For Quick Alerts
ALLOW NOTIFICATIONS  
For Daily Alerts
 

KL Rahul: 8 ವರ್ಷಗಳ ಬಳಿಕ ರಾಹುಲ್‌ ನರ್ವಸ್‌ 90ಗೆ ಔಟ್‌

ಟೀಮ್ ಇಂಡಿಯಾಕ್ಕೆ ಒಬ್ಬ ಆಪತ್ಭಾಂದವ ಸಿಕ್ಕಿದ್ದಾನೆ. ಆತ ಟೀಮ್ ಇಂಡಿಯಾ ಆತನಿಗೆ ನೀಡುವ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾನೆ. ತಂಡದ ಅವಶ್ಯಕತೆಗೆ ಅನುಗುಣವಾಗಿ ಹಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈ ಪ್ಲೇಯರ್‌, ವಿಕೆಟ್ ಕೀಪರ್‌, ಮಧ್ಯಮ ಕ್ರಮಾಂಕದ ಬ್ಯಾಟರ್‌, ಒಪನರ್ ಹೀಗೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ ಬಳಿಕ, ಈಗ ಆತನ ರೋಲ್‌ ಏನು ಎಂಬುದು ಟೀಮ್ ಮ್ಯಾನೇಜ್ಮೆಂಟ್‌ಗೂ ಅರ್ಥವಾಗಿದೆ. ಹೀಗಾಗಿ ಮ್ಯಾನೇಜ್ಮೆಂಟ್ ಇಂಗ್ಲೆಂಡ್ ಪ್ರವಾಸದಲ್ಲಿ ಯಶಸ್ವಿ ಜೈಸ್ವಾಲ್‌ ಜೊತೆಗೆ ಇನಿಂಗ್ಸ್‌ ಆರಂಭಿಸುವ ಜವಾಬ್ದಾರಿಯನ್ನು ನೀಡಿದೆ.

ಕನ್ನಡಿಗ ಕೆಎಲ್ ರಾಹುಲ್‌ ಇಂಗ್ಲೆಂಡ್‌ ನೆಲದಲ್ಲಿ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮುಂದುವರೆಸಿದ್ದಾರೆ. ನಾಲ್ಕನೇ ಟೆಸ್ಟ್‌ನಲ್ಲಿ ಶತಕ ಬಾರಿಸುವಲ್ಲಿ ರಾಹುಲ್ ವಿಫಲರಾಗಿರಬಹುದು ಆದರೆ, ತಮ್ಮ ತಾಳ್ಮೆಯ ಆಟದಿಂದ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ರಾಹುಲ್‌ 90 ರನ್‌ ಬಾರಿಸಿ ಮುನ್ನುಗುತ್ತಿದ್ದಾಗ ಬೆನ್‌ ಸ್ಟೋಕ್ಸ್‌ ಎಸೆತವನ್ನು ತಪ್ಪಾಗಿ ಗ್ರಹಿಸಿ ಔಟ್ ಆದರು. ಈ ಮೂಲಕ ರಾಹುಲ್‌ 2017ರ ಬಳಿಕ ಇದೇ ಮೊದಲ ಬಾರಿಗೆ ರಾಹುಲ್‌ 90 ರನ್‌ಗಳ ಆಸುಪಾಸಿನಲ್ಲಿ ಔಟ್ ಆಗಿದ್ದಾರೆ.

Rahul s Nervous 90s Denied Century But Breaks Records in England

ಕೆಎಲ್ ರಾಹುಲ್‌ ಈ ಇನಿಂಗ್ಸ್‌ ಮೂಲಕ ಇವರಲ್ಲಿರುವ ರಕ್ಷಾತ್ಮಕ ಆಟದ ಪರಿಚಯವನ್ನು ಮತ್ತೊಮ್ಮೆ ಎಲ್ಲರಿಗೂ ಮಾಡಿಸಿಕೊಟ್ಟಿದೆ. ರಾಹುಲ್‌ 10 ರನ್‌ಗಳ ಅಂತರದಲ್ಲಿ ಪ್ರಸಕ್ತ ಸರಣಿಯ ಮೂರನೇ ಶತಕವನ್ನು ತಪ್ಪಿಸಿಕೊಂಡರು. ಆದರೆ ಒಂದೇ ಟೆಸ್ಟ್‌ ಸರಣಿಯಲ್ಲಿ 500ಕ್ಕೂ ಹೆಚ್ಚು ರನ್‌ ಬಾರಿಸಿದ ದಾಖಲೆಯನ್ನು ಬರೆದರು. ಇದಕ್ಕೂ ಮೊದಲು ರಾಹುಲ್‌ ಅವರ ಬ್ಯಾಟನಿಂದ ಇಂತಹ ಪ್ರದರ್ಶನ ಬಂದಿರಲಿಲ್ಲ. ಪ್ರಸಕ್ತ ಸರಣಿಯಲ್ಲಿ ಕನ್ನಡಿಗ ರಾಹುಲ್ ಆಡಿದ 8 ಇನಿಂಗ್ಸ್‌ಗಳಲ್ಲಿ 63.87ರ ಸರಾಸರಿಯಲ್ಲಿ 511 ರನ್‌ ಕಲೆ ಹಾಕಿದ್ದಾರೆ.

ವೀರೂ ದಾಖಲೆ ಅಳಿಸಿದ ರಾಹುಲ್‌

ಸೇನಾ ರಾಷ್ಟ್ರಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ಆರಂಭಿಕರಾಗಿ ಕನ್ನಡಿಗ ಕೆಎಲ್ ರಾಹುಲ್ ಮತ್ತೊಂದು ಮೈಲುಗಲ್ಲು ಮುಟ್ಟಿದರು. ಇವರು ಈ ರಾಷ್ಟ್ರಗಳಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಆರಂಭಿಕ ಆಟಗಾರರ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮೀರಿ ನಿಂತರು. ಸದ್ಯ ರಾಹುಲ್‌ ಸೇನಾ ದೇಶಗಳಲ್ಲಿ ಆಡಿದ 48 ಇನಿಂಗ್ಸ್‌ಗಳಲ್ಲಿ 1782 ರನ್ ಸಿಡಿಸಿದ್ದು, ಇದರಲ್ಲಿ 6 ಶತಕ, 6 ಅರ್ಧಶತಕಗಳು ಸೇರಿವೆ.ಸೆಹ್ವಾಗ್ ಸೆನಾ ದೇಶಗಳ ವಿರುದ್ಧ 1574 ರನ್ ಗಳಿಸಿದ್ದಾರೆ.

Rahul s Nervous 90s Denied Century But Breaks Records in England

ಈ ಪ್ರದರ್ಶನದ ಬಲದಿಂದ ನಾಯಕ ಶುಭಮನ್‌ ಗಿಲ್ ಹಾಗೂ ಕೆಎಲ್ ರಾಹುಲ್ ಮತ್ತೊಂದು ದಾಖಲೆ ಬರೆದಿದ್ದಾರೆ. ಒಂದೇ ಟೆಸ್ಟ್‌ ಸರಣಿಯಲ್ಲಿ ಭಾರತದ ಪರ 500ಕ್ಕೂ ಹೆಚ್ಚು ರನ್ ಸಿಡಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು 54 ವರ್ಷಗಳ ಹಿಂದೆ ವೆಸ್ಟ್‌ ಇಂಡೀಸ್‌ ವಿರುದ್ಧ ಸುನಿಲ್ ಗವಾಸ್ಕರ್ (774) ಮತ್ತು ದಿಲೀಪ್ ಸರ್ದೇಸಾಯಿ (642) ಈ ಸಾಧನೆ ಮಾಡಿದ್ದರು.

Story first published: Monday, July 28, 2025, 18:19 [IST]
Other articles published on Jul 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+