ಭಾರತ ಕ್ರಿಕೆಟ್ ತಂಡವು ತವರಿನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಲುವಲ್ಲಿ ವಿಫಲವಾಗಿದೆ. ನಿಜಕ್ಕೂ ಇದು ಅಭಿಮಾನಿಗಳಿಗೆ ತುಂಬಾ ನಿರಾಸೆ ಮೂಡಿಸಿದೆ. ನಾಯಕ ರೋಹಿತ್ ಶರ್ಮಾ ಜೊತೆಗೂಡಿ ಕೋಚ್ ರಾಹುಲ್ ದ್ರಾವಿಡ್ ತಂಡ ಎಲ್ಲರ ಮನಸೂರೆಗೊಳ್ಳುವ ಆಟ ಪ್ರದರ್ಶಿಸಿದ್ದರು.
ಐಸಿಸಿ ಟಿ20 ವಿಶ್ವಕಪ್ ಮುಂದಿನ ವರ್ಷ ನಡೆಯಲಿದ್ದು, ದ್ರಾವಿಡ್ ಟೀಂ ಇಂಡಿಯಾ ಜೊತೆಗಿನ ಹೊಸ ಒಪ್ಪಂದ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ವರೆಗೆ ಇರಲಿದೆ. ಇನ್ನು ರಾಹುಲ್ ದ್ರಾವಿಡ್ ಹಾಕಿಕೊಂಡ ಗುರಿಯನ್ನು ಅರ್ಧಕ್ಕೆ ಬಿಟ್ಟು ಮುಂದಿನ ಕೆಲಸದತ್ತ ಮುಖ ಮಾಡುವ ಮನುಷ್ಯ ಅಲ್ಲವೇ ಅಲ್ಲ. ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿಯನ್ನು ಒಮ್ಮೆ ಕಣ್ಣು ಹಾಯಿಸಿದರೆ, ಅವರು ಮೊದಲ ಅವಧಿಗಿಂತಲೂ ಎರಡನೇ ಅವಧಿಯಲ್ಲಿ ಬೆಸ್ಟ್ ಎನ್ನುವುದು ಸಾಬೀತಾಗುತ್ತದೆ.

2021 ರ ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ಬಿದ್ದಾಗ, ಗುರು ಸ್ಥಾನವನ್ನು ತುಂಬಲು ನಮ್ಮದೇ ದೇಶದ ಆಟಗಾರನಿಗೆ ಮಣೆ ಹಾಕಿತು.ವಿರಾಟ್ ಕೊಹ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ನಾಯಕತ್ವ ಸ್ಥಾನದಿಂದ ಕೆಳಗಿಳಿದರು. ಮಾಜಿ ಕೋಚ್ ರವಿಶಾಸ್ತ್ರಿ ಅವರನ್ನು ವಜಾಗೊಳಿಸಲಾಯಿತು. ಆಗಿನ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರು ರಾಹುಲ್ ದ್ರಾವಿಡ್‌ಗೆ ಮುಖ್ಯ ಕೋಚ್ ಜವಾಬ್ದಾರಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತ ತಂಡದ ಮುಖ್ಯ ಕೋಚ್‌ನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೊದಲು, ರಾಹುಲ್ ದ್ರಾವಿಡ್ ಅಂಡರ್-19 ತಂಡದೊಂದಿಗೆ ದೀರ್ಘಕಾಲ ಕಳೆದಿದ್ದರು. ಅಲ್ಲದೆ ಈ ವೇಳೆ ಹಲವು ಪ್ರತಿಭಾನ್ವಿತ ಆಟಗಾರರನ್ನು ಹುಡುಕಿ ನೀರು ಹಾಕಿ ಪೋಷಣೆ ಮಾಡಿದ್ದರು. ಸದ್ಯ ಟೀಮ್ ಇಂಡಿಯಾದಲ್ಲಿರುವ ಬಹುತೇಕ ಆಟಗಾರರು ಈ ಶ್ರೇಷ್ಠ ಕೋಚ್ ತರಬೇತಿಯಲ್ಲಿ ಹೊರಹೊಮ್ಮಿದವರು ಆಗಿದ್ದಾರೆ. ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಇಶಾನ್ ಕಿಶನ್ ಮುಂತಾದ ಆಟಗಾರರು ದ್ರಾವಿಡ್ ಅವರ ಗರಡಿಯಲ್ಲೇ ಬೆಳೆದಿದ್ದಾರೆ.

ರಾಹುಲ್ ದ್ರಾವಿಡ್ 2016ರ ಅಂಡರ್-19 ವಿಶ್ವಕಪ್‌ನಲ್ಲಿ ಇಶಾನ್ ಕಿಶನ್ ನಾಯಕತ್ವದಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ವೆಸ್ಟ್ ಇಂಡೀಸ್ ತಂಡ ಭಾರತವನ್ನು ಸೋಲಿಸಿತ್ತು. ಈ ವೇಳೆ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತು. ಇದಾದ ಬಳಿಕ ಎರಡನೇ ಅವಕಾಶದಲ್ಲಿ ದ್ರಾವಿಡ್ ಪೃಥ್ವಿ ಶಾ ನಾಯಕತ್ವದ ತಂಡದೊಂದಿಗೆ ವಿಶ್ವಕಪ್ ಟ್ರೋಫಿ ಗೆದ್ದುಕೊಂಡರು. 2023ರಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಭಾರತದ ಹಿರಿಯರ ತಂಡ ಪ್ರವೇಶ ಪಡೆದಿತ್ತು. ಈಗ 2024 ರ ಟಿ 20 ವಿಶ್ವಕಪ್‌ನಲ್ಲಿ, ದ್ರಾವಿಡ್ ಭಾರತಕ್ಕಾಗಿ ಶತಾಯ ಗತಾಯ ಪ್ರಶಸ್ತಿಯನ್ನು ಎತ್ತಲೇ ಬೇಕು ಎಂಬ ಕನಸು ಹೊಂದಿದ್ದಾರೆ.
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದೆ. ಲೀಗ್ ಹಂತದ ಪಂದ್ಯ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ ಅಜೇಯವಾಗಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.