Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಎಲೈಟ್‌ ಕ್ಲಬ್‌ಗೆ ಎಂಟ್ರಿ ನೀಡಿದ ಕನ್ನಡಿಗ ರಾಹುಲ್

ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್‌ ಇಂಗ್ಲೆಂಡ್‌ನಲ್ಲಿ ಸ್ಥಿರ ಪ್ರದರ್ಶನ ಮುಂದುವರೆಸಿದ್ದಾರೆ. ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ಪರದಾಡಿದ್ದ ರಾಹುಲ್‌ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ತಮ್ಮಲ್ಲಿರುವ ಬ್ಯಾಟಿಂಗ್ ಕ್ಷಮತೆಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದ್ದಾರೆ. ಈ ಅರ್ಧಶತಕದ ಬಲದಿಂದ ಕೆಎಲ್ ರಾಹುಲ್‌ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಆ ದಾಖಲೆ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

2ನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ರಾಹುಲ್‌ 28 ರನ್‌ಗಳಿಂದ ಆಟ ಮುಂದುವರೆಸಿದರು. ಶನಿವಾರ ರಾಹುಲ್‌ ತಮ್ಮ ಸ್ಥಿರ ಬ್ಯಾಟಿಂಗ್ ನಡೆಸಿ ಎದುರಾಳಿ ಬೌಲರ್‌ಗಳಿಗೆ ಕಾಡಿದರು. ಈ ಪಂದ್ಯದಲ್ಲಿ ರಾಹುಲ್‌ 84 ಎಸೆತಗಳನ್ನು ಎದುರಿಸಿ, 10 ಬೌಂಡರಿ ನೆರವಿನಿಂದ 55 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಈ ಮೂಲಕ ರಾಹುಲ್‌ ಎಲೈಟ್‌ ಕ್ಲಬ್‌ಗೆ ಎಂಟ್ರಿ ನೀಡಿದ್ದಾರೆ.

Rahul Joins Gavaskar with Elite SENA Half-Centuries as Opener

ಸೇನಾ ದೇಶಗಳಲ್ಲಿ 10 ಅರ್ಧಶತಕ ಬಾರಿಸಿದ ಭಾರತದ ಓಪನರ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ಈ ಮೂಲಕ ರಾಹುಲ್‌ ಸುನಿಲ್ ಗವಾಸ್ಕರ್‌ ಅವರ ಎಲೈಟ್‌ ಕ್ಲಬ್‌ಗೆ ಎಂಟ್ರಿ ನೀಡಿದ್ದಾರೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾದಲ್ಲಿ (ಸೇನಾ) ರಾಹುಲ್‌ 23 ಬಾರಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದು 1508 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಅವರ ಸರಾಸರಿ 35.06 ಆಗಿದೆ.

ಎಲೈಟ್‌ ಕ್ಲಬ್‌ಗೆ ಕೆಎಲ್ ಎಂಟ್ರಿ

ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ದಾಖಲೆ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಅವರಿಗೆ ಸಲ್ಲುತ್ತದೆ. ಇವರು 8 ಶತಕ ಹಾಗೂ 11 ಅರ್ಧಶತಗಳನ್ನು ಬಾರಿಸಿದ್ದಾರೆ.

ಕೆಎಲ್ ರಾಹುಲ್‌ 2 ಟೆಸ್ಟ್‌ ಪಂದ್ಯಗಳ ನಾಲ್ಕು ಇನಿಂಗ್ಸ್‌ಗಳಲ್ಲಿ 236 ರನ್‌ಗಳನ್ನು 59ರ ಸರಾಸರಿಯಲ್ಲಿ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 1 ಅರ್ಧಶತಕ ಸೇರಿದೆ. ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಕೆಎಲ್ 137 ರನ್‌ ಬಾರಿಸಿ ತಂಡಕ್ಕೆ ನೆರವಾಗಿದ್ದರು. 1 ದಶಕದಲ್ಲಿ ಭಾರತದ ಪರ ಸೇನಾ ರಾಷ್ಟ್ರಗಳಲ್ಲಿ ಕೆಎಲ್ ರಾಹುಲ್‌ 13 ಟೆಸ್ಟ್‌ ಪಂದ್ಯಗಳ, 26 ಇನಿಂಗ್ಸ್‌ನಲ್ಲಿ 41.16ರ ಸರಾಸರಿಯಲ್ಲಿ 1029 ರನ್‌ ಕಲೆ ಹಾಕಿದ್ದಾರೆ.

Rahul Joins Gavaskar with Elite SENA Half-Centuries as Opener

ಟೀಮ್ ಇಂಡಿಯಾ ಇಂಗ್ಲೆಂಡ್‌ ಪ್ರವಾಸ ಆರಂಭಿಸುವುದಕ್ಕೂ ಮೊದಲೇ ರೋಹಿತ್‌ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದರು. ಹೀಗಾಗಿ ಆರಂಭಿಕರಾಗಿ ಕಣಕ್ಕೆ ಇಳಿಯುವ ಜವಾಬ್ದಾರಿ ಕೆಎಲ್ ರಾಹುಲ್‌ ಅವರ ಮೇಲೆ ಬಿದ್ದಿತು. ರಾಹುಲ್ ತಮ್ಮ ಅನುಭವ ಬಳಸಿಕೊಂಡು ಟೂರ್ನಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾಗಿದ್ದಾರೆ. ಈ ಮೂಲಕ ಕಷ್ಟದ ಸನ್ನಿವೇಶದಲ್ಲಿ ನೆಲಕಚ್ಚಿ ಬ್ಯಾಟ್ ಮಾಡಿ ನೆರವಾಗಿದ್ದಾರೆ.

Story first published: Sunday, July 6, 2025, 10:15 [IST]
Other articles published on Jul 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+