Rahul Dravid: ಕ್ರಿಕೆಟ್‌ನ ಜೆಂಟಲ್ ಮ್ಯಾನ್‌ಗೆ ರಸ್ತೆಯಲ್ಲಿ ಸಿಟ್ಟು ಬರಲು ಕಾರಣ ಏನು?
ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಪ್ರಯಾಣಿಕರು ಪರದಾಟ ಪಡುವಂತಾಗಿದೆ. ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ ವಿಡಿಯೋಗಳನ್ನು ನೀವು ಆಗಾಗ್ಗೆ ನೋಡಿರುತ್ತಿರಿ. ಈ ಟ್ರಾಫಿಕ್ ಸಮಸ್ಯೆಗೆ ಸ್ಟಾರ್‌ಗಳು ಸಹ ಪರದಾಟ ನಡೆಸಿದ್ದಾರೆ. ಈಗ ಬಂದಿರುವ ಸುದ್ದಿ ಸಹ ಟ್ರಾಫಿಕ್ ಕಿರಿಕಿರಿಯಿಂದ ಪೇಚೆಗೆ ಈಡಾದ ಸ್ಟಾರ್ ಒಬ್ಬರ ಬಗ್ಗೆ ಆಗಿದೆ. ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಟ್ರಾಫಿಕ್ ಕಿರಿಕಿರಿ ತಟ್ಟಿದೆ. ಈ ಬಗ್ಗೆ ಇಂಟ್ರಸ್ಟಿಂಗ್ ವಿಡಿಯೋ ಇಲ್ಲಿದೆ.
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಅಪಘಾತ ಒಂದು ಸಂಭವಿಸಿದೆ. ಈ ಅಪಘಾತದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ತೊಂದರೆಗೆ ಈಡಾಗಿದ್ದಾರೆ. ಟಿ20 ವಿಶ್ವಕಪ್ ವಿಜೇತ ತಂಡದ ತರಬೇತುದಾರರಾಗಿರುವ ದ್ರಾವಿಡ್ ಅವರ ಕಾರಿಗೆ ಸರಕು ಸಾಗಣೆ ಮಾಡುತ್ತಿದ್ದ ಆಟೋ ಡಿಕ್ಕಿ ಹೊಡೆದಿದೆ. ಹೀಗೆ ಕಾರಿಗೆ ಆಟೋ ಡಿಕ್ಕಿ ಹೊಡೆಯುವುದು ಆಗಿರಲಿದೆ. ವಾಹನಗಳ ನಡುವೆ ಘರ್ಷಣೆಗಳು ಆಗಿರಲಿ ಕಾಮನ್. ಇಲ್ಲಿಯೂ ಹೀಗೆ ಆಗಿದೆ. ಆದರೆ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೀಗಾಗಿ ಈ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.

ಆಗಿದ್ದೇನು?
ಮಂಗಳವಾರ ಸಂಜೆ 4 ಗಂಟೆಯ ಸುಮಾರಿಗೆ ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರು ನಿಂತಿತ್ತು. ಆಗ ಸರಕು ಸಾಗಣೆ ಮಾಡುತ್ತಿದ್ದ ಆಟೋ ಒಂದು ಹಿಂದಿನಿಂದ, ರಾಹುಲ್ ದ್ರಾವಿಡ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಸರಕು ಆಟೋ ಡಿಕ್ಕಿ ಹೊಡೆಯುತ್ತಿದ್ದಂತೆ ರಾಹುಲ್, ಕಾರಿನಿಂದ ಇಳಿದು, ಚಾಲಕನ ಜೊತೆ ಮಾತಿಗೆ ಇಳಿದರು. ಈ ವೇಳೆ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಹಾಗೂ ಆಟೋ ಚಾಲಕರ ನಡುವೆ ಚಿಕ್ಕ ವಾಗ್ವಾದ ಸಹ ನಡೆಯಿತು. ಈ ದೃಶ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದೆ. ಈ ಪ್ರಕರಣದ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಒತ್ತಾಯ ಕೇಳಿ ಬಂದಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ರಾಹುಲ್ ದ್ರಾವಿಡ್ ಅವರ ನಟಿಸಿರುವ ಜಾಹೀರಾತು ಸಹ ಸದ್ದು ಮಾಡುತ್ತಿದೆ. "ಇಂದಿಯಾ ನಗರದ ಗುಂಡಾ" ಜಾಹೀರಾತನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ದ್ರಾವಿಡ್ ಕೋಪ ಮಾಡಿಕೊಳ್ಳುವುದಿಲ್ಲ. ಅವರು ಕೋಪ ಮಾಡಿಕೊಳ್ಳುವುದೇ ವಿರಳ. ರಾಹುಲ್ ದ್ರಾವಿಡ್ ಅವರ ಇನ್ನೊಂದು ಮುಖವನ್ನು ಕಂಡು ಸಾಮಾಜಿಕ ತಾಣದಲ್ಲಿ ಬಳಕೆದಾರರು, ಹಿಂದಿನ ಜಾಹೀರಾತನ್ನು ನೆನಪಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications