ಐಪಿಎಲ್ 2021ರಿಂದ ರಾಜಸ್ಥಾನ್ ರಾಯಲ್ಸ್‌ನ ಬೆನ್ ಸ್ಟೋಕ್ಸ್ ಹೊರಕ್ಕೆ!

ನವದೆಹಲಿ: ರಾಜಸ್ಥಾನ್ ರಾಯಲ್ಸ್ ಪರ ಆಡುವ ಇಂಗ್ಲೆಂಡ್‌ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿಯಿಂದ ಹೊರ ಬಿದ್ದಿದ್ದಾರೆ ಎನ್ನಲಾಗಿದೆ. ವರದಿಯೊಂದರ ಪ್ರಕಾರ ಸ್ಟೋಕ್ಸ್ ಕೈಗೆ ಗಾಯ ಮಾಡಿಕೊಂಡು ಈ ಸೀಸನ್‌ನಿಂದ ಹೊರ ಬಿದ್ದಿದ್ದಾರೆ.
ವಿಸ್ಡನ್ ಇಂಡಿಯಾ ಮಂಗಳವಾರ (ಏಪ್ರಿಲ್ 13) ಒಂದು ಟ್ವಿಟರ್ ಪೋಸ್ಟ್‌ನಲ್ಲಿ ಈ ಸಂಗತಿ ಹೇಳಿದೆ. ವರದಿಯ ಪ್ರಕಾರ 2021ರ ಐಪಿಎಲ್‌ನಿಂದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೊರ ಬಿದ್ದಿದ್ದಾರೆ. ಅವರ ಕೈಯ ಮೂಳೆ ಮುರಿದಿರುವುದು ಪತ್ತೆಯಾಗಿರುವುದರಿಂದ ಸ್ಟೋಕ್ಸ್ ಮುಂದಿನ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು ಪೋಸ್ಟ್ ತಿಳಿಸಿದೆ.
ಏಪ್ರಿಲ್ 12ರ ಸೋಮವಾರ ಐಪಿಎಲ್ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕಾದಾಡಿದ್ದವು. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಇದರಲ್ಲಿ ಪಂಜಾಬ್ ರೋಚಕ 4 ರನ್‌ನಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ಸ್ಟೋಕ್ಸ್ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಫೀಲ್ಡಿಂಗ್ ವೇಳೆ ಸ್ಟೋಕ್ಸ್ ಅವರ ಕೈ ಬೆರಳು ಮುರಿದಿತ್ತು ಎಂದು ತಿಳಿದುಬಂದಿದೆ.
ಪಂಜಾಬ್ ವಿರುದ್ಧ 1 ಓವರ್ ಎಸೆದಿದ್ದ ಸ್ಟೋಕ್ 12 ರನ್ ನೀಡಿದ್ದರು. ಆದರೆ ವಿಕೆಟ್ ಪಡೆದಿರಲಿಲ್ಲ. ರಾಜಸ್ಥಾನ್ ಇನ್ನಿಂಗ್ಸ್ ವೇಳೆ ಆರಂಭಿಕರಾಗಿ ಬಂದಿದ್ದ ಸ್ಟೋಕ್ಸ್ 0 ರನ್‌ಗೆ ಮೊಹಮ್ಮದ್ ಶಮಿಗೆ ವಿಕೆಟ್ ನೀಡಿದ್ದರು. ಬಹುಶಃ ಕೈಯಲ್ಲಿ ನೋವಿನ ಸನುಭವ ಇದ್ದಿದ್ದರಿಂದಲೇ ಸ್ಟೋಕ್ಸ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ ಎನಿಸುತ್ತೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications