Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Gabba Test: ಟೀಮ್ ಇಂಡಿಯಾ ಚಿಂತೆ ಹೆಚ್ಚಿಸಿದ ಬ್ರಿಸ್ಬೇನ್‌ ವಾತಾವರಣ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ಕದ್ದಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಟೆಸ್ಟ್‌ ಗೆದ್ದಿರುವುದರಿಂದ, ಮೂರನೇ ಪಂದ್ಯ ರೋಚಕತೆ ಹುಟ್ಟಿಸಿದೆ. ಈ ವೇಳೆ ಟೀಮ್‌ ಇಂಡಿಯಾ ಅಭಿಮಾನಿಗಳಿಗೆ ಬೇಸರದ ಸಂಗತಿಯೊಂದು ಸಿಕ್ಕಿದೆ. ಹಾಗಿದ್ದರೆ ಆ ಸುದ್ದಿ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಗಬ್ಬಾದ ಐತಿಹಾಸಿಕ ಅಂಗಳದಲ್ಲಿ ಮೂರನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಕಂ ಬ್ಯಾಕ್ ಮಾಡಲು ತಯಾರಿ ನಡೆಸಿದೆ. ಈ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾದ ಆಟಗಾರರು ಆಡಿಲೇಡ್‌ನಲ್ಲಿ ಮೈದಾನದಲ್ಲಿ ಬೆವರು ಹರಿಸಿದರು. ಆದರೆ ಬ್ರಿಸ್ಬೇನ್‌ನಲ್ಲಿನ ವಾತಾವರಣ ನಿಜಕ್ಕೂ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.

Rain Threatens India-Australia Third Test at Brisbane s Gabba

ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಟೀಮ್ ಇಂಡಿಯಾ ಸಲೀಸಾಗಿ ಪ್ರವೇಶ ಮಾಡಬೇಕಾದಲ್ಲಿ, ನಾಲ್ಕು ಪಂದ್ಯಗಳಲ್ಲಿ ಗೆಲ್ಲುವುದು ಅನಿವಾರ್ಯ. ಈಗಾಗಲೇ ಒಂದು ಪಂದ್ಯ ಸೋತಿರುವ ಟೀಮ್ ಇಂಡಿಯಾ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಬ್ರಿಸ್ಬೇನ್‌ನಲ್ಲಿ ವಾತಾವರಣ ಭಾರತ ಟೆನ್ಷನ್ ದುಪಟ್ಟು ಮಾಡಿದೆ.

ಹೇಗಿರಲಿದೆ ವಾತಾವರಣ?

ಆಸ್ಟ್ರೇಲಿಯಾ ಸರ್ಕಾರದ ಹವಾಮಾನ ಬ್ಯೂರೋ ಪ್ರಕಾರ, ಪಂದ್ಯದ ಐದೂ ದಿನಗಳು ಮಳೆ ಸುರಿಯುವ ಸಾಧ್ಯತೆ ಇದೆ. ಇನ್ನು ನಾಲ್ಕನೇ ದಿನದಲ್ಲಿ ಕನಿಷ್ಠ ಶೇಕಡಾ 30ರಷ್ಟು ಮಳೆಯಾಗುವ ನಿರೀಕ್ಷೆ ಇದೆ. ಇನ್ನು ಯಾವ ದಿನ ಹೇಗಿರಲಿದೆ ವರುಣನ ಆರ್ಭಟ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲ ದಿನ ಗರಿಷ್ಠ ಶೇಕಡಾ 50 ರಷ್ಟು ಮಳೆಯಾಗುವ ನಿರೀಕ್ಷೆ ಇದ್ದು, ಈ ದೀನ ತಾಪಮಾನ 23 ಡಿಗ್ರಿ ಮತ್ತು ಗರಿಷ್ಠ 31 ಡಿಗ್ರಿ ಆಗಿರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗಂಟೆಗೆ 15 ರಿಂದ 20 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ. ಎರಡನೇ ಹಾಗೂ ಮೂರನೇ ದಿನ ಶೇ.40ರಷ್ಟು ಮಳೆಯಾಗುವ ಸಾಧ್ಯತೆ ಇದೆ. ನಾಲ್ಕನೇ ದಿನದಲ್ಲಿ ಕನಿಷ್ಠ ಶೇ.30ರಷ್ಟು ಮಳೆಯಾಗುವ ನಿರೀಕ್ಷೆ ಮಾಡಲಾಗಿದ್ದು, ಐದನೇ ದಿನ ಶೇ.40ರಷ್ಟು ಮಳೆ ಆಗುವ ಸೂಚನೆ ನೀಡಲಾಗಿದೆ.

Rain Threatens India-Australia Third Test at Brisbane s Gabba

ಮಳೆಯಾಗುವ ಸೂಚನೆಯೇ ಟೀಮ್ ಇಂಡಿಯಾ ಚಿಂತೆಯನ್ನು ದುಪಟ್ಟು ಮಾಡಿದೆ. ಈಗಾಗಲೇ ಆಡಿಲೇಡ್‌ನಲ್ಲಿ ಟೀಮ್ ಇಂಡಿಯಾ 10 ವಿಕೆಟ್‌ಗಳ ಸೋಲು ತಂಡದ ಆತ್ಮವಿಶ್ವಾಸಕ್ಕೆ ಕೊಂಚ ಪೆಟ್ಟನ್ನು ನೀಡಿದೆ. ಈ ವೇಳೆ ಟೀಮ್‌ ಇಂಡಿಯಾ ಪೇಸರ್‌ಗಳು ಸಹ ವಿಕೆಟ್‌ ಬೇಟೆ ನಡೆಸಲು ಪರದಾಟವನ್ನು ನಡೆಸಿದ್ದಾರೆ. ಮೂರನೇ ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಪುಟಿದೇಳುವ ಲೆಕ್ಕಾಚಾರದಲ್ಲಿ ಭಾರತ ಇದೆ. ಆದರೆ ರೋಹಿತ್‌ ಪಡೆಯ ಕಂ ಬ್ಯಾಕ್‌ ಕನಸಿಗೆ ವರುಣ್ ವರ ನೀಡುತ್ತಾನಾ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ.

Story first published: Thursday, December 12, 2024, 9:37 [IST]
Other articles published on Dec 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+