For Quick Alerts
ALLOW NOTIFICATIONS  
For Daily Alerts
 

IND vs NZ Test: ಮೊದಲ ಪಂದ್ಯ ರದ್ದಾದರೆ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕ ಪಟ್ಟಿಯ ಮೇಲೆ ಪರಿಣಾಮ

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿದೆ. ಅಕ್ಟೋಬರ್‌ 16ರಿಂದ ಆರಂಭವಾಗಲಿರುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಗೆಲುವಿನ ಆರಂಭ ಮಾಡುವ ಕನಸನ್ನು ಟೀಮ್ ಇಂಡಿಯಾ ಮಾಡಿದೆ. ಆದರೆ ಈ ಪಂದ್ಯಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಇದೆ.

ಎರಡು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಇದರ ಸವಿಯನ್ನು ಸವಿಯಲು ಇಲ್ಲಿನ ಕ್ರಿಕೆಟ್ ಅಭಿಮಾನಿಗಳು ಸಿದ್ಧರಾಗಿದ್ದಾರೆ. ಆದರೆ ಹವಾಮಾನ ವರದಿ ಇದಕ್ಕೆ ತಣ್ಣೀರು ಎರಚಿದಂತೆ ಕಾಣುತ್ತಿದೆ. ಈ ಪಂದ್ಯದ ಅಷ್ಟೂ ದಿನವೂ ಮಳೆ ಬೀಳಲಿದೆ ಎಂಬ ವರದಿ ಬಂದಿದೆ. ಮಳೆ ಬೆಂಗಳೂರಿನ ಜನರಿಗೆಷ್ಟೇ ಅಲ್ಲ, ಟೀಮ್ ಇಂಡಿಯಾದ ಆಟಗಾರರ ಟೆನ್ಷನ್‌ನ್ನು ಸಹ ಹೆಚ್ಚಿಸಿದೆ ಇದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

Rain Threatens India vs New Zealand 1st Test in Bengaluru Impact on World Test Championship Looms

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸುವ ಪ್ರಬಲ ಸ್ವರ್ಧಿಗಳಲ್ಲಿ ಟೀಮ್ ಇಂಡಿಯಾವನ್ನು ಪರಿಗಣಿಸಲಾಗಿದೆ. ಸದ್ಯ ಟೀಮ್ ಇಂಡಿಯಾ ಮೈದಾನದಲ್ಲಿ ಇಂತಹದ್ದೇ ಪ್ರದರ್ಶನ ನೀಡುತ್ತಿದೆ. ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡುವ ಕನಸು ಟೀಮ್ ಇಂಡಿಯಾ ಕಾಣುತ್ತಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳುವ ಇರಾದೆ ಭಾರತ ತಂಡದ್ದಾಗಿದೆ.

ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳನ್ನು ಗೆಲ್ಲುವ ವಿಶ್ವಾಸ ಭಾರತಕ್ಕಿದೆ. ಈ ಮೂಲಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಂದು ಪಂದ್ಯ ಸೋತರೂ ಬ್ಯಾಲೆನ್ಸ್‌ ಮಾಡಿಕೊಳ್ಳುವ ಇರಾದೆ ರೋಹಿತ್‌ ಪಡೆಯದ್ದಾಗಿದೆ. ಅಲ್ಲದೆ ಮೂರನೇ ಬಾರಿ ಡಬ್ಲ್ಯುಟಿಸಿ ಫೈನಲ್‌ ಪ್ರವೇಶಿಸುವ ಕನಸನ್ನು ಟೀಮ್ ಇಂಡಿಯಾ ಕಾಣುತ್ತಿದೆ. ಆದರೆ ಮಳೆ ಟೀಮ್ ಇಂಡಿಯಾ ಆಸೆಗೆ ಪೆಟ್ಟು ನೀಡುವ ಸಾಧ್ಯತೆ ಇದೆ.

Rain Threatens India vs New Zealand 1st Test in Bengaluru Impact on World Test Championship Looms

ಟೀಮ್ ಇಂಡಿಯಾಕ್ಕೆ ಭಾರೀ ನಷ್ಟ

ಮಳೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕ ಪಟ್ಟಿಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಟೀಮ್ ಇಂಡಿಯಾ ಸದ್ಯ ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ 74.240 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಪಂದ್ಯ ಮಳೆಯಿಂದ ರದ್ದಾದರೆ, ಈ ಪಂದ್ಯವನ್ನು ಡ್ರಾ ಎಂದು ಪರಿಗಣಿಸಲಾಗುತ್ತದೆ. ಹೀಗೆ ಏನಾದ್ರೂ ಆದಲ್ಲಿ ಟೀಮ್ ಇಂಡಿಯಾದ ಪಾಯಿಂಟ್ಸ್‌ಗಳು 70.83ಕ್ಕೆ ಕುಸಿಯುತ್ತದೆ. ನ್ಯೂಜಿಲೆಂಡ್ ಬುಟ್ಟಿಯಲ್ಲಿ ಸದ್ಯ 37.500 ಪಾಯಿಂಟ್ಸ್ ಇದ್ದು, ಡ್ರಾ ಆದಲ್ಲಿ ಈ ಪಾಯಿಂಟ್ಸ್‌ 37.04 ಕಡಿಮೆ ಆಗುತ್ತದೆ. ಅಂದರೆ ಮಳೆಯಿಂದಾಗಿ ಪಂದ್ಯ ರದ್ದಾದಲ್ಲಿ ಕಿವೀಸ್‌ಗೆ ಹೆಚ್ಚಿನ ತೊಂದರೆ ಏನು ಆಗದು.

ಬೆಂಗಳೂರಿನಲ್ಲಿ ಮಂಗಳವಾರ ಬಿಟ್ಟು, ಬಿಟ್ಟು ಮಳೆ ಬರುತ್ತಿದೆ. ಇನ್ನು ಹವಾಮಾನ ಇಲಾಖೆ ಸಹ ಮುಂದಿನ ಕೆಲವು ದಿನಗಳಲ್ಲಿ ಮಳೆ ಆಗುವ ಬಗ್ಗೆ ಮುನ್ಸೂಚನೆ ನೀಡಿದೆ. ಪಂದ್ಯದ ಆರಂಭದ ದಿನವಾದ ಬುಧವಾರ ಶೇಕಡಾ 70 ರಿಂದ 90 ಪ್ರತಿಷತ್ ಮಳೆ ಆಗುವ ಸಂಭವವಿದೆ. ರಾಜ್ಯದ ಹಲವೆಡೆ ಮಳೆ ತನ್ನ ಆರ್ಭಟವನ್ನು ಮುಂದುವರೆಸಲಿದೆ. ಪಂದ್ಯದ ಅಷ್ಟೂ ದಿನವೂ ಮಳೆ ಬೀಳ ಬಹುದು ಎಂದು ಅಂದಾಜಿಸಲಾಗಿದೆ. ಪಂದ್ಯದ ಮೂರನೇ ದಿನವಾದ ಶುಕ್ರವಾರ ಮಳೆ ಕೊಂಚ ಬ್ರೇಕ್‌ ನೀಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಮಳೆ ಕಡಿಮೆ ಆಗಿ ಪಂದ್ಯ ನಡೆಯಲು ಅನುವಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

Story first published: Tuesday, October 15, 2024, 14:49 [IST]
Other articles published on Oct 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+