Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN 2nd Test: ಕುತೂಹಲ ಘಟ್ಟದತ್ತ ಮುಖ ಮಾಡಿದ ಎರಡನೇ ಟೆಸ್ಟ್‌: ಮೂರು ದಾಖಲೆ ನಿರ್ಮಿಸಿದ ಭಾರತ

ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಎರಡನೇ ಟೆಸ್ಟ್‌ ಪಂದ್ಯ ಕುತೂಹಲ ಘಟಕ್ಕೆ ಎಂಟ್ರಿ ಆಗಿದೆ. ಸೋಮವಾರ ದಿನದಾಟದಲ್ಲಿ ಟೀಮ್ ಇಂಡಿಯಾ ಪೂರ್ಣ ಹಿಡಿತ ಸಾಧಿಸಿದೆ. ಟೀಮ್ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟಿ20 ಶೈಲಿಯ ಬ್ಯಾಟಿಂಗ್ ನಡೆಸಿ ಅಬ್ಬರಿಸಿತು. ಈ ಮೂಲಕ ಇನಿಂಗ್ಸ್‌ ಮುನ್ನಡೆಯನ್ನು ಟೀಮ್ ಇಂಡಿಯಾ ಬೇಗನೆ ಸಾಧಿಸಿ, 34.4 ಓವರ್‌ಗಳಲ್ಲಿ ಡಿಕ್ಲೇರ್ ಮಾಡಿಕೊಂಡಿತು.

ಸೋಮವಾರ ನಾಲ್ಕನೇ ದಿನದಾಟವನ್ನು 3 ವಿಕೆಟ್‌ಗೆ 107 ರನ್‌ಗಳಿಂದ ಮುಂದುವರೆಸಿದ ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 233 ರನ್‌ಗಳಿಗೆ ಆಲೌಟ್ ಆಯಿತು. ಸಮಯದ ಅಭಾವ ಹಾಗೂ ಗೆಲುವಿನ ಅನಿವಾರ್ಯತೆ ಟೀಮ್ ಇಂಡಿಯಾಗೆ ಅಟ್ಯಾಕಿಂಗ್ ಆಟವನ್ನು ಆಡುವಂತೆ ಮಾಡಿತು. ಪರಿಣಾಮ ಭಾರತ 34.4 ಓವರ್‌ಗಳಲ್ಲಿ 9 ವಿಕೆಟ್‌ಗೆ 285 ರನ್‌ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಳ್ಳಲಾಯಿತು. ಎರಡನೇ ಇನಿಂಗ್ಸ್‌ ಆರಂಭಿಸಿರುವ ಬಾಂಗ್ಲಾದೇಶ 2 ವಿಕೆಟ್‌ ಕಳೆದುಕೊಂಡು 26 ರನ್ ಸೇರಿಸಿದೆ. ಇನ್ನು ಮುನ್ನಡೆಗೆ ಪ್ರವಾಸಿ ತಂಡಕ್ಕೆ 26 ರನ್‌ಗಳ ಅವಶ್ಯತೆ ಇದೆ.

Rahul Jaiswal s Rapid Fifties Power India Before Ashwin s Double Strike

ಮೊಮಿನುಲ್ ಹಕ್ ಶತಕ

ಬಾಂಗ್ಲಾದೇಶದ ಪರ ಮೊಮಿನುಲ್ ಹಕ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಏಕಾಂಗಿ ಹೋರಾಟವನ್ನು ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇವರಿಗೆ ಯಾವೊಬ್ಬ ಬ್ಯಾಟರ್‌ ಉತ್ತಮ ಸಾಥ್ ನೀಡಲಿಲ್ಲ. ಇವರು 194 ಎಸೆತಗಳಲ್ಲಿ 17 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ ಅಜೇಯ 107 ರನ್‌ ಬಾರಿಸಿ ಔಟ್ ಆದರು.

ವೇಗಿಗಳಿಗೆ ಏಳು ವಿಕೆಟ್‌

ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ವೇಗಿಗಳು ಏಳು ಹಾಗೂ ಸ್ಪಿನ್ ಬೌಲರ್ಸ್‌ ಮೂರು ವಿಕೆಟ್‌ ಕಬಳಿಸಿದ್ದಾರೆ. ಟೀಮ್ ಇಂಡಿಯಾದ ವೇಗಿ ಜಸ್ಪ್ರಿತ್ ಬುಮ್ರಾ 3, ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್‌ ದೀಪ್‌ ತಲಾ ಎರಡು ವಿಕೆಟ್‌ ಕಬಳಿಸಿದರು. ಅಶ್ವಿನ್‌ 2, ಜಡೇಜಾ 1 ವಿಕೆಟ್‌ ಪಡೆದರು.

Rahul Jaiswal s Rapid Fifties Power India Before Ashwin s Double Strike

ಟೀಮ್ ಇಂಡಿಯಾ ದಾಖಲೆಯ ಆಟ

ಭಾರತ ಈ ಪಂದ್ಯವನ್ನು ಗೆಲ್ಲಲೇ ಬೇಕು ಎಂದು ಪಣ ತೊಟ್ಟಂತೆ ಬ್ಯಾಟಿಂಗ್ ನಡೆಸಿತು. ಕೇವಲ ಮುರು ಓವರ್‌ಗಳಲ್ಲಿ 50 ರನ್‌ ಬಾರಿಸಿ ಇತಿಹಾಸ ನಿರ್ಮಿಸಿದ ಭಾರತ, ನಂತರ 10.1 ಓವರ್‌ಗಳಲ್ಲಿ ಮೂರಂಕಿ ಮುಟ್ಟಿ ತನ್ನದೇ ದಾಖಲೆಯನ್ನು ಮತ್ತಷ್ಟು ಬಲ ಪಡಿಸಿಕೊಂಡಿತು. ಕಾನ್ಪುರ್ ಅಂಗಳದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಟಿ20 ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದರು. ಬಂದ ಬ್ಯಾಟರ್‌ಗಳು ಎಲ್ಲ ರನ್‌ ವೇಗಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನೇ ಮಾಡಿದರು.

ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 23, ಶುಭಮನ್‌ ಗಿಲ್‌ 39, ವಿರಾಟ್‌ ಕೊಹ್ಲಿ 47 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಆರಂಭಿಕ ಯಶಸ್ವಿ ಜೈಸ್ವಾಲ್‌ 51 ಎಸೆತಗತಳಲ್ಲಿ 12 ಬೌಂಡರಿ, 2 ಸಿಕ್ಸರ್ ಸಹಾಯದಿಂದ 72 ರನ್‌ ಸಿಡಿಸಿ ಔಟ್ ಆದರು.

ಬಿರುಸಿನ ಬ್ಯಾಟಿಂಗ್

ಕನ್ನಡಿಗ ಕೆ.ಎಲ್ ರಾಹುಲ್ ಅವರು ಮೊದಲ ಇನಿಂಗ್ಸ್‌ನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರು ಜಸ್ಟ್‌ 43 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 68 ರನ್‌ ಸಿಡಿಸಿ ಔಟ್ ಆದರು. ಇದು ರಾಹುಲ್‌ ಅವರ ಟೆಸ್ಟ್‌ ಇತಿಹಾಸದ ವೇಗದ ಅರ್ಧಶತಕ. ಟೀಮ್ ಇಂಡಿಯಾದ ಎಲ್ಲ ಬ್ಯಾಟರ್‌ಗಳು ಸಹ ದೊಡ್ಡ ಹೊಡೆತವನ್ನು ಬಾರಿಸುವ ಪ್ರಯತ್ನವನ್ನೇ ಮಾಡಿದರು.

ಬಾಂಗ್ಲಾದೇಶದ ಪರ ಮೆಹದಿ ಹಸನ್ ಮಿರ್ಜಾ, ಶಕೀಬ್ ಅಲ್‌ ಹಸನ್ ತಲಾ ನಾಲ್ಕು ವಿಕೆಟ್‌ ಕಬಳಿಸಿದರು.

ಕೊನೆಯ ದಿನದಾಟದಲ್ಲಿ ಟೀಮ್ ಇಂಡಿಯಾ ಬಿಗುವಿನ ದಾಳಿಯನ್ನು ನಡೆಸಿ ಬಾಂಗ್ಲಾದೇಶವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ಗೆಲುವು ಸಾಧಿಸುವ ಗುರಿಯನ್ನು ಹೊಂದಿದೆ.

Story first published: Monday, September 30, 2024, 18:18 [IST]
Other articles published on Sep 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+