Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA Final: ಬಾರ್ಬಡೋಸ್‌ನಲ್ಲಿ ಶೇ.70 ರಷ್ಟು ಮಳೆ ಸಾಧ್ಯತೆ; ಫೈನಲ್‌ ಪಂದ್ಯ ರದ್ದಾದರೆ ಚಾಂಪಿಯನ್ ಯಾರು?

ಜೂನ್‌ 29 ಶನಿವಾರ, ಟಿ20 ವಿಶ್ವಕಪ್ 2024ರ ಫೈನಲ್‌ ಪಂದ್ಯವು ಶನಿವಾರ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ ಸ್ಟೇಡಿಯಂನಲ್ಲಿ ರೋಹಿತ್‌ ಶರ್ಮಾ ನಾಯಕತ್ವದ ಭಾರತ ಮತ್ತು ಐಡೆನ್‌ ಮಾರ್ಕ್ರಾಮ್‌ ಮುನ್ನೆಡೆಸುತ್ತಿರುವ ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ.

ಎರಡೂ ತಂಡಗಳು ಇದುವರೆಗೆ ಟೂರ್ನಿಯಲ್ಲಿ ಅಜೇಯವಾಗಿದ್ದು, ಯಾವುದೇ ಪಂದ್ಯವನ್ನು ಸೋಲದೆ ಫೈನಲ್‌ ತಲುಪಿರುವ ದಾಖಲೆ ಮಾಡಿವೆ. ಹೀಗಿರುವಾಗ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

Rain threat for India vs South Africa T20 World Cup 2024 Final

ಟೀಮ್‌ 10 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ಕೊನೆಗಾಣಿಸುವ ಉದ್ದೇಶದಿಂದ ಮೈದಾನಕ್ಕಿಳಿಯಲಿದೆ. ಇನ್ನೊಂದೆಡೆ ಚೋಕರ್ಸ್ ಪಟ್ಟ ಕಟ್ಟಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡವು ತನ್ನ ಮೊದಲ ಐಸಿಸಿ ಪ್ರಶಸ್ತಿಯನ್ನು ಗೆಲ್ಲಲು ಭರ್ಜರಿ ತಯಾರಿ ನಡೆಸಿದೆ.

ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿ

ಇಂದು (ಶನಿವಾರ) ನಡೆಯಲಿರುವ 2024ರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಇದು ಕ್ರಿಕೆಟ್‌ ಅಭಿಮಾನಿಗಳಿಗೆ ಆತಂಕದ ಜೊತೆಗೆ ನಿರಾಸೆ ಮೂಡಿಸಿದೆ.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ಮಳೆಯಿಂದ ತಪ್ಪಿಸಿಕೊಂಡಿತ್ತು. ಇದೀಗ ಶನಿವಾರ ಬಾರ್ಬಡೋಸ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೂ ಮಳೆಯ ಕಪ್ಪು ನೆರಳು ಆವರಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಫೈನಲ್‌ನಲ್ಲಿ ಮಳೆ ಹೆಚ್ಚಿನ ಪಾತ್ರವಹಿಸುವ ನಿರೀಕ್ಷೆಯಿದೆ.

ಶೇ.70ರಷ್ಟು ಮಳೆ ಸಾಧ್ಯತೆ

ಹವಾಮಾನ ಇಲಾಖೆ ಪ್ರಕಾರ ಶನಿವಾರ ಮಧ್ಯಾಹ್ನ ಬಾರ್ಬಡೋಸ್‌ನಲ್ಲಿ ಶೇ.99ರಷ್ಟು ಮೋಡ ಕವಿದಿರುವ ಕಾರಣ ಮಳೆಯಾಗುವ ಸಾಧ್ಯತೆ ಇದೆ. ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ಬಲವಾದ ಗಾಳಿ ಮತ್ತು ಭಾರೀ ಮಳೆ ನಿರೀಕ್ಷಿಸಲಾಗಿದೆ.

ಫೈನಲ್ ಪಂದ್ಯವ ವೇಳೆ ಮಳೆಯ ಸಂಭವನೀಯತೆ ಶೇಕಡಾ 70 ರಷ್ಟಿದೆ. ಹೀಗಾಗಿ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯವನ್ನು ಅಚ್ಚುಕಟ್ಟಾಗಿ ನಡೆಸುವುದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಜವಾಬ್ದಾರಿಯಾಗಿದೆ.

ಮೀಸಲು ದಿನವೂ ಮಳೆ ಆಗುವ ಮುನ್ಸೂಚನೆ

ಜೂನ್ 29 ರಂದು ನಡೆಯಲಿರುವ ಫೈನಲ್‌ ಪಂದ್ಯಕ್ಕೆ ಜೂನ್ 30 ರ ಭಾನುವಾರವನ್ನು ಐಸಿಸಿ ಮೀಸಲು ದಿನವನ್ನಾಗಿ ಇರಿಸಿದೆ. ಒಂದು ವೇಳೆ ಇಂದು ಮಳೆ ಅಡ್ಡಿಯಾಗಿ ಫೈನಲ್‌ ಪಂದ್ಯ ರದ್ದಾದರೆ, ಭಾನುವರ ಮೀಸಲು ದಿನದಂದು ಫೈನಲ್‌ ಪಂದ್ಯ ನಡೆಯಲಿದೆ.

ಆದರೆ ಹವಾಮಾನ ಇಲಾಖೆ ಭಾನುವಾರವೂ ಮಳೆಯಾಗುವ ಮುನ್ಸೂಚನೆ ನೀಡಿರುವುದು ಆತಂಕಕಾರಿ ಸಂಗತಿ. ಹವಾಮಾನ ಇಲಾಖೆ ಪ್ರಕಾರ, ಜೂನ್ 30 ರಂದು ಮಧ್ಯಾಹ್ನದ ನಂತರವೂ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಈ ದಿನವು ಹೆಚ್ಚಾಗಿ ಮೋಡ ಮತ್ತು ತೇವಾಂಶದಿಂದ ಕೂಡಿರುತ್ತದೆ. ಬೆಳಿಗ್ಗೆ ಗಾಳಿ ಇರಲಿದ್ದು, ನಂತರ ಮಧ್ಯಾಹ್ನ ಮಳೆಯೊಂದಿಗೆ ಬಿರುಗಾಳಿ ಇರಲಿದೆ ಎಂದು ತಿಳಿಸಿದೆ.

ಪಂದ್ಯ ರದ್ದಾದರೆ ಚಾಂಪಿಯನ್ ಯಾರು?

ಶನಿವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಪ್ರಶಸ್ತಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಭಾನುವಾರ ಮೀಸಲು ದಿನದಂದು ಪಂದ್ಯ ನಡೆಯಲಿದೆ. ಮಳೆಯಿಂದಾಗಿ ಭಾನುವಾರವೂ ನಿಗದಿತ ಸಮಯಕ್ಕೆ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಐಸಿಸಿ 190 ನಿಮಿಷಗಳ ಹೆಚ್ಚುವರಿ ಸಮಯವನ್ನು ಇರಿಸಿದೆ.

ಈ ಸಮಯದಲ್ಲಿಯೂ ಮಳೆ ಆಟವನ್ನು ಆಡಲು ಅನುಮತಿಸದಿದ್ದರೆ ಮತ್ತು ಅಂತಿಮ ಪಂದ್ಯವು ಮಳೆಯಿಂದಾಗಿ ರದ್ದಾದರೆ ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು 2024ರ ಟಿ20 ವಿಶ್ವಕಪ್‌ ಟೂರ್ನಿಯ ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.

Story first published: Saturday, June 29, 2024, 7:43 [IST]
Other articles published on Jun 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+