ಯುವ ಕ್ರಿಕೆಟಿಗರ ಮಾನಸಿಕ ಸಮಸ್ಯೆಗೆ ವೃತ್ತಿಪರರಿಂದ ಪರಿಹಾರ: ದ್ರಾವಿಡ್

ಗುತ್ತಿಗೆ ರಹಿತ ಮತ್ತು 19 ವರ್ಷದೊಳಗಿನ ಕ್ರಿಕೆಟಿಗರ ಮಾನಸಿಕ ಸಮಸ್ಯೆಗಳ ಬಗ್ಗೆ ಗಮನಹರಿಸಿರುವುದಾಗಿ ರಾಹುಲ್ ದ್ರಾವಿಡ್ ಹೇಳಿದ್ದಾರೆ. ವೃತ್ತಿಪರರ ಸಹಾಯದ ಅಂತಾ ಸಮಸ್ಯೆಗಳಿದ್ದ ಆಟಗಾರರಿಗೆ ಪರಿಹಾರವನ್ನು ನೀಡಲಾಗಿದೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ.
'ಇತ್ತೀಚಿನ ದಿನಗಳಲ್ಲಿ ಯುವ ಕ್ರಿಕೆಟಿಗರು ಎದುರಿಸುತ್ತಿರುವ ಮಾನಸಿಕ ತೊಂದರೆಗಳನ್ನು ನಿಭಾಯಿಸುವ ಪರಿಣತಿ ನಮಗಿಲ್ಲವೆಂದು ಒಬ್ಬ ಮಾಜಿ ಕ್ರಿಕೆಟಿಗ ಹಾಗೂ ತರಬೇತುದಾರನಾಗಿ ಒಪ್ಪಿಕೊಳ್ಳುತ್ತೇನೆ. ಆ ಕಾರಣ, ವೃತ್ತಿಪರರನ್ನು ಸಂಪರ್ಕಿಸಲು ಗುತ್ತಿಗೆ ರಹಿತ ಮತ್ತು 19 ವರ್ಷದೊಳಗಿನ ಕ್ರಿಕೆಟ್ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ.
ಮಾನಸಿಕ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುವುದು ಈ ಹಿಂದೆ ಕಳಂಕವೆಂಬಂತೆ ನೋಡಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಇಂದು ಒತ್ತಡದ ವಾತಾವರಣವಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಲಾಕ್‌ಡೌನ್ ಸಮಯವು ಕ್ರಿಕೆಟಿಗರಿಗೆ ಅನಿಶ್ಚಿತತೆಯ ಅವಧಿಯಾಗಿದ್ದು, ಅವರ ಮೇಲೆ ಮಾನಸಿಕವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಗುತ್ತಿಗೆ ರಹಿತ ಮತ್ತು 19 ವರ್ಷದೊಳಗಿನ ಕ್ರಿಕೆಟಿಗರಿಗೆ ಮಾನಸಿಕ ಆರೋಗ್ಯ ತರಬೇತಿ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಕ್ರಿಕೆಟ್ ಮತ್ತು ಯುವ ಕ್ರಿಕೆಟಿಗರ ಮನಃಸ್ಥಿತಿ ಕುರಿತು ದ್ರಾವಿಡ್ ಮಾತನಾಡಿದರು. ಈಗಿನ ಯುವ ಕ್ರಿಕೆಟಿಗರು ಭಾರತ ತಂಡಕ್ಕೆ ಆಯ್ಕೆಯಾಗಲೇಬೇಕು ಎಂದು ತಮಗೆ ತಾವೇ ಒತ್ತಡವನ್ನು ಹಾಕಿಕೊಳ್ಳುತ್ತಾರೆ. ಆದರೆ ಅದು ಸಾಧ್ಯವಾಗದಿದ್ದಾಗ ಕಾಯುವಿಕೆಯ ಒತ್ತಡವನ್ನು ನಿಭಾಯಿಸಲು ಅವರು ವಿಫಲರಾಗುತ್ತಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications