ನವದೆಹಲಿ: ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶಗಳ ನಡುವಣ ಮೊದಲ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸ್ಟಾರ್ ಆಟಗಾರರು ಬಹುದಿನಗಳ ಬಳಿಕ ಅಂಗಳ ಪ್ರವೇಶಿಸಿದ್ದಾರೆ. ಇನ್ನು ಗೌತಮ್ ಗಂಭೀರ್ ಅವರಿಗೂ ಇದು ಮೊಹತ್ವದ ಟೆಸ್ಟ್ ಆಗಿದೆ.
ಗೌತಮ್ ಗಂಭೀರ್ ಅವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಟಿ20 ಹಾಗೂ ಏಕದಿನ ಸರಣಿಯನ್ನು ಆಡಿದೆ. ಆದರೆ ಗೌತಮ್ ಮುಂದಾಳತ್ವದಲ್ಲಿ ಟೆಸ್ಟ್ ಸರಣಿ ಆಡಿರಲಿಲ್ಲ. ಹೀಗಾಗಿ ಭಾರತದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿ, ಟೀಮ್ ಇಂಡಿಯಾಕ್ಕೆ ಹಾಗೂ ಗೌತಮ್ ಗಂಭೀರ್ ಅವರಿಗೆ ತುಂಬ ಮಹತ್ವದಾಗಿದೆ.

ಟೀಮ್ ಇಂಡಿಯಾದ ಯಶಸ್ವಿ ಕೋಚ್ ರಾಹುಲ್ ದ್ರಾವಿಡ್ ಅವರಿಂದ ತೆರವಾದ ಸ್ಥಾನದ ಮೇಲೆ ಗೌತಮ್ ಗಂಭೀರ್ ಕುತಿದ್ದಾರೆ. ಟೀಮ್ ಇಂಡಿಯಾದ ಹಾಲಿ ಕೋಚ್ ಗೌತಮ್ ಗಂಭೀರ್ ಅವರ ಬಗ್ಗೆ ಮಾಜಿ ಕೋಚ್ ರಾಹುಲ್ ದ್ರಾವಿಡ್ ತುಟಿ ಬಿಚ್ಚಿದ್ದಾರೆ. ಟೀಮ್ ಇಂಡಿಯಾ ಕೋಚ್ ಬಗ್ಗೆ ದಿಗ್ಗಜ ಆಟಗಾರ ಹೇಳಿದ್ದೇನು ಇಲ್ಲಿದೆ ನೋಡಿ.
ಟೀಮ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಗೌತಮ್ ಗಂಭೀರ್ ಆಟಗಾರನಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರು ಭಾರತದ ಪರ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಇದಲ್ಲದೇ ಕೋಚಿಂಗ್ ಅನುಭವವೂ ಚೆನ್ನಾಗಿದೆ. ಗೌತಮ್ ಗಂಭೀರ್ ಅವರ ಅನುಭವ ಮತ್ತು ಜ್ಞಾನವು ತಂಡಕ್ಕೆ ತುಂಬಾ ಉಪಯುಕ್ತವಾಗಲಿದೆ. ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ನಂತರ ಟೀಂ ಇಂಡಿಯಾದ ಆಟಗಾರರಿಗೆ ಲಾಭವಾಗಲಿದೆ ಎಂದು ದ್ರಾವಿಡ್ ತಿಳಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿಯಲ್ಲಿ ಟೀಮ್ ಇಂಡಿಯಾ ಅಮೋಘ ಸಾಧನೆ ಮಾಡಿದೆ. ಅಲ್ಲದೆ ಏಕದಿನ ವಿಶ್ವಕಪ್‌ನಲ್ಲಿ ಅಜೇಯ ಓಟವನ್ನು ಮುಂದುವರೆಸಿ ಫೈನಲ್‌ಗೆ ಪ್ರವೇಶ ಪಡೆದಿತ್ತು. ಆದರೆ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಆಸೀಸ್ ವಿರುದ್ಧ ರೋಹಿತ್ ಪಡೆ ನಿರಾಸೆಯನ್ನು ಅನುಭವಿಸಿತ್ತು. ಇನ್ನು ಇತ್ತೀಚಿಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದೆ. ರೋಹಿತ್ ಶರ್ಮಾ ನಾಯಕತ್ವ, ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅಡಿ, ಟೀಮ್ ಇಂಡಿಯಾ ಟಿ20 ವಿಶ್ವಕಪ್ 2024ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಟೀಮ ಇಂಡಿಯಾ 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ಗೆ ಮುತ್ತಿಟ್ಟು ಇತಿಹಾಸ ನಿರ್ಮಿಸಿದೆ.

ಟಿ20 ವಿಶ್ವಕಪ್ ಮುಗಿದ ಬಳಿಕ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರ ಅವಧಿ ಮುಗಿದಿದ್ದು, ಇವರ ಸ್ಥಾನದಲ್ಲಿ ಗೌತಮ್ ಗಂಭೀರ್ ಕಾಣಿಸಿಕೊಂಡಿದ್ದಾರೆ.