ಪಂದ್ಯದ ವೇಳೆ ರಿಯಾನ್ ಪರಾಗ್ - ರಾಹುಲ್ ತೆವಾಟಿಯಾ ಸೆಲ್ಫಿ ಸಂಭ್ರಮಾಚರಣೆ ; ವಿಡಿಯೋ ನೋಡಿ

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ 18ನೇ ಪಂದ್ಯ ಶನಿವಾರ ( ಏಪ್ರಿಲ್ 24) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತಾ ನೈಟ್ ರೈಡರ್ಸ್ ತಂಡ ದೊಡ್ಡ ಮೊತ್ತವನ್ನು ದಾಖಲಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್‌ಗಳ ಅಬ್ಬರದ ಪ್ರದರ್ಶನಕ್ಕೆ ಮುಂಬೈನಂಥ ಬ್ಯಾಟಿಂಗ್ ಪಿಚ್‌ನಲ್ಲಿಯೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಗ್ಗರಿಸಿತು.
20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೊಲ್ಕತ್ತಾ 133 ರನ್ ದಾಖಲಿಸಿತು. 134 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿಯನ್ನು ಮುಟ್ಟುವುದರ ಮೂಲಕ ಟೂರ್ನಿಯಲ್ಲಿ ಎರಡನೇ ಜಯವನ್ನು ಸಾಧಿಸಿತು. ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ರಿಸ್ ಮೊರಿಸ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಕೊಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್ ವೇಳೆ ಕ್ರಿಸ್ ಮೊರಿಸ್ 20ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದರು. ಆ ಓವರ್‌ನ ಎರಡನೇ ಎಸೆತವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ಪ್ಯಾಟ್ ಕಮಿನ್ಸ್ ಸಿಕ್ಸರ್ ಬಾರಿಸಲು ಯತ್ನಿಸಿದರು, ಆದರೆ ಬೌಂಡರಿ ಲೈನ್ ಬಳಿ ರಿಯಾನ್ ಪರಾಗ್ ಕ್ಯಾಚ್ ಹಿಡಿದ ಕಾರಣ ಕಮಿನ್ಸ್ ವಿಕೆಟ್ ಒಪ್ಪಿಸಿದರು. ಪ್ಯಾಟ್ ಕಮಿನ್ಸ್ ಅವರ ಈ ಕ್ಯಾಚ್ ಹಿಡಿದ ಬಳಿಕ ರಿಯಾನ್ ಪರಾಗ್ ಮೈದಾನದಲ್ಲಿಯೇ ವಿಶಿಷ್ಟವಾದ ರೀತಿಯಲ್ಲಿ ಸಂಭ್ರಮಾಚರಣೆ ಮಾಡುವ ಮೂಲಕ ವೈರಲ್ ಆಗಿದ್ದಾರೆ.
ಪ್ಯಾಟ್ ಕಮಿನ್ಸ್ ಅವರ ಕ್ಯಾಚ್ ಹಿಡಿದ ಬಳಿಕ ರಿಯಾನ್ ಪರಾಗ್ ಸಹ ಆಟಗಾರ ರಾಹುಲ್ ತೆವಾಟಿಯ ಇಬ್ಬರು ಸಹ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ರೀತಿ ಬೌಂಡರಿ ಲೈನ್ ಬಳಿ ಪೋಸ್ ನೀಡಿ ಸಂಭ್ರಮಾಚರಣೆ ಮಾಡಿದರು. ಸದ್ಯ ರಿಯಾನ್ ಪರಾಗ್ ಮತ್ತು ರಾಹುಲ್ ತೆವಾಟಿಯಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ರೀತಿ 2020ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪಂದ್ಯ ಗೆದ್ದಾಗ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಿಯಾನ್ ಪರಾಗ್ ಮೈದಾನದಲ್ಲಿ ಅಸ್ಸಾಮಿ ಶೈಲಿಯ ನೃತ್ಯ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಆ ಸಮಯದಲ್ಲಿಯೂ ಸಹ ರಿಯಾನ್ ಪರಾಗ್ ಅವರ ಸಂಭ್ರಮಾಚರಣೆ ವೈರಲ್ ಆಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications