Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ಪ್ರವಾಸಕ್ಕೆ ಅಂಡರ್ 19 ಭಾರತ ತಂಡ ಪ್ರಕಟ:

ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸಕ್ಕೆ ಭಾರತ 'ಎ' ತಂಡವನ್ನು ಘೋಷಣೆ ಮಾಡಲಾಗಿದೆ. ಏಕದಿನ ತಂಡ ಹಾಗೂ ಬಹು-ದಿನ ಪಂದ್ಯಗಳಿಗೆ ಅಂಡರ್ 19 ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿದೆ. ಜುಲೈ 4 ರಂದು ಭಾರತ ಅಂಡರ್ 19 ತಂಡದ ಶ್ರೀಲಂಕಾ ಪ್ರವಾಸ ಆರಂಭವಾಗಲಿದ್ದು, ಯಶವರ್ಧನ್ ಸಿಂಗ್ ಚೌಹಾಣ್ ತಂಡದ ನಾಯಕರಾಗಿ ಆಯ್ಕೆ ಆಗಿದ್ದಾರೆ. ಭಾರತ ತಂಡದ ಮಾಜಿ ನಾಯಕ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್ ಅವರ ಮಗನಿಗೂ ಈ ಪ್ರವಾಸದಲ್ಲಿ ಸ್ಥಾನ ಲಭಿಸಿದೆ.

ಇವರು ಎಲ್ಲ ಮಾದರಿಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಲಕ್ಷಯ್ ರಾಯ್‌ಚಂದಾನಿ ಉಪನಾಯಕರಾಗಿದ್ದಾರೆ. ಶ್ರೀಲಂಕಾ ಪ್ರವಾಸ ಬೆಳೆಸಲಿರುವ ಭಾರತ ತಂಡದಲ್ಲಿ ಭರವಸೆಯ ಆಟಗಾರರಿಗೆ ಅವಕಾಶ ನೀಡಲಾಗಿದೆ. ತಂಡದಲ್ಲಿ ರೋಹಿತ್ ಅನಿಲ್ ಯಾದವ್ ಮತ್ತು ಇಶಾನ್ ಸೂದ್ ಅವರನ್ನು ಸಹ ಭಾರತೀಯ ತಂಡದಲ್ಲಿ ಸೇರಿಸಲಾಗಿದೆ.

Rahul Dravid

ದ್ರಾವಿಡ್ ಮಗನಿಗೆ ಸ್ಥಾನ

ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ನಾಯಕ ರಾಹುಲ್ ದ್ರಾವಿಡ್‌ ಅವರ ಪುತ್ರ ಅನ್ವೇ ದ್ರಾವಿಡ್ ಅವರಿಗೆ ತಂಡದಲ್ಲಿ ಸೇರಿಸಲಾಗಿದೆ. ದ್ರಾವಿಡ್ ಅವರ ಮಗ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಭಾರತ ತಂಡದ ಪರ ಅಂಡರ್ 19 ಏಕದಿನ ಪಂದ್ಯಗಳಲ್ಲಿ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇವರನ್ನು ಬಹು ದಿನಗಳ ಪಂದ್ಯಗಳಲ್ಲಿ ತಂಡದಲ್ಲಿ ಸೇರಿಸಲಾಗಿಲ್ಲ. ಮಾನವ್ ಕೃಷ್ಣ ಮತ್ತು ಆರ್ಯನ್ ಸಂದೇಶ್ ಸಕ್ಪಾಲ್ ಬಹು-ದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್‌ಗಳಾಗಿರುತ್ತಾರೆ.

ಶ್ರೀಲಂಕಾ ಪ್ರವಾಸದ ಮೊದಲ ಪಂದ್ಯ ಜುಲೈ 4 ರಂದು ನಡೆಯಲಿದ್ದು, ಎರಡನೇ ಪಂದ್ಯ ಜುಲೈ 6 ರಂದು ನಡೆಯಲಿದೆ. ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಜುಲೈ 9 ರಂದು ನಡೆಯಲಿದೆ. ಸರಣಿಯ ಮೂರು ಪಂದ್ಯಗಳು ಹಂಬಂಟೋಟದಲ್ಲಿ ನಡೆಯಲಿವೆ. ಇದರ ನಂತರ ಮೊದಲ ಬಹು-ದಿನದ ಪಂದ್ಯ ಜುಲೈ 13 ರಿಂದ 16 ರವರೆಗೆ ಗಾಲೆಯಲ್ಲಿ, ಎರಡನೇ ಬಹು-ದಿನದ ಪಂದ್ಯ ಜುಲೈ 20 ರಿಂದ 23 ರವರೆಗೆ ಕೊಲಂಬೊದಲ್ಲಿ ನಡೆಯಲಿದೆ.

ಏಕದಿನ ಸರಣಿಗೆ ಭಾರತದ ಅಂಡರ್ 19 ತಂಡ: ಸಾಗರ್ ವಿರ್ಕ್, ಲಕ್ಷ ರಾಯ್‌ಚಂದಾನಿ (ಉಪನಾಯಕ), ಯಶವರ್ಧನ್ ಸಿಂಗ್ ಚೌಹಾಣ್ (ನಾಯಕ), ವಿನೀತ್ ವಿಕೆ, ಅರ್ಜುನ್ ರಜಪೂತ್, ಕುಶಾಗ್ರ ಓಜಾ, ರಜತ್ ಬಾಘೆಲ್ (ವಿಕೆಟ್ ಕೀಪರ್), ಅನ್ವೇ ದ್ರಾವಿಡ್ (ವಿಕೆಟ್ ಕೀಪರ್), ಅನ್ಮೋಜಿತ್ ಸಿಂಗ್‌, ವುಟ್ಕುರಿ ಯಶ್ವೀರ್ ಗೌಡ, ರೋಹಿತ್ ಅನಿಲ್ ಯಾದವ್, ಶವಿನ್ ವಿ, ಕಾವ್ಯಾ ಪರೇಶ್ ಪಟೇಲ್, ಮೋಹಿತ್ ಉಲ್ವಾ, ಇಶಾನ್ ಸೂದ್.

ಬಹುದಿನದ ಪಂದ್ಯಗಳಿಗೆ ಭಾರತದ ಅಂಡರ್ 19 ತಂಡ: ಸಾಗರ್ ವಿರ್ಕ್, ಲಕ್ಷ ರಾಯ್‌ಚಂದನಿ (ಉಪನಾಯಕ), ಯಶವರ್ಧನ್ ಸಿಂಗ್ ಚೌಹಾಣ್ (ನಾಯಕ), ಪಟೇಲ್ ಕುಶ್, ಮನಲ್ ಚೌಹಾಣ್, ಕುಶಾಗ್ರ ಓಜಾ, ಮಾನವ್ ಕೃಷ್ಣ (ವಿಕೆಟ್ ಕೀಪರ್), ಆರ್ಯನ್ ಸಂದೇಶ್ ಸಕ್ಪಾಲ್ (ವಿಕೆಟ್ ಕೀಪರ್), ಹೇಮಾಚೂಡೇಶನ್ ಜೆ, ಬಿ ಕೆ ಕಿಶೋರ್, ರೋಹಿತ್ ಅನಿಲ್ ಯಾದವ್, ಕಾವ್ಯ ಪರೇಶ್ ಪಟೇಲ್, ಪ್ರಿಯಾಂಶು ಸಿಂಗ್, ಪ್ರಣವ್ ರಾಘವೇಂದ್ರ, ಚಿಗುರುಪತಿ ವೆಂಕಟ್.

Story first published: Thursday, June 11, 2026, 20:43 [IST]
Other articles published on Jun 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+