
ಶುಕ್ರವಾರ (ಏ.8) ಸಂಜೆ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ
ಕೊನೆಯ ಓವರ್ ಎಸೆದ ಓಡಿಯನ್ ಸ್ಮಿತ್ ಬೌಲಿಂಗ್‌ನ ಕೊನೆಯ ಎರಡು ಎಸೆತದಲ್ಲಿ 12 ರನ್‌ಗಳ ಅಗತ್ಯವಿದ್ದಾಗ ರಾಹುಲ್ ತೆವಾಟಿಯಾ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಐತಿಹಾಸಿಕ ಗೆಲವು ತಂದುಕೊಟ್ಟಿದ್ದಾರೆ.
ತೆವಾಟಿಯಾ ಅವರ ಅಬ್ಬರದ ಬ್ಯಾಟಿಂಗ್ ಶೈಲಿಗೆ ಪ್ರಭಾವಿತರಾದ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಎಡಗೈ ಬ್ಯಾಟಮನ್‌ಗೆ ಐಸ್ ಮ್ಯಾನ್ ಎಂಬ ಅಡ್ಡ ಹೆಸರು ಇಡಬೇಕು ಎಂದಿದ್ದಾರೆ. ಅವನ ರಕ್ತನಾಳಗಳಲ್ಲಿ ಮಂಜುಗಡ್ಡೆ ಹರಿದಾಡುತ್ತಿದೆ ಎಂದು ಹೊಗಳಿದ್ದಾರೆ. ಕೊನೆಯ 2 ಎಸೆತಗಳಲ್ಲಿ 12 ಅವಶ್ಯಕತೆ ಇದ್ದಾಗ ಎರಡು ಸಿಕ್ಸರ್ ಗಳನ್ನು ಸಿಡಿಸಿ ಅಜೇಯ ಅಜೇಯ 13 ರನ್ ಗಳಿಸಿದರು. ಈ ಹಿಂದೆ ಐಪಿಎಲ್‌ನಲ್ಲಿ ಎಂ.ಎಸ್ ಧೋನಿ ಮಾತ್ರ ಇದೇ ರೀತಿಯ ಸಾಧನೆ ಮಾಡಿದ್ದರು ಎಂದು ಕೊಂಡಾಡಿದ್ದಾರೆ.
ಗುಜರಾತ್ ತಂಡವನ್ನು ಪೈನಲ್ ವರೆಗೂ ತೆಗೆದುಕೊಂಡು ಹೋಗುವವರು ಯಾರಾದರೂ ಇದ್ದರೆ, ಅದು ತೆವಾಟಿಯಾ ಆಗಿರುತ್ತಾರೆ. ಅವರು ಆಫ್ ಸ್ಟಂಪ್‌ನ ಹೊರಗೆ ಹೋಗಿ ಆ ಹೊಡೆತವನ್ನು ಆಡಲು ಇಷ್ಟಪಡುತ್ತಾರೆ, ಅದನ್ನು ನಾವು ನೋಡಿದ್ದೇವೆ ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.
ರೈಸಿಂಗ್ ಪುಣೆ ಸೂಪರ್‌ಜೈಂಟ್ ಪರ ಆಡುತ್ತಿದ್ದ ಧೋನಿ ಕೊನೆಯ ಎರಡು ಎಸೆತಗಳಲ್ಲಿ ಅಕ್ಷರ್ ಪಟೇಲ್ ಬೌಲಿಂಗ್‌ಗೆ ಸತತ ಸಿಕ್ಸರ್ ಹೊಡೆದು ತಮ್ಮ ತಂಡವನ್ನ ಗೆಲ್ಲಿಸಿದರು. 12 ರನ್‌ಗಳ ಅಗತ್ಯವಿದ್ದಾಗ ಕೊನೆಯ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿ ಗೆಲುವು ಸಾಧಿಸಿದ ಏಕೈಕ ಬ್ಯಾಟರ್ ಎಂ.ಎಸ್ ಧೋನಿಯಾಗಿದ್ದರು. ಆದ್ರೀಗ ತೆವಾಟಿಯಾ ಧೋನಿ ರೀತಿಯಲ್ಲೇ ಸಾಧನೆ ಮಾಡಿದ್ದಾರೆ.
ಗೆಲುವಿನ ನಾಗಾಲೋಟವನ್ನು ಮುಂದೆವರೆಸಲು 190 ರನ್ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್‌ಗೆ ಶುಭಮನ್ ಗಿಲ್ ಉತ್ತಮ ಅಡಿಪಾಯವನ್ನು ನೀಡಿದರು. ಗಿಲ್ 56 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 96 ರನ್ ಗಳಿಸಿದರು. ಸಾಯಿ ಸುದರ್ಶನ್ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ 35 ರನ್ ಗಳಿಸಿದರು ಮತ್ತು ನಾಯಕ ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 27 ರನ್ ಗಳಿಸಿದರು.

ಆದರೆ ಒಡಿಯನ್ ಸ್ಮಿತ್ ಎಸೆದ ಕೊನೆಯ ಓವರ್‌ನಲ್ಲಿ ಜಿಟಿ ತಂಡದ ಗೆಲುವಿಗೆ 19 ರನ್ ಬೇಕಾಗಿತ್ತು. ಮೊದಲ ನಾಲ್ಕು ಎಸೆತಗಳಲ್ಲಿ 7 ರನ್ ನೀಡಿದ್ದು, ಗೆಲುವಿನ ಹಾದಿ ಸುಗಮವಾಗಿತ್ತು ಎನ್ನುವಷ್ಟರಲ್ಲಿ ಅನಗತ್ಯ ಓವರ್‌ಥ್ರೋ ಮಾಡಿದ್ದರಿಂದ ಸ್ಟ್ರೈಕ್ ಗೆ ಬಂದಿದ್ದ ತೆವಾಟಿಯಾ ತಮ್ಮದೇ ಆದ ಶೈಲಿಯಲ್ಲಿ ಆಫ್ ಸ್ಟ್ಂಪ್‌ಗೆ ಕವರ್ ಬಂದು 2 ದೊಡ್ಡ ಹೊಡೆತಗಳಿಂದ ಅಗತ್ಯವಿರುವ ರನ್‌ಗಳನ್ನು ಗಳಿಸಿದರು. ಈ ಮೂಲಕ ಗುಜರಾತ್ ಟೈಟನ್ಸ್ ರೋಚಕ ಗೆಲುವು ಸಾಧಿಸಿ ಟೂರ್ನಿಯಲ್ಲಿ ಅಜೇಯರಾಗಿ ಉಳಿದಿದೆ.