Brisbane Test: ಮೊದಲ ದಿನದಾಟಕ್ಕೆ ಮಳೆ ಅಡ್ಡಿ; ಭಾರತಕ್ಕೆ ಶುರುವಾಯ್ತು ಢವಢವ!
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಟೆಸ್ಟ್‌ಗಳ ಸರಣಿಯ ಮೂರನೇ ಪಂದ್ಯವು ಶನಿವಾರ ಬ್ರಿಸ್ಬೇನ್‌ನಲ್ಲಿ ಪ್ರಾರಂಭವಾಗಿದೆ. ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಆದರೆ ಪಂದ್ಯದ ಮೊದಲ ದಿನವೇ ಮಳೆರಾಯನ ದರ್ಶನವಾಗಿದೆ. ಮೊದಲ ದಿನ ಸಂಪೂರ್ಣವಾಗಿ ಮಳೆಯಿಂದಾಗಿ 13.2 ಓವರ್‌ಗಳು ಮಾತ್ರ ಆಡಲು ಸಾಧ್ಯವಾಯಿತು. ಮೊದಲ ದಿನದಾಟಕ್ಕೆ ಆಸ್ಟ್ರೇಲಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಉಸ್ಮಾನ್ ಖವಾಜ ಅಜೇಯ 19 ಮತ್ತು ನಾಥನ್ ಮೆಕ್‌ಸ್ವೀನಿ 4 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಭಾರತಕ್ಕೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಸುಮಾರು 4 ಗಂಟೆ ಕಾಲ ಕಳೆದರು ವರುಣನ ಆರ್ಭಟ ಮುಂದುರೆಯಿತು. ಹೀಗಾಗಿ ಮೊದಲ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು.
ಹವಾಮಾನ ಇಲಾಖೆ ವರದಿ ಪ್ರಕಾರ 4 ದಿನಗಳ ಕಾಲ ಬ್ರಿಸ್ಬೇನ್‌ನಲ್ಲಿ ಮಳೆ ಮುಂದುವರೆಯಲಿದೆ. ಒಂದು ವೇಳೆ ನಾಲ್ಕು ದಿನಗಳ ಕಾಲ ಮಳೆ ಮುಂದುವರೆದರೆ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಬ್ರಿಸ್ಬೇನ್ ಟೆಸ್ಟ್ ಪಂದ್ಯ ಮಳೆಯಿಂದ ಫಲಿತಾಂಶ ಕಾಣದೆ ಅಂತ್ಯಗೊಂಡರೆ ಭಾರತಕ್ಕೆ ವಿಶ್ವ ಚಾಂಪಿಯನ್ ಶಿಪ್ (ಡಬ್ಲ್ಯೂಟಿಸಿ) ಫೈನಲ್ ಹಾದಿ ಕಠಿಣವಾಗಲಿದೆ.
ಬ್ರಿಸ್ಬೇನ್ ಟೆಸ್ಟ್ ಡ್ರಾಗೊಂಡರೆ, ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ ಭಾರತಕ್ಕೆ ಡಬ್ಲ್ಯೂಟಿಸಿ ಫೈನಲ್ ತಲುಪುವ ಹಾದಿ ಕಠಿಣವಾಗಲಿದೆ. ಈಗಾಗಲೇ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡು ಟೆಸ್ಟ್ ಪಂದ್ಯಗಳು ನಡೆದಿದ್ದು, ಒಂದರಲ್ಲಿ ಭಾರತ ಗೆದ್ದರೆ, ಇನ್ನೊಂದರ ಆಸ್ಟ್ರೇಲಿಯಾ ಜಯ ಗಳಿಸಿದೆ. ಹೀಗಾಗಿ ಬ್ರಿಸ್ಬೇನ್ ಟೆಸ್ಟ್ ಡ್ರಾಗೊಂಡರೆ ಆಸ್ಟ್ರೇಲಿಯಾ ವಿರುದ್ಧ ಮುಂದಿನ ಎರಡು ಟೆಸ್ಟ್‌ಗಳನ್ನು ಭಾರತ ಗೆಲ್ಲಲೇಬೇಕು. ಅಲ್ಲದೆ, ಭಾರತದ ಡಬ್ಲ್ಯೂಟಿಸಿ ಫೈನಲ್ ಭವಿಷ್ಯ ಇತರ ತಂಡಗಳ ಫಲಿತಾಂಶಗಳ ಮೇಲೆ ನಿರ್ಧಾರವಾಗಲಿದೆ. ಒಂದು ವೇಳೆ ಮುಂದಿನ ನಾಲ್ಕು ದಿನಗಳು ಬ್ರಿಸ್ಬೇನ್‌ನಲ್ಲಿ ಮಳೆಯಾಗದೆ ಭಾರತ ಗೆಲುವು ಸಾಧಿಸಿದರೇ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಲುಪಲಿದೆ.
ಪ್ರಸ್ತುತ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಿಗೆ ಭಾರೀ ಪೈಪೋಟಿ ನಡೆಯುತ್ತಿದೆ. ಸದ್ಯ
ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಮತ್ತು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
ಸೇಡಿಗೆ ಭಾರತ ಸಜ್ಜು
ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 295 ರನ್‌ಗಳಿಂದ ಭಾರತ ಸೋಲಿಸಿತ್ತು. ಬಳಿಕ ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಮುಗ್ಗರಿಸಿತ್ತು. ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಿದ್ದರು. ಆದರೆ ಭಾರತ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಪರಿಣಾಮ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಕೇವಲ 19 ರನ್ಗಳ ಗುರಿಯನ್ನು ನೀಡಿತ್ತು. ಇದನ್ನು ಬೆನ್ನತ್ತಿದ್ದ ಕಾಂಗರೂ ಪಡೆ 10 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. ಜೊತೆಗೆ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಭಾರತವನ್ನು ಆಸ್ಟ್ರೇಲಿಯಾ ಹಿಂದಿಕ್ಕಿತ್ತು. ಇದೀಗ ಮೂರನೇ ಟೆಸ್ಟ್ ಗೆಲುವಿನ ಮೇಲೆ ಭಾರತ ಕಣ್ಣಿಟ್ಟಿದ್ದು, ಸೋಲಿನ ಸೇಡಿಗೆ ಸಜ್ಜಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications