Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs PBKS Qualifier 2: 2ನೇ ಕ್ವಾಲಿಫೈಯರ್‌ಗೆ ಮಳೆ ಕಾಟ: ಪಂದ್ಯ ರದ್ದಾದ್ರೆ...

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಎರಡನೇ ಕ್ವಾಲಿಫೈಯರ್‌ ಪಂದ್ಯಕ್ಕೆ ಮಳೆ ಕಾಟ ನೀಡಿದೆ. ಈ ಪಂದ್ಯದಲ್ಲಿ ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿರುವ ಮಂಬೈ ಇಂಡಿಯನ್ಸ್‌ ಹಾಗೂ ಮೊದಲ ಕ್ವಾಲಿಫೈಯರ್‌ ಆರ್‌ಸಿಬಿ ವಿರುದ್ಧ ಸೋಲು ಕಂಡಿರುವ ಪಂಜಾಬ್ ಕಿಂಗ್ಸ್ ತಂಡಗಳು ಈ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯಕ್ಕೂ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನ ಸಾಕ್ಷಿಯಾಗಲಿದೆ.

ಈ ಮಹತ್ವದ ಪಂದ್ಯದಲ್ಲಿ ಟಾಸ್‌ ಪಂಜಾಬ್ ಕಿಂಗ್ಸ್ ಪಾಲಾಗಿತ್ತು. ಟಾಸ್‌ ಗೆದ್ದ ಶ್ರೇಯಸ್ ಅಯ್ಯರ್‌ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿದರು. ಆದರೆ ಈ ವೇಳೆ ಪಂದ್ಯಕ್ಕೆ ಮಳೆ ಕಾಟ ನೀಡಿದ್ದರಿಂದ, ಪಂದ್ಯ ಸದ್ಯಕ್ಕೆ ನಿಂತಿದೆ. ಕಳೆದ ಕೆಲವು ಪಂದ್ಯಗಳಲ್ಲಿ ಗಾಯದ ಸಮಸ್ಯೆಯಿಂದ ಹೊರಗಿದ್ದ ಯುಜುವೇಂದ್ರ ಚಹಾಲ್‌ ಮಹತ್ವದ ಪಂದ್ಯಕ್ಕೆ ತಂಡ ಸೇರಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಉಭಯ ತಂಡಗಳು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿವೆ.

Rain Halts Punjab Kings vs Mumbai Indians Qualifier 2 in Ahmedabad Punjab to Benefit if Match Abandoned

ಮಳೆ ಮುಂದುವರೆದರೆ...

ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಮೀಸಲು ದಿನವಿಲ್ಲ. ಮಳೆಯಿಂದಾಗಿ ಯಾವುದೇ ದೊಡ್ಡ ಪಂದ್ಯಕ್ಕೆ ಮೀಸಲು ದಿನವನ್ನು ಇರಿಸಲಾಗುತ್ತದೆ. ನಿಗದಿತ ದಿನದಂದು ಪಂದ್ಯ ನಡೆಯದೇ ಇದ್ದರೆ, ಮಾರನೇ ದಿನ ಪಂದ್ಯ ನಡೆಯಿತು. ಆದರೆ ಐಪಿಎಲ್ 2025 ಕ್ವಾಲಿಫೈಯರ್ -2 ರಲ್ಲಿ ಯಾವುದೇ ಮೀಸಲು ದಿನವಿಲ್ಲ. ಬಿಸಿಸಿಐ ಈ ಪಂದ್ಯಕ್ಕಾಗಿ ಹೆಚ್ಚುವರಿ 2 ಗಂಟೆ ಸಮಯವನ್ನು ನೀಡಿದೆ. ಆದರೆ ಆಗಲೂ ಪಂದ್ಯ ನಡೆಯದೇ ಇದ್ದರೆ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ತಂಡಕ್ಕೆ ಲಾಭವಾಗಲಿದೆ. ಅಂಕ ಪಟ್ಟಿಯ ಮೊದಲ ಸ್ಥಾನದಲ್ಲಿ ಪಂಜಾಬ್ ಮತ್ತು ನಾಲ್ಕನೇ ಸ್ಥಾನದಲ್ಲಿ ಮುಂಬೈ ಇದೆ. ಒಂದು ವೇಳೆ ಪಂದ್ಯ ರದ್ದಾದರೆ, ಪಂಜಾಬ್‌ ಫೈನಲ್‌ಗೆ ತಲುಪಬಹುದು.

ಪಂಜಾಬ್ ತಂಡ: ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್‌ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋನಿಸ್, ಅಜ್ಮತುಲ್ಲಾ ಒಮರ್ಜಾಯ್, ವೈಶಾಕ್ ವಿಜಯ್‌ಕುಮಾರ್, ಕೈಲ್ ಜೇಮಿಸನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್

ಮುಂಬೈ ಇಂಡಿಯನ್ಸ್‌ ತಂಡ: ರೋಹಿತ್ ಶರ್ಮಾ, ಜಾನಿ ಬೈರ್‌ಸ್ಟೋವ್ (ವಿಕೆಟ್‌ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ನಮನ್ ಧೀರ್, ಹಾರ್ದಿಕ್ ಪಾಂಡ್ಯ (ನಾಯಕ), ರಾಜ್ ಬಾವಾ, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ರೀಸ್ ಟೋಪ್ಲೆ

Story first published: Sunday, June 1, 2025, 20:42 [IST]
Other articles published on Jun 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+