ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ; ಗಿಲ್‌ಗೂ ಗರಿ
ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ನೀಡುವ ಸಿಕೆ ನಾಯ್ಡು ಜೀವಮಾನ ಸಾಧನೆಯ ಗರಿ ಸಂದಿದೆ. ಈ ಪ್ರಶಸ್ತಿಯನ್ನು ಭಾನುವಾರ (ಮಾರ್ಚ್ 15) ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನೀಡಲಾಗುವುದು. ಇನ್ನು ಟೀಮ್ ಇಂಡಿಯಾದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕ ಶುಭ್‌ಮನ್ ಗಿಲ್ ಅವರಿಗೆ ವರ್ಷದ ಕ್ರಿಕೆಟ್ ಆಟಗಾರ ಎಂಬ ಪ್ರಶಸ್ತಿ ನೀಡಲಾಗಿದೆ.
ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿಯೂ ತಂಡಕ್ಕೆ ನೆರವಾಗಿದ್ದಾರೆ. ಇವರು 2024ರಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆದ್ದ ತಂಡದ ಕೋಚ್ ಆಗಿದ್ದರು. ಅಲ್ಲದೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಟೆಸ್ಟ್ ಸರಣಿ ಗೆಲುವಿನ ನಗೆ ಬೀರಿದ ತಂಡದ ನಾಯಕರಾಗಿದ್ದರು. ಟೀಮ್ ಇಂಡಿಯಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕಳೆದ ವರ್ಷ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಸಿಕೆ ನಾಯ್ಡು ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಮೊದಲ ಬಾರಿಗೆ ಲಾಲಾ ಅಮರ್‌ನಾಥ್ ಅವರು ಪಡೆದಿದ್ದರು.
4ನೇ ಕರ್ನಾಟಕದ ಆಟಗಾರ
ಈ ಪ್ರಶಸ್ತಿಯನ್ನು ಪಡೆದ ನಾಲ್ಕನೇ ಪುರುಷ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಇಎಸ್ ಪ್ರಸನ್ನ 2004ರಲ್ಲಿ ಪಡೆದಿದ್ದರು. ಬಿಎಸ್ ಚಂದ್ರಶೇಖರ್ (2004), ಗುಂಡಪ್ಪ ವಿಶ್ವನಾಥ್ (2008), ಸೈಯದ್ ಕಿರ್ಮಾನಿ (2015) ಈ ಪ್ರಶಸ್ತಿಯನ್ನು ಪಡೆದ ಕರ್ನಾಟಕದ ಆಟಗಾರರಾಗಿದ್ದಾರೆ.
ಟೀಮ್ ಇಂಡಿಯಾದ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್ ಇಂಗ್ಲೆಂಡ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಈ ಪ್ರವಾಸದಲ್ಲಿ ನಡೆದಿದ್ದ 5 ಟೆಸ್ಟ್ ಪಂದ್ಯಗಳಲ್ಲಿ ಭಾರತ 2-2 ಸಮಬಲ ಸಾಧಿಸುವಲ್ಲಿ ಸಫಲವಾಗಿತ್ತು. ಈ ಸರಣಿಯಲ್ಲಿ ಶುಭಮನ್ ಗಿಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇವರ ಅದ್ಭುತ ಪ್ರದರ್ಶನಕ್ಕಾಗಿ ಅತ್ಯುತ್ತಮ ಪುರುಷ ಅಂತಾರಾಷ್ಟ್ರೀಯ ಕ್ರಿಕೆಟಿಗ 'ಪಾಲಿ ಉಮ್ರಿಗರ್' ಪ್ರಶಸ್ತಿಗೆ ಭಾಜನರಾಗಿದ್ದಾರೆ
ಶುಭ್‌ಮನ್ ಗಿಲ್ ಸಾಧನೆ
ಕಳೆದ ವರ್ಷ ಶುಭಮನ್ ಗಿಲ್ ಕಳೆದ ವರ್ಷ ಅದ್ಭುತ ಪ್ರದರ್ಶನ ನೀಡಿದ್ದರು. ಟೆಸ್ಟ್ ಪಂದ್ಯಗಳಲ್ಲಿ ಅವರು 983 ರನ್ ಗಳಿಸಿದ್ದರು. ಇವರು ಇಂಗ್ಲೆಂಡ್ ವಿರುದ್ಧ ಸ್ಥಿರ ಪ್ರದರ್ಶನ ನೀಡಿ ಡ್ರಾ ಸಾಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಇವರು ಈ ಸರಣಿಯಲ್ಲಿ 70ಕ್ಕೂ ಹೆಚ್ಚಿನ ಸರಾಸರಿಯಲ್ಲಿ 754 ರನ್ ಕಲೆ ಹಾಕಿದ್ದಾರೆ. ಇವರು ಏಕದಿನ ಕ್ರಿಕೆಟ್‌ನಲ್ಲೂ 490 ರನ್ ಸಿಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲೂ ಇವರು ಸ್ಥಿರ ಪ್ರದರ್ಶನ ನೀಡಿ 188 ರನ್ ಕಲೆ ಹಾಕಿದ್ದರು. ಒಟ್ಟಾರೆಯಾಗಿ, ಗಿಲ್ ಮೂರು ಸ್ವರೂಪಗಳಲ್ಲಿ 49 ಸರಾಸರಿಯಲ್ಲಿ 1764 ರನ್ ಗಳಿಸಿದ್ದಾರೆ, ಇದರಲ್ಲಿ ಏಳು ಶತಕಗಳು ಮತ್ತು ಮೂರು ಅರ್ಧಶತಕಗಳು ಸೇರಿವೆ.
ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ವಿಜೇತರು
| ಕ್ರ.ಸಂ | ಪುರಸ್ಕೃತರ ಹೆಸರು | ವರ್ಷ |
|---|---|---|
| 1 | ಲಾಲಾ ಅಮರನಾಥ್ | 1994 |
| 2 | ಸೈಯದ್ ಮುಷ್ತಾಕ್ ಅಲಿ | 1995 |
| 3 | ವಿಜಯ್ ಹಜಾರೆ | 1996 |
| 4 | ಕೆ.ಎನ್. ಪ್ರಭು | 1997 |
| 5 | ಪಾಲಿ ಉಮ್ರಿಗರ್ | 1998 |
| 6 | ಹೇಮು ಅಧಿಕಾರಿ | 1999 |
| 7 | ಸುಭಾಷ್ ಗುಪ್ತೆ | 2000 |
| 8 | ಮನ್ಸೂರ್ ಅಲಿ ಖಾನ್ ಪಟೌಡಿ | 2001 |
| 9 | ಬಿ.ಬಿ. ನಿಂಬಾಳ್ಕರ್ | 2002 |
| 10 | ಚಂದು ಬೋರ್ಡೆ | 2003 |
| 11 | ಬಿಷನ್ ಸಿಂಗ್ ಬೇಡಿ | 2004 |
| 12 | ಶ್ರೀನಿವಾಸ್ ವೆಂಕಟರಾಘವನ್ | 2004 |
| 13 | ಇ.ಎ.ಎಸ್. ಪ್ರಸನ್ನ | 2004 |
| 14 | ಬಿ.ಎಸ್. ಚಂದ್ರಶೇಖರ್ | 2004 |
| 15 | ನಾರಿ ಕಾಂಟ್ರಾಕ್ಟರ್ | 2007 |
| 16 | ಗುಂಡಪ್ಪ ವಿಶ್ವನಾಥ್ | 2008 |
| 17 | ಮಹಿಂದರ್ ಅಮರನಾಥ್ | 2009 |
| 18 | ಸಲೀಂ ದುರಾನಿ | 2010 |
| 19 | ಅಜಿತ್ ವಾಡೇಕರ್ | 2011 |
| 20 | ಸುನಿಲ್ ಗವಾಸ್ಕರ್ | 2012 |
| 21 | ಕಪಿಲ್ ದೇವ್ | 2013 |
| 22 | ದಿಲೀಪ್ ವೆಂಗ್‌ಸರ್ಕರ್ | 2014 |
| 23 | ಸೈಯದ್ ಕಿರ್ಮಾನಿ | 2015 |
| 24 | ರಾಜಿಂದರ್ ಗೋಯಲ್ | 2016 |
| 25 | ಪದ್ಮಾಕರ್ ಶಿವಾಲ್ಕರ್ | 2016 |
| 26 | ಪಂಕಜ್ ರಾಯ್ | 2017 |
| 27 | ಅಂಶುಮನ್ ಗಾಯಕ್ವಾಡ್ | 2018 |
| 28 | ಕೃಷ್ಣಮಾಚಾರಿ ಶ್ರೀಕಾಂತ್ | 2019 |
| 29 | ಫರೋಖ್ ಇಂಜಿನಿಯರ್ | 2023 |
| 30 | ರವಿ ಶಾಸ್ತ್ರಿ | 2023 |
| 31 | ಸಚಿನ್ ತೆಂಡೂಲ್ಕರ್ | 2024 |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications