Rahul Dravid: ರಿಷಭ್ ಪಂತ್ ಟೆಸ್ಟ್ ಆಟಕ್ಕೆ ದ್ರಾವಿಡ್ ಬಹುಪರಾಕ್!
ವಿಶ್ವ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಭಾರೀ ಸದ್ದು ಮಾಡುತ್ತಿದ್ದಾರೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ದಾಖಲೆ ಬೆಲೆ ಬಿಡ್ ಆಗಿದ್ದರು. ಪಂತ್ ಅವರಿಗೆ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 27 ಕೋಟಿ ರೂ. ನೀಡಿತ್ತು. ಇದೀಗ ಅಡಿಲೇಡ್‌ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ತಮ್ಮ ಸ್ಫೋಟಕ ಶೈಲಿಯ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅಡಿಲೇಡ್ ಟೆಸ್ಟ್ ಪಂದ್ಯಕ್ಕೂ ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರು ರಿಷಭ್ ಪಂತ್ ಬಗ್ಗೆ ಗುಣಗಾನ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ರಾಹುಲ್ ದ್ರಾವಿಡ್ ಅವರು ಪಂತ್ ಟೆಸ್ಟ್ ಕ್ರಿಕೆಟ್ ಆಡುವ ಕುರಿತು ಮಾತನಾಡಿದ್ದಾರೆ. 'ರಿಷಭ್ ಅವರ ಪ್ರದರ್ಶನ ಅದ್ಭುತವಾಗಿದೆ. ಗಬ್ಬಾದಲ್ಲಿ ನಡೆದ ಆ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 89 ರನ್ ಗಳನ್ನು ರಿಷಭ್ ಪಂತ್ ಗಳಿಸಿದ್ದರು. ಈ ವೇಳೆ ಭಾರತ ತಂಡ ಸಂಕಷ್ಟದಲ್ಲಿತ್ತು. ಆ ರೀತಿಯ ಒತ್ತಡದಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡುವುದು ನಿಜಕ್ಕೂ ಅಚ್ಚರಿ ಮೂಡಿಸಿತು' ಎಂದು ಹೇಳಿದ್ದಾರೆ.

ಧೋನಿ ನಂತರ ಪಂತ್
ರಿಷಭ್ ಪಂತ್ ಅವರು ವಿಶೇಷ ಕ್ರಿಕೆಟಿಗ. ಅವರು ಟೆಸ್ಟ್ ಕ್ರಿಕೆಟ್ ಆಟವನ್ನು ಸುಲಭಗೊಳಿಸಿದ್ದಾರೆ. ನನ್ನ ಪ್ರಕಾರ, ಧೋನಿ ನಿರ್ಗಮನದ ನಂತರ ಭಾರತ ತಂಡದಲ್ಲಿ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂದು ಊಹಿಸಿಕೊಳ್ಳುವುದು ಕಷ್ಟವಾಗಿತ್ತು. ಈಗ ರಿಷಭ್ ಪಂತ್ ಅವರು ಧೋನಿ ಸ್ಥಾನವನ್ನು ತುಂಬಿದ್ದಾರೆ ಎಂದು ಹೇಳುವುದಿಲ್ಲ. ಆದರೆ ಖಂಡಿತವಾಗಿಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿದೆ ಎಂದು ರಿಷಭ್ ಪಂತ್ ಅವರನ್ನು ರಾಹುಲ್ ದ್ರಾವಿಡ್ ಹೊಗಳಿದ್ದಾರೆ.
ಕಾಂಗೂರು ಪಡೆಗೆ ಪಂತ್ ಭೀತಿ
ಆಸ್ಟ್ರೇಲಿಯಾ ವಿರುದ್ಧ ರಿಷಭ್ ಪಂತ್ ಅವರ ದಾಖಲೆ ಉತ್ತಮವಾಗಿದೆ. ಅವರು 8 ಟೆಸ್ಟ್‌ಗಳಲ್ಲಿ 55.16 ಸರಾಸರಿಯಲ್ಲಿ 662 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 2 ಅರ್ಧ ಶತಕ ಮತ್ತು 1 ಶತಕ ಗಳಿಸಿದ್ದಾರೆ. ಈಗ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಂತ್ ಮತ್ತೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications