Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rahul Dravid Son: ಭಾರತ ಅಂಡರ್ 19 ತಂಡಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್ ಪುತ್ರ ಆಯ್ಕೆ

India U19 Team: ಭಾರತೀಯ ತಂಡದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕುಟುಂಬದಿಂದ ಮತ್ತೊಬ್ಬ ಯುವ ತಾರೆ ಟೀಮ್ ಇಂಡಿಯಾದ ನೀಲಿ ಜರ್ಸಿ ತೊಡಲು ಸಜ್ಜಾಗಿದ್ದಾರೆ. ದ್ರಾವಿಡ್ ಅವರ ಕಿರಿಯ ಪುತ್ರ ವಿಕೆಟ್‌ಕೀಪರ್-ಬ್ಯಾಟರ್ ಅನ್ವಯ್ ದ್ರಾವಿಡ್ ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ ಪ್ರಕಟಿಸಲಾದ ಭಾರತದ ಅಂಡರ್-19 (U-19) ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಎಸ್. ಶರತ್ ನೇತೃತ್ವದ ಭಾರತ ಜೂನಿಯರ್ ಆಯ್ಕೆ ಸಮಿತಿಯು ಗುರುವಾರ (ಜೂನ್‌ 11) ಈ ಸರಣಿಗಾಗಿ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸವು ಮೂರು ಏಕದಿನ ಪಂದ್ಯಗಳು ಹಾಗೂ ಎರಡು ಟೆಸ್ಟ್‌ ಪಂದ್ಯಗಳನ್ನು ಒಳಗೊಂಡಿದೆ. ಎರಡೂ ಮಾದರಿಯ ತಂಡಗಳಿಗೆ ಯಶ್‌ವರ್ಧನ್ ಸಿಂಗ್ ಚೌಹಾಣ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದ್ದು, ಅನ್ವಯ್ ದ್ರಾವಿಡ್ ಕೇವಲ ಏಕದಿನ ಸರಣಿಗೆ ಮಾತ್ರ ಆಯ್ಕೆ ಆಗಿದ್ದಾರೆ.

Rahul Dravid Son Anvay Dravid Selected for India U-19 ODI Squad for Sri Lanka Tour Know details

ಏಕದಿನ ತಂಡದಲ್ಲಿ ದ್ರಾವಿಡ್ ಪುತ್ರ..

ಏಕದಿನ ಸರಣಿಯಲ್ಲಿ ರಜತ್ ಬಘೇಲ್ ಅವರೊಂದಿಗೆ ಅನ್ವಯ್ ದ್ರಾವಿಡ್ ಎರಡನೇ ವಿಕೆಟ್‌ ಕೀಪರ್ ಆಯ್ಕೆಯಾಗಿ ಸ್ಥಾನ ಪಡೆದಿದ್ದರೆ, ಟೆಸ್ಟ್‌ ಪಂದ್ಯಗಳಿಗಾಗಿ ಮಾನವ್ ಕೃಷ್ಣ ಮತ್ತು ಆರ್ಯನ್ ಸಂದೇಶ್ ಸಕ್ಪಾಲ್ ಅವರನ್ನು ವಿಕೆಟ್‌ ಕೀಪರ್‌ಗಳಾಗಿ ಆಯ್ಕೆ ಮಾಡಲಾಗಿದೆ.

ಅನ್ವಯ್ ದ್ರಾವಿಡ್ ದಾಖಲೆ

17 ವರ್ಷದ ಅನ್ವಯ್ ದ್ರಾವಿಡ್ ಕಳೆದ ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕ ಅಂಡರ್-19 ತಂಡವನ್ನು ಕ್ವಾರ್ಟರ್‌ಫೈನಲ್‌ ಹಂತಕ್ಕೆ ತೆಗೆದುಕೊಂಡುಹೋಗಿದ್ದರು. ಆ ವೇಳೆ ಜವಾಬ್ದಾರಿಯುತ ಆಟ ಆಡಿದ್ದ ಅವರು 6 ಪಂದ್ಯಗಳಿಂದ ಅಜೇಯ 82 ರನ್‌ಗಳ ಅತ್ಯಧಿಕ ಮೊತ್ತದೊಂದಿಗೆ ಒಟ್ಟು 220 ರನ್ ಕಲೆಹಾಕಿದ್ದರು.

ಅಷ್ಟೇ ಅಲ್ಲದೆ, ಬೆಂಗಳೂರಿನಲ್ಲಿ ನಡೆದ ಭಾರತ 'ಎ' ಮತ್ತು ಅಫ್ಘಾನಿಸ್ತಾನ ಅಂಡರ್-19 ತಂಡಗಳನ್ನೊಳಗೊಂಡ ತ್ರಿಕೋನ ಸರಣಿಯಲ್ಲಿ ಅನ್ವಯ್ ಭಾರತ ಅಂಡರ್-19 'ಬಿ' ತಂಡದ ಪರವಾಗಿಯೂ ಆಡಿದ್ದರು. ನಂತರ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅವರು ಅಂಡರ್-19 ಒನ್-ಡೇ ಚಾಲೆಂಜರ್ ಟ್ರೋಫಿಗಾಗಿ 'ಸಿ' ತಂಡಕ್ಕೂ ಆಯ್ಕೆ ಆಗಿದ್ದರು.

ಗಾಯದ ಸಮಸ್ಯೆಯಿಂದ ಹೊರಗುಳಿದ ಹಿರಿಯ ಪುತ್ರ

ಇನ್ನು ರಾಹುಲ್ ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ಈ ಹಿಂದೆ 2024ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಾಯ್ನಾಡಿನಲ್ಲಿ ನಡೆದ ದ್ವಿಪಕ್ಷೀಯ ಸರಣಿಗಾಗಿ ಭಾರತ ಅಂಡರ್-19 ತಂಡದ ಭಾಗವಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಅವರು ಆ ಸರಣಿಯಿಂದ ಹೊರಗುಳಿಯಬೇಕಾಗಿ ಬಂದಿತ್ತು.

ಭಾರತ ಅಂಡರ್-19 ಏಕದಿನ, ಟೆಸ್ಟ್ ತಂಡಗಳು

ಭಾರತ ಅಂಡರ್-19 ಏಕದಿನ ತಂಡ: ಸಾಗರ್ ವಿರ್ಕ್, ಯಶ್‌ವರ್ಧನ್ ಸಿಂಗ್ ಚೌಹಾಣ್ (ನಾಯಕ), ಲಕ್ಷ್ಯ ರೈಚಂದಾನಿ (ಉಪನಾಯಕ), ವಿನೀತ್ ವಿ.ಕೆ, ಅರ್ಜುನ್ ರಜಪೂತ್, ಕುಶಾಗ್ರ ಓಜಾ, ರಜತ್ ಬಘೇಲ್ (ವಿಕೆಟ್‌ ಕೀಪರ್), ಅನ್ವಯ್ ದ್ರಾವಿಡ್ (ವಿಕೆಟ್‌ ಕೀಪರ್), ಅನ್ಮೋಲ್‌ಜೀತ್ ಸಿಂಗ್, ವುತ್ಕುರಿ ಯಶ್‌ವೀರ್ ಗೌಡ್, ರೋಹಿತ್ ಅನಿಲ್ ಯಾದವ್, ಶಾವಿನ್ ವಿ, ಕಾವ್ಯ ಪರೇಶ್ ಪಟೇಲ್, ಮೋಹಿತ್ ಉಲ್ವಾ, ಇಶಾನ್ ಸೂದ್.

ಭಾರತ ಅಂಡರ್-19 ಟೆಸ್ಟ್‌ ತಂಡ: ಸಾಗರ್ ವಿರ್ಕ್, ಯಶ್‌ವರ್ಧನ್ ಸಿಂಗ್ ಚೌಹಾಣ್ (ನಾಯಕ), ಲಕ್ಷ್ಯ ರೈಚಂದಾನಿ (ಉಪನಾಯಕ), ಪಟೇಲ್ ಕುಶ್, ಮನಲ್ ಚೌಹಾಣ್, ಕುಶಾಗ್ರ ಓಜಾ, ಮಾನವ್ ಕೃಷ್ಣ (ವಿಕೆಟ್‌ ಕೀಪರ್), ಆರ್ಯನ್ ಸಂದೇಶ್ ಸಾಕ್ಪಾಲ್ (ವಿಕೆಟ್‌ ಕೀಪರ್), ಹೇಮಚೂಡೇಶನ್ ಜೆ, ಬಿ.ಕೆ. ಕಿಶೋರ್, ರೋಹಿತ್ ಅನಿಲ್ ಯಾದವ್, ಕಾವ್ಯ ಪರೇಶ್ ಪಟೇಲ್, ಪ್ರಿಯಾಂಶು ಸಿಂಗ್, ಪ್ರಣವ್ ರಾಘವೇಂದ್ರ, ಚಿಗುರುಪಾಟಿ ವೆಂಕಟ.

Story first published: Thursday, June 11, 2026, 18:54 [IST]
Other articles published on Jun 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+