'ದ್ರಾವಿಡ್ ಸರ್ ಯಾವತ್ತಿಗೂ ನನ್ನ ಸ್ವಾಭಾವಿಕ ಆಟ ನಿಗ್ರಹಿಸಲು ಹೇಳಿಲ್ಲ'

ನವದೆಹಲಿ: ನಿನ್ನ ನೈಸರ್ಗಿಕ ಶೈಲಿಯ, ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಮುಂದುವರೆಸು. ನನ್ನ ಶೈಲಿಯನ್ನು ಕಾಪಿ ಮಾಡಬೇಕಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾಗೆ ಹೇಳಿದ್ದರಂತೆ. ಹೀಗೆಂದು ಸ್ವತಃ ಪೃಥ್ವಿ ಹೇಳಿಕೊಂಡಿದ್ದಾರೆ.
'ಆ ಕ್ಷಣಗಳು ಅದ್ಭುತವಾಗಿತ್ತು. ನಾವು 2018ರ ಅಂಡರ್ 19 ವಿಶ್ವಕಪ್‌ಗೂ ಮುನ್ನ ರಾಹುಲ್ ದ್ರಾವಿಡ್ ಸರ್ ಜೊತೆ 2 ವರ್ಷ ಪ್ರವಾಸ ಹೋಗಿದ್ದೆವು. ಅವರಿಗೆ ಗೊತ್ತಿತ್ತು, ನಾವೆಲ್ಲಾ ಅವರಿಗಿಂತ ಭಿನ್ನವಾಗಿದ್ದೆವು ಎಂದು. ಆದರೆ ಅವರು ಯಾವತ್ತಿಗೂ ನಾವು ಅವರಂತಿರಬೇಕು ಎಂದು ಒತ್ತಾಯಿಸಿದವರಲ್ಲ,' ಎಂದು ಕ್ರಿಕ್‌ಬಝ್‌ನಲ್ಲಿ ದ್ರಾವಿಡ್ ಬಗ್ಗೆ ಮಾತನಾಡಿದ ಶಾ ಹೇಳಿದ್ದಾರೆ.
'ಆಟದಲ್ಲಿ ಮನೋಧರ್ಮ ತುಂಬಾ ಮುಖ್ಯವಾಗಿರುತ್ತದೆ. ಆದರೆ ದ್ರಾವಿಡ್ ಯಾವತ್ತಿಗೂ ನನ್ನಲ್ಲಿ ಯಾವುದನ್ನೂ ಬದಲಾಯಿಸಲು ಹೇಳಲಿಲ್ಲ. ಅವರು ಯಾವಾಗಲೂ ನನ್ನಲ್ಲಿ ನನ್ನ ಸ್ವಾಭಾವಿಕ ಆಟ ಆಡಲು ಹೇಳುತ್ತಿದ್ದರು. ಯಾಕೆಂದರೆ ಅವರಿಗೆ ಗೊತ್ತಿತ್ತು ನಾನೊಂದು ವೇಳೆ ಪವರ್‌ಪ್ಲೇ ಓವರ್‌ಗಳನ್ನು ಆಡಿದರೆ ಮತ್ತೆ ನನ್ನನ್ನು ಔಟ್ ಮಾಡೋದು ಕಷ್ಟ ಎಂದು,'ಎಂದು ಪೃಥ್ವಿ ತಿಳಿಸಿದ್ದಾರೆ.
2018ರಲ್ಲಿ ಭಾರತ ಅಂಡರ್-19 ತಂಡಕ್ಕೆ ರಾಹುಲ್ ಮುಖ್ಯ ಕೋಚ್ ಆಗಿದ್ದರು. ಈ ತಂಡ ವಿಶ್ವಕಪ್ ಜಯಿಸಿತ್ತು. ಆವತ್ತು ಪೃಥ್ವಿ ತಂಡ ಮುನ್ನಡೆಸಿದ್ದರು. ಭಾರತೀಯ ಯುವ ಆಟಗಾರರು ಈಗ ಟೀಮ್ ಇಂಡಿಯಾದಲ್ಲಿ ಮಿನುಗಲು ದ್ರಾವಿಡ್ ಕಾರಣ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ. ಈ ಬಗ್ಗೆ ಪೃಥ್ವಿ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications