ಐಪಿಎಲ್ 2020: ಮತ್ತೊಂದು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ನೀಡಿದ ರಾಹುಲ್ ತೆವಾಟಿಯಾ

ಐಪಿಎಲ್‌ನ ಈ ಬಾರಿಯ ಆವೃತ್ತಿಯಲ್ಲಿ ರಾಹುಲ್ ತೆವಾಟಿಯಾ ಪ್ರದರ್ಶನ ಎಲ್ಲರನ್ನೂ ಬೆರಗುಗೊಳಿಸುವಂತಿದೆ. ಸ್ಪಿನ್ನರ್ ಆಗಿ ರಾಜಸ್ಥಾನ್ ರಾಯಲ್ಸ್‌ಗೆ ಸೇರಿಕೊಂಡಿರುವ ತೆವಾಟಿಯಾ ಬ್ಯಾಟಿಂಗ್ ಮೂಲಕ ತಂಡಕ್ಕೆ ಎರಡನೇ ಬಾರಿಗೆ ಜಯ ದೊರಕಿಸಿಕೊಟ್ಟಿದ್ದಾರೆ.
ಬ್ಯಾಟ್ಸ್‌ಮನ್‌ಗಳ ಅಬ್ಬರದಾಟದ ಮಧ್ಯೆ ರಾಹುಲ್ ತೆವಾಟಿಯಾ ತಮ್ಮ ಬೌಲಿಂಗ್ ಕೈಚಳಕದ ಮೂಲಕ ಎದುರಾಳಿಗಳನ್ನು ನಿಯಂತ್ರಿಸುತ್ತಿದ್ದಾರೆ. ಆದರೆ ತೆವಾಟಿಯಾ ಗಮನಸೆಳೆಯುತ್ತಿರುವುದು ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಮೂಲಕ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ರಾಹುಲ್ ತೆವಾಟಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗೆಲುವಿಗೆ ಕಾರಣರಾಗಿದ್ದಾರೆ.

ಭರವಸೆ ಹುಸಿಗೊಳಿಸದ ತೆವಾಟಿಯಾ-ಪರಾಗ್
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಕಾರಣ ಆರ್‌ಆರ್ ತಂಡ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಬಹುತೇಕ ಕಳೆದುಕೊಂಡಿತ್ತು. ಕ್ರಿಸ್‌ನಲ್ಲಿ ರಾಹುಲ್ ತೆವಾಟಿಯಾ ಹಾಗೂ ರಿಯಾನ್ ಪರಾಗ್ ಇದ್ದ ಕಾರಣ ಆರ್‌ಆರ್ ಅಭಿಮಾನಿಗಳು ಒಂದು ಸಣ್ಣ ಭರವಸೆಯನ್ನು ಇಟ್ಟುಕೊಂಡಿದ್ದರು. ಈ ಭರವಸೆಯನ್ನು ನಿಜ ಮಾಡಿ ತೋರಿಸಿದರು ತೆವಾಟಿಯಾ, ಪರಾಗ್ ಜೋಡಿ. ಒಂದು ಎಸೆತ ಇರುವಂತೆಯೆ ರಾಜಸ್ಥಾನ್ ಐದು ವಿಕೆಟ್‌ಗಳ ರೋಚಕ ಜಯವನ್ನು ದಾಖಲಿಸಿತು.

78 ರನ್‌ಗೆ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್
ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 163 ರನ್‌ಗಳ ಟಾರ್ಗೆಟ್‌ಅನ್ನು ಬೆನ್ನಟ್ಟಿದ ರಾಜಸ್ಥಾನ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತು. ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್, ಜೋಸ್ ಬಟ್ಲರ್, ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್ ವಿಕೆಟ್‌ಗಳನ್ನು 78 ರನ್‌ಗಳಾಗುವಷ್ಟರಲ್ಲಿ ಕಳೆದುಕೊಂಡಿತ್ತು.

ಡೆತ್ ಓವರ್‌ನಲ್ಲಿ ಬೌಲರ್‌ಗಳ ದಂಡನೆ
ಆರನೇ ವಿಕೆಟ್‌ಗೆ ರಿಯಾನ್ ಪರಾಗ್ ಹಾಗೂ ರಾಹುಲ್ ತೆವಾಟಿಯಾ ಜೊತೆಯಾದರು. ನಿಧಾನಕ್ಕೆ ಆರಂಭ ತಂಡವನ್ನು ಕುಸಿತದಿಂದ ತಡೆಯುವಲ್ಲಿ ಯಶಸ್ವಿಯಾದ ತಂಡ ಡೆತ್ ಓವರ್‌ನಲ್ಲಿ ಸನ್‌ರೈಸರ್ಸ್ ಬೌಲರ್‌ಗಳನ್ನು ಬೆಂಡೆತ್ತಲು ಆರಂಭಿಸಿದರು. ರಾಹುಲ್ ತೆವಾಟಿಯಾ ರಶೀದ್ ಖಾನ್ ಬೌಲಿಂಗ್‌ನಲ್ಲಿ ಸತತ ಬೌಂಡರಿಗಳ ಸುರಿಮಳೆಗೈದರು.

ಗೆಲುವಿನ ಗುರಿ ಮುಟ್ಟಿಸಿದ ಜೋಡಿ
26 ಎಸೆತಗಳನ್ನು ಎದುರಿಸಿದ ರಿಯಾನ್ ಪರಾಗ್ 42 ರನ್ ಬಾರಿಸಿದರೆ ರಾಹುಲ್ ತೆವಾಟಿಯಾ 28 ಎಸೆತಗಳಲ್ಲಿ 45 ರನ್ ಬಾರಿಸಿದರು. ಈ ಮೂಲಕ ಅಜೇಯವಾಗುಳಿದ ಈ ಜೋಡಿ ಮುರಿಯ 6ನೇ ವಿಕೆಟ್‌ಗೆ 85 ರನ್ ಸೇರಿಸಿ ಗೆಲುವಿನ ದಡ ಮುಟ್ಟಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications