Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN 2nd Test: ಮೊದಲ ದಿನದ ಆಟಕ್ಕೆ ಮಳೆಯ ಕಾಟ: 35 ಓವರ್‌ ನಡೆದ ಆಟ

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಎರಡನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯ ಕಾನ್ಪುರ್‌ದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಕೈ ಗೊಂಡಿದೆ. ಮೊದಲ ದಿನಕ್ಕೆ ಮಳೆ ಕಾಟ ನೀಡಿದ್ದರಿಂದ, ಶುಕ್ರವಾರದ ಆಟ ಕೇವಲ 35 ಓವರ್‌ಗಳಿಗೆ ಸೀಮಿತವಾಗಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಮಳೆ ಬಾಧಿತ ಪಂದ್ಯದಲ್ಲಿ ಮೂರು ವಿಕೆಟ್‌ಗೆ 107 ರನ್‌ ಸೇರಿಸಿತು. ಬಾಂಗ್ಲಾ ಪರ ಮೊಮಿನುಲ್ ಹಕ್ (ಅಜೇಯ 40) ಹಾಗೂ ಮುಶ್ಫಿಕರ್ ರಹೀಮ್ (ಅಜೇಯ 6) ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Rain Disrupts IND vs BAN 2nd Test Akash Deep Ashwin Shine

ಬಾಂಗ್ಲಾ ಆರಂಭಕ್ಕೆ ಆಕಾಶ್ ಪೆಟ್ಟು

ಬಾಂಗ್ಲಾ ಪರ ಇನಿಂಗ್ಸ್‌ ಆರಂಭಿಸಿದ ಜಾಕೀರ್ ಹಸನ್ ಹಾಗೂ ಶಾದಮ್ ಇಸ್ಲಾಂ ಜೋಡಿ 24 ರನ್‌ ಜೊತೆಯಾಟವನ್ನು ನೀಡಿತು. ಈ ಜೋಡಿ 9 ಓವರ್‌ಗಳ ಕಾಲ ವಿಕೆಟ್‌ ಬೀಳದಂತೆ ನೋಡಿಕೊಂಡಿತು. ಆದರೆ ಈ ಜೋಡಿಗೆ ಬ್ರೇಕ್‌ ಹಾಕಲು ಆಕಾಶ್ ದೀಪ್ ಯಶಸ್ವಿಯಾದರು. ಇವರು ತಮ್ಮ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಜಾಕೀರ್ ಹಸನ್, ಸ್ಲೀಪ್‌ ನಲ್ಲಿದ್ದ ಯಶಸ್ವಿ ಜೈಸ್ವಾಲ್‌ಗೆ ಕ್ಯಾಚ್ ನೀಡಿದರು.

ಬಾಂಗ್ಲಾದೇಶದ ಪರ ಇನ್ನೊಬ್ಬ ಆರಂಭಿಕ ಆಟಗಾರ ಉತ್ತಮ ಇನಿಂಗ್ಸ್‌ ಕಟ್ಟುವ ಸೂಚನೆಯನ್ನು ಸಹ ನೀಡಿದ್ದರು. ಅಲ್ಲದೆ ಅದಾಗಲೆ 4 ಬೌಂಡರಿ ಬಾರಿಸಿ ಭರವಸೆಯ ಮೂಡಿಸಿದ್ದರು. ಇವರ ಆಟ 26 ರನ್‌ಗಳಿಗೆ ಸೀಮತವಾಯಿತು. ಇವರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಆಕಾಶ್ ದೀಪ್ ಸಫಲರಾದರು. ಈ ಮೂಲಕ ಆಕಾಶ್‌ ದೀಪ್, ಆರಂಭಿಕರಿಬ್ಬರನ್ನೂ ಪೆವಿಲಿಯನ್‌ಗೆ ಅಟ್ಟಿದರು.

Rain Disrupts IND vs BAN 2nd Test Akash Deep Ashwin Shine

ಮೂರನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ

ಇನ್ನು ಬಾಂಗ್ಲಾದೇಶ ತಂಡ 29 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೊಮಿನುಲ್ ಹಕ್ ಹಾಗೂ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಜೋಡಿ ಕೊಂಚ ಭಾರತೀಯ ಬೌಲರ್‌ಗಳನ್ನು ಕಾಡಿತು. ಈ ಜೋಡಿಯನ್ನು ಬೇರ್ಪಡಿಸಲು ಟೀಮ್ ಇಂಡಿಯಾ ಕೆಲ ಕಾಲ ಕಷ್ಟ ಪಟ್ಟಿತು. ಈ ಇಬ್ಬರೂ ಆಟಗಾರರು ಅರ್ಧಶತಕದ ಜೊತೆಯಾಟವನ್ನು ನೀಡಿ ಮುನ್ನುಗುತ್ತಿದ್ದಾಗ ಅಶ್ವಿನ್ ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕಿದರು.

ನಾಯಕ ನಜ್ಮುಲ್ ಹೊಸೈನ್ ಶಾಂಟೊ 6 ಬೌಂಡರಿ ನೆರವಿನಿಂದ 31 ರನ್ ಬಾರಿಸಿದ್ದಾಗ ಅಶ್ವಿನ್ ತೋಡಿದ ಖೆಡ್ಡಾಗೆ ಬಲಿಯಾದರು. ಈ ಮೂಲಕ ಅಶ್ವಿನ್ ಮತ್ತೊಂದು ಮೈಲಿಗಲ್ಲು ಮುಟ್ಟಿದರು.

ಅಶ್ವಿನ್ ಸಾಧನೆ

ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ ಮೊದಲ ಸ್ಥಾನ ಪಡೆದರು. ಅಶ್ವಿನ್‌ ಏಷ್ಯಾದಲ್ಲಿ 420 ವಿಕೆಟ್‌ ಪಡೆದು ಬೀಗಿದ್ದಾರೆ. ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್‌ಗೆ ಮೊದಲ ಸ್ಥಾನದಲ್ಲಿದ್ದಾರೆ. ಮುರಳೀಧರನ್ ಏಷ್ಯಾದಲ್ಲಿ 612 ವಿಕೆಟ್ ಕಬಳಿಸಿದ್ದಾರೆ. ಲಂಕಾ ಸ್ಪಿನ್ ಮಾಂತ್ರಿಕ ಸಾಧನೆ ಹಿಂದಿಕ್ಕಲು ಅಶ್ವಿನ್‌ಗೆ 193 ವಿಕೆಟ್‌ಗಳ ಅಗತ್ಯವಿದೆ.

Story first published: Friday, September 27, 2024, 16:51 [IST]
Other articles published on Sep 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+