Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮತ್ತೆ ಸದ್ದು ಮಾಡಿರುವ ಸಮಿತ್‌ ದ್ರಾವಿಡ್‌ ಬ್ಯಾಟಿಂಗ್: ಇಲ್ಲಿದೆ ವಿಡಿಯೋ

ಭಾರತಕ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್, ಅವರ ಮಗ ಸಮಿತ್‌ ದ್ರಾವಿಡ್‌ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮಾಜಿ ಕ್ರಿಕೆಟಿಗನ ಮಗ ಸಮಿತ್ ದ್ರಾವಿಡ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಮಹಾರಾಜ್ ಟ್ರೋಫಿ ಟಿ20 ಕ್ರಿಕೆಟ್‌ನ ತಮ್ಮ ಚೊಚ್ಚಲ ಪಂದ್ಯದಲ್ಲೇ ಅಮೋಘ ಪ್ರದರ್ಶನ ನೀಡಿದ್ದಾರೆ. ಸಮಿತ್ ದ್ರಾವಿಡ್ ಅವರ ಈ ಸ್ಫೋಟಕ ಶೈಲಿಯನ್ನು ಕಂಡು ಅಭಿಮಾನಿಗಳು ಶ್ಲಾಘಿಸಿದ್ದಾರೆ..

ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಸಮಿತ್ ದ್ರಾವಿಡ್ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಅವರು ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾಗಿದ್ದರೂ, ಮೈದಾನದಲ್ಲಿ ಅವರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಗಮನ ಸೆಳೆದರು. ರಾಹುಲ್ ದ್ರಾವಿಡ್ ಅವರ ಪುತ್ರ ಬಾರಿಸಿದ ಈ ಬಿಗ್ ಸಿಕ್ಸರ್‌ಗಳನ್ನು ಕಂಡು ಅಭಿಮಾನಿಗಳು ಫುಲ್‌ ಖುಷ್ ಆಗಿದ್ದಾರೆ.

Rahul Dravid s Son Samit Smashes Stunning Six in Maharaja T20 Match Video Goes Viral

ಸಮಿತ್ ದ್ರಾವಿಡ್‌ ಅವರ ಈ ಸುಂದರ ಹೊಡೆತವನ್ನು ಕಂಡು ಎಲ್ಲರೂ ಫುಲ್ ಖುಷ್. ಇವರನ್ನು ಮಹಾರಾಜ ಟ್ರೋಫಿಯ ಪಂದ್ಯದಲ್ಲಿ ಆಯ್ಕೆ ಮಾಡಿದ್ದಕ್ಕೆ ಪ್ರಶ್ನೆಗಳನ್ನು ಎತ್ತಲಾಗಿತ್ತು. ಆದರೆ ಸಮಿತ್‌ ಆಡಿದ ಧಾಟಿಯನ್ನು ಕಂಡು ಟೀಕಾಕಾರರು ಸಹ ಹೊಗಳಲು ಆರಂಭಿಸಿದ್ದಾರೆ.

ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಕಾದಾಟ ನಡೆಸಿದವು. ಈ ವೇಳೆ ಮೈಸೂರು ಪರ ಬ್ಯಾಟಿಂಗ್ ಮಾಡಿದ ಸಮಿತ್‌, 7 ಎಸೆತಗಳನ್ನು ಎದುರಿಸಿದರು. ಈ ವೇಳೆ ಒಂದು ಅಮೋಘ ಸಿಕ್ಸರ್‌ ಬಾರಿಸಿ ಮಿಂಚಿದರು. ಕಾಲಿನ ಮೇಲಗಡೆ ಬಂದ ಎಸೆತವನ್ನು ಲಾಂಗ್‌ ಆನ್‌ನಲ್ಲಿ ಅಮೋಘ ಸಿಕ್ಸರ್‌ ಬಾರಿಸಿದರು.

ಪಂದ್ಯದ ಫಲಿತಾಂಶ ಹೇಗಿತ್ತು?

ಈ ಪಂದ್ಯದಲ್ಲಿ ಟಾಸ್‌ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮೈಸೂರು ವಾರಿಯರ್ಸ್‌ಗೆ ಬ್ಯಾಟಿಂಗ್ ಮಾಡಲು ಸೂಚಿಸಿತು. ಮೈಸೂರು ವಾರಿಯರ್ಸ್‌ ಪರ ಮನೋಜ್ ಭಂಡಾರೆ, ಹರ್ಷಿಲ್ ಧರ್ಮಾನಿ ಅರ್ಧಶತಕ ಬಾರಿಸಿ ಮಿಚಿದರು. ಇವರ ಅಮೋಘ ಇನಿಂಗ್ಸ್‌ ಸಹಾಯದಿಂದ ಮೈಸೂರು ತಂಡ 18 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. 183 ರನ್‌ಗಳ ಗುರಿ ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ 17.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವು ಮುಟ್ಟಿತು. ವಿಜೇತ ತಂಡದ ಪರ
51 ರನ್ ಗಳಿಸಿ ಅಬ್ಬರಿಸಿದರು.

Story first published: Saturday, August 17, 2024, 19:15 [IST]
Other articles published on Aug 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+