Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs KKR: ಆರ್‌ಸಿಬಿ, ಕೆಕೆಆರ್‌ ಪಂದ್ಯ ಮಳೆಗೆ ಆಹುತಿ: ಅಗ್ರಸ್ಥಾನಕ್ಕೆ ಬೆಂಗಳೂರು ಬಡ್ತಿ

18ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2025) ಮತ್ತೊಂದು ಪಂದ್ಯ ಮಳೆಗೆ ಆಹುತಿಯಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಶನಿವಾರ ನಡೆದ 58ನೇ ಪಂದ್ಯ ಸ್ಥಗಿತವಾಗಿದೆ. ಈ ಪಂದ್ಯದಲ್ಲಿ ಕೆಕೆಆರ್‌ ಹಾಗೂ ಆರ್‌ಸಿಬಿ ತಂಡಗಳು ಅಂಕಗಳನ್ನು ಹಂಚಿಕೊಂಡಿವೆ. ಈ ಒಂದು ಅಂಕಗಳೊಂದಿಗೆ ಆರ್‌ಸಿಬಿ ಆಡಿದ 12 ಪಂದ್ಯಗಳಲ್ಲಿ 17 ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ಪ್ಲೇ ಆಫ್‌ ಪ್ರವೇಶಿಸುವ ಆಸೆ ಕೊಂಚ ದೂರ ಸರಿದಿದೆ. ಒಂದು ವಾರಗಳಿಗ ಬಳಿಕ ಐಪಿಎಲ್‌ ಮತ್ತೆ ಆರಂಭವಾಗಿದೆ.

ಭಾರತ ಹಾಗೂ ಪಾಕ್‌ ನಡುವಣ ಉದ್ವಿಗ್ನತೆಯಿಂದ ಮೇ 8 ರಂದು ಐಪಿಎಲ್ ಪಂದ್ಯ ರದ್ದಾಗಿತ್ತು. ಬಿಸಿಸಿಐ ಒಂದು ವಾರ ಪಂದ್ಯಗಳನ್ನು ಮುಂದೂಡಿತ್ತು. ಶನಿವಾರದಿಂದ ಐಪಿಎಲ್‌ ಆರಂಭವಾಗಿವೆ. ಆದರೆ ಮೊದಲ ಪಂದ್ಯಕ್ಕೆ ಮಳೆ ಕಾಟ ನೀಡಿದೆ. ಕೆಕೆಆರ್‌ 13 ಪಂದ್ಯಗಳಲ್ಲಿ 5 ಜಯ, 6 ಸೋಲು ಕಂಡಿದ್ದು, 12 ಅಂಕಗಳನ್ನು ಕಲೆ ಹಾಕಿದ್ದು, ಪ್ಲೇ ಆಫ್‌ ಆಸೆ ಕಮರಿದಂತೆ ಆಗಿದೆ.

Rain Forces No-Result in RCB vs KKR Clash RCB Tops IPL 2025 Table with 17 Points

ಆರ್‌ಸಿಬಿ ಆಡಿದ 12 ಪಂದ್ಯಗಳಲ್ಲಿ 8 ಜಯ, 3 ಸೋಲು ಕಂಡಿದ್ದು, 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಅಂಕವನ್ನು ಹಂಚಿಕೊಳ್ಳುವ ಮೂಲಕ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸುವ ಕನಸು ಇನ್ನು ಹತ್ತಿರವಾಗಿದೆ. ಆರ್‌ಸಿಬಿ ಇನ್ನು 2 ಪಂದ್ಯಗಳನ್ನು ಆಡಲಿದ್ದು, ಈ 2 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದರೂ ಪ್ಲೇ ಆಫ್‌ ಪ್ರವೇಶಿಸುವ ಆಸೆ ಫಲಿಸುತ್ತದೆ.

ವಿರಾಟ್‌ಗೆ ಗೌರವ

ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್‌ ವಿರಾಟ್‌ ಕೊಹ್ಲಿ ಇತ್ತೀಚಿಗೆ ಟೆಸ್ಟ್‌ ಪಂದ್ಯಗಳಿಗೆ ವಿದಾಯ ಹೇಳಿದ್ದರು. ವಿರಾಟ್‌ ವಿದಾಯದಿಂದ ಅಭಿಮಾನಿಗಳು ಬೇಸರವಾಗಿದ್ದಾರೆ. ಇನ್ನು ಇವರಿಗೆ ವಿಶೇಷ ಗೌರವ ಸೂಚಿಸಲು ಅಭಿಮಾನಿಗಳು ಆರ್‌ಸಿಬಿ ಹಾಗೂ ಕೆಕೆಆರ್‌ ನಡುವಣ ಪಂದ್ಯದ ವೇಳೆ ಬಿಳಿ ಬಣ್ಣದ ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಬಂದಿದ್ದರು. ಈ ಮೂಲಕ ಆರ್‌ಸಿಬಿ ಅಭಿಮಾನಿಗಳು ವಿಶೇಷ ಗೌರವ ನೀಡಿದರು.

Rain Forces No-Result in RCB vs KKR Clash RCB Tops IPL 2025 Table with 17 Points

ಕೆಕೆಆರ್‌ ಭವಿಷ್ಯ ಏನು?

ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡದ ಪ್ಲೇ ಆಫ್‌ ಪ್ರವೇಶಿಸುವ ಆಸೆ ಕಷ್ಟ ಕಷ್ಟವಾಗಿದೆ. ಕೆಕೆಆರ್‌ ಆಡಿದ 13 ಪಂದ್ಯಗಳಲ್ಲಿ 5 ಜಯ, 6 ಸೋಲು ಕಂಡಿದೆ. ಅಲ್ಲದೆ 2 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ ಕೆಕೆಆರ್‌ ಮುಂದಿನ ಒಂದು ಪಂದ್ಯವನ್ನು ಗೆದ್ದರೆ 14 ಅಂಕಗಳನ್ನು ಕಲೆ ಹಾಕಬಹುದು. ಈ ಮೂಲಕ ಕೆಕೆಆರ್‌ ಬೇರೆ ತಂಡಗಳ ಫಲಿತಾಂಶವನ್ನು ಕಾದು ನೋಡಬೇಕಿದೆ. ಕೆಕೆಆರ್‌ ಪ್ಲೇ ಆಫ್‌ ಪ್ರವೇಶಿಸುವುದು ಕೊಂಚ ಕಷ್ಟವಾಗಿದೆ. ಮೇಲಿರುವ ಮುಂಬೈ, ಡೆಲ್ಲಿ ತಂಡಗಳು ಮುಂದಿನ ಪಂದ್ಯಗಳಲ್ಲಿ ಸೋತು, ರನ್‌ ರೇಟ್‌ನಲ್ಲಿ ಹಿಂದಿರಬೇಕಾಗುತ್ತದೆ. ಅಂದಾಗ ಮಾತ್ರ ಕೆಕೆಆರ್‌ ಮುಂದಿನ ಹಂತ ಪ್ರವೇಶಿಸುವ ಆಸೆ ಫಲಿಸುತ್ತದೆ.

Story first published: Saturday, May 17, 2025, 23:28 [IST]
Other articles published on May 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+