Gabba Test: ಭಾರತ, ಆಸ್ಟ್ರೇಲಿಯಾ ಪ್ರದರ್ಶನಕ್ಕಿಂತ ಮಳೆ ಮೇಲೆ ಅವಲಂಬಿತವಾಗಿದೆ ಫಲಿತಾಂಶ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯತ್ತಿದೆ. ಈ ಟೆಸ್ಟ್ ಪಂದ್ಯಕ್ಕೆ ಮಳೆ ಬಹುವಾಗಿ ಕಾಟ ನೀಡಿದೆ. ಹೀಗಾಗಿ ಐದನೇ ದಿನದತ್ತ ಎಲ್ಲರ ಚಿತ್ತ ನೆಟ್ಟಿದೆ. ಟೀಮ್ ಇಂಡಿಯಾ ತನ್ನ ಮೊದಲ ಇನಿಂಗ್ಸ್‌ನಲ್ಲಿ ಇನ್ನು ಒಂದು ವಿಕೆಟ್ ಉಳಿಸಿಕೊಂಡಿದ್ದು, ಫಾಲೋ ಆನ್ ಭೀತಿಯಿಂದ ಪಾರಾಗಿದೆ. ಇನ್ನು ಪಂದ್ಯ ನಡೆದ ನಾಲ್ಕು ದಿನವೂ ಸಹ ಮಳೆ ಆಗಾಗ ಕಾಟ ನೀಡಿದೆ. ಹಾಗಿದ್ದರೆ ಐದನೇ ದಿನದಾಟ ಹೇಗಿರಲಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತ ಟಾಸ್ ಗೆದ್ದ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ಆಸೀಸ್ 445 ರನ್‌ಗಳಿಗೆ ಆಲೌಟ್ ಆಯಿತು. ಇನ್ನು ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಮಂಗಳವಾರದ ಆಟದ ಅಂತ್ಯಕ್ಕೆ 9 ವಿಕೆಟ್‌ಗೆ 252 ರನ್ ಸೇರಿಸಿದ್ದು, 193 ರನ್‌ಗಳ ಹಿನ್ನಡೆ ಅನುಭವಿಸುತ್ತಿದೆ. ಐದನೇ ದಿನವೂ ಪಂದ್ಯಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಪಂದ್ಯದ ಫಲಿತಾಂಶವು ಇಬ್ಬರ ಪ್ರದರ್ಶನಕ್ಕಿಂತ ಹವಾಮಾನದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.

ನಾಲ್ಕನೇ ದಿನದಾಟದಂತೆ ಬ್ರಿಸ್ಬೇನ್‌ನಲ್ಲಿ ಬುಧವಾರವೂ ಮಳೆ ಬೀಳುವ ಸಾಧ್ಯತೆ ಇದೆ. ಮಳೆಯಿಂದಾಗಿ ದಿನಪೂರ್ತಿ ವೇಸ್ಟ್ ಆಗುವುದಿಲ್ಲ. ಬದಲಿಗೆ ಮಂಗಳವಾರದಂತೆ ಮಳೆ ಆಗಾಗ್ಗೆ ಬಂದು ಹೋಗಲಿದೆ. ಬುಧವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಶೇಕಡಾ 31 ರಷ್ಟು ಮಳೆ ಆಗುವ ಸಾಧ್ಯತೆ ಇದೆ. ಇನ್ನು 11 ರಿಂದ 12 ಮಳೆ ಕಡಿಮೆ ಆಗುವ ಸಾಧ್ಯತೆ ಇದೆ. 1 ಗಂಟೆ ಸುಮಾರಿಗೆ ಶೇ.28 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ, 1 ಗಂಟೆ ನಂತರ ಮಳೆಯಾಗುವ ಸಾಧ್ಯತೆ ಇಲ್ಲ.
ವಾತಾವರಣದ ಮೇಲೆ ಫಲಿತಾಂಶ ಅವಲಂಬಿತ
ನಿಜಕ್ಕೂ ಮೂರನೇ ಟೆಸ್ಟ್ ರೋಚಕತೆ ಹುಟ್ಟಿಸಿದೆ. ಭಾರತ ಫಾಲೋ ಆನ್ ಬಚಾವ್ ಮಾಡಿಕೊಂಡಿದ್ದು, ಆಸ್ಟ್ರೇಲಿಯಾಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ಮಾಡುವ ಅನಿವಾರ್ಯತೆ ಸೃಷ್ಟಿಸಿದೆ. ಇನ್ನು ಬುಧವಾರದ ಆಟಕ್ಕೂ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಪಂದ್ಯ ಡ್ರಾ ಆಗುವ ಸಾಧ್ಯತೆ ಇದ್ದ ಹಾಗೆ ತೋರುತ್ತಿದ್ದರೂ, ಕ್ರಿಕೆಟ್ ಆಟದಲ್ಲಿ ಏನು ಬೇಕಾದ್ರೂ ಆಗಬಹುದು. ಭಾರತದ ಕೊನೆಯ ಜೋಡಿ ಅಂದರೆ ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬುಮ್ರಾ ಎಷ್ಟು ಸಮಯದವರೆಗೆ ಬ್ಯಾಟ್ ಮಾಡುತ್ತದೆ ಎಂಬುದು ಕುತೂಹಲ ಹೆಚ್ಚಿಸಿದೆ. ಇನ್ನು ಆಸೀಸ್ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಪ್ರದರ್ಶನ ಹೇಗೆ ನೀಡಲಿದೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ಅವಲಂಬಿತವಾಗಿರಲಿದೆ.

ಮೂರನೇ ಟೆಸ್ಟ್ ಪಂದ್ಯವೂ ಸಹ ಆಸ್ಟ್ರೇಲಿಯಾ ಹಿಡಿತದಲ್ಲೇ ಇತ್ತು. ಆದರೆ ಈಗ ಅದರ ಹಿಡಿತ ಸಡಿಲಗೊಂಡಿದೆ. ಆಸ್ಟ್ರಲಿಯಾ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಬಾರದು ಎಂದು ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ ಟೀಮ್ ಇಂಡಿಯಾ ಲಾಸ್ಟ್ ವಿಕೆಟ್‌ಗೆ ಬ್ಯಾಟರ್‌ಗಳು ತೋರಿದ ಕೆಚ್ಚೆದೆಯ ಆಟದ ಪರಿಣಾಮ, ಆಸೀಸ್ ಆಸೆಗೆ ಪೆಟ್ಟು ಬಿದ್ದಿದೆ. ಆಸೀಸ್ ಎರಡನೇ ಇನಿಂಗ್ಸ್‌ನಲ್ಲಿ ಭಾರತಕ್ಕೆ ಎಷ್ಟು ರನ್‌ಗಳ ಗುರಿ ನೀಡುತ್ತದೆ ಎಂಬುದೇ ಕುತೂಹಲ ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications