌ಗೆ ವಿಕ್ರಮ್ ರಾಥೋಡ್ ಸಾಥ್
ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಲಿರುವ ರಾಹುಲ್ ದ್ರಾವಿಡ್ ಅವರಿಗೆ ಸಹಾಯಕ ಕೋಚ್ ಆಗಿ ವಿಕ್ರಮ್ ಸಾಥ್ ನೀಡಲಿದ್ದಾರೆ. ಇದರೊಂದಿಗೆ ಶ್ರೀಲಂಕಾದ ಮಾಜಿ ವಿಕೆಟ್‌ಕೀಪರ್ -ಬ್ಯಾಟರ್ ಕುಮಾರ ಸಂಗಕ್ಕಾರ ರಾಜಸ್ಥಾನ ರಾಯಲ್ಸ್ ತಂಡದ ನಿರ್ದೇಶಕರಾಗಲಿದ್ದಾರೆ. ಐಪಿಎಲ್ 2025 ರಲ್ಲಿ ಈ ಜೋಡಿ ಹೇಗೆ ತಂಡವನ್ನು ಗೆಲುವಿನ ಕಡೆ ಮುನ್ನಡೆಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications