Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತೀಯ ರೈಲ್ವೆ ಕ್ರಿಕೆಟ್ ಆಟಗಾರರಿಗೆ ಭರ್ಜರಿ ಬಹುಮಾನ ಘೋಷಣೆ

ನವದೆಹಲಿ, ಜುಲೈ 28: ಮಹಿಳೆಯರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ, ಭಾರತೀಯ ರೈಲ್ವೆ ತಂಡದ 10 ಆಟಗಾರರಿಗೆ ರೈಲ್ವೆ ಇಲಾಖೆ ಒಟ್ಟು 1.30 ಕೋಟಿ ರು.ನಗದು ಬಹುಮಾನ ಘೋಷಿಸಿದೆ.

ನಾಯಕಿ ಮಿಥಾಲಿರಾಜ್ ಹಾಗೂ ಸ್ಫೋಟಕ ಬ್ಯಾಟ್ಸ್ ಮನ್‌ ಹರ್ಮನ್ ಪ್ರೀತ್ ಕೌರ್ ಅವರಿಗೆ ಗೆಜೆಟೆಡ್ ಅಧಿಕಾರಿ ಹುದ್ದೆಯನ್ನು ನೀಡುವುದಾಗಿ ಸಚಿವ ಸುರೇಶ್ ಪ್ರಭು ಘೋಷಿಸಿದ್ದಾರೆ.

Railways award Rs 1.30 crore to ten Indian women cricketers

'ಭಾರತದ ಮಹಿಳಾ ತಂಡದವರು ವಿಶ್ವಕಪ್‌ನಲ್ಲಿ ಆಡಿದ ಪರಿ ಎಲ್ಲ ಭಾರತೀಯರಿಗೆ ಅಭಿಮಾನ ಉಂಟು ಮಾಡಿದೆ. ರೈಲ್ವೆ ತಂಡದ ಆಟಗಾರ್ತಿಯರು ತಂಡದಲ್ಲಿರುವುದು ರೈಲ್ವೆ ಇಲಾಖೆಗೆ ಅತ್ಯಭಿಮಾನದ ವಿಷಯ.

ದೇಶದ ಮಹಿಳಾ ತಂಡದವರು ಈ ರೀತಿಯ ಸಾಮರ್ಥ್ಯ ಮೆರೆಯುವರು ಎಂದು ಯಾರೂ ಊಹಿಸಿರಲಿಲ್ಲ. ಅರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮದಿಂದ ಅವರು ಈ ಸಾಧನೆ ಮಾಡಿದ್ದಾರೆ' ಎಂದು ಸುರೇಶ್ ಪ್ರಭು ಹೇಳಿದರು.

'ಮಾಜಿ ನಾಯಕಿ ಡಯಾನ ಯಡುಲ್ಜಿ ಅವರಿಂದ ಈಗಿನ ನಾಯಕಿ ಮಿಥಾಲಿ ರಾಜ್ ವರೆಗಿನ ಬಹುತೇಕ ಎಲ್ಲರೂ ರೈಲ್ವೆ ತಂಡದಲ್ಲಿ ಆಡಿದವರು. ಭಾರತದ ಪುರುಷ ತಂಡದಲ್ಲಿ ರೈಲ್ವೆಯ ಆಟಗಾರರು ಇಲ್ಲ.

ಆದರೆ, ಮಹಿಳಾ ತಂಡದಲ್ಲಿ ಹೆಚ್ಚಿನವರು ರೈಲ್ವೆಯವರು. ಇದು ಒಂಥರಾ ರೈಲ್ವೆ ಬೋಗಿಯನ್ನೇ ಕಾಯ್ದಿರಿಸಿದಂತೆ' ಎಂದು ಸುರೇಶ್ ಪ್ರಭು ಹಾಸ್ಯ ಚಟಾಕಿ ಹಾರಿಸಿದರು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+