RR vs CSK: ಪ್ರತಿಷ್ಠೆಗಾಗಿ ಚೆನ್ನೈ, ರಾಜಸ್ಥಾನ ಫೈಟ್
ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ದೂರ ಉಳಿದಿರುವ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ವಿಕೆಟ್ ಕೀಪರ್‌ಗಳ ನಡುವಿನ ಕಾದಾಟ ರೋಚಕತೆ ಹುಟ್ಟಿಸಿದೆ. ಇನ್ನು ಉಭಯ ತಂಡಗಳು ಪ್ರತಿಷ್ಠೆಗಾಗಿ ಕಾದಾಟವನ್ನು ನಡೆಸಲಿವೆ. ಇನ್ನು ರಾಜಸ್ಥಾನ ಲೀಗ್ ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಗೆಲುವಿನೊಂದಿಗೆ ಟೂರ್ನಿಗೆ ಗುಡ್ ಬಾಯ್ ಹೇಳಲು ರಾಯಲ್ಸ್ ಪ್ಲ್ಯಾನ್ ಮಾಡಿಕೊಂಡಿದೆ.
ಉಭಯ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ 30 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಚೆನ್ನೈ 16, ರಾಜಸ್ಥಾನ 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ರಾಜಸ್ಥಾನ ರಾಯಲ್ಸ್ ಆಡಿದ 13 ಪಂದ್ಯಗಳನ್ನು ಆಡಿದ್ದು 6 ಅಂಕಗಳನ್ನು ಕಲೆ ಹಾಕಿದ್ದು ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಆಡಿದ 12 ಪಂದ್ಯಗಳಲ್ಲಿ 6 ಅಂಕಗಳನ್ನು ಕಲೆ ಹಾಕಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರುವುದನ್ನು ತಪ್ಪಿಸಿಕೊಳ್ಳಬಹುದು.

ವೈಭವ್ ಆಕರ್ಷಣೆ
ರಾಜಸ್ಥಾನ ರಾಯಲ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿಯುವ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸ್ಪೋಟಕ ಆರಂಭವನ್ನು ನೀಡಿ ತಂಡಕ್ಕೆ ಆಧಾರವಾಗಿದ್ದರು. ಇನ್ನು ಯಶಸ್ವಿ ಜೈಸ್ವಾಲ್ ಸ್ಥಿರ ಪ್ರದರ್ಶನ ನೀಡುತ್ತಿದ್ದು ಭರವಸೆಯನ್ನು ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಧ್ರುವ್ ಜುರೇಲ್, ಶಿಮ್ರೋನ್ ಹೆಟ್ಮೆಯರ್ ಸ್ಥಿರ ಪ್ರದರ್ಶನವನ್ನು ನೀಡಿ ತಂಡಕ್ಕೆ ಆಧಾರವಾಗಬೇಕಿದೆ.
ಬೌಲಿಂಗ್‌ನಲ್ಲಿ ಫಜಲ್ ಫಾರೂಕಿ, ತುಷಾರ್ ದೇಶಪಾಂಡೆ ಸಮಯೋಚಿತ ಬ್ಯಾಟಿಂಗ್ ನಡೆಸಬೇಕಿದೆ. ಸ್ಪಿನ್ ವಿಭಾಗದಲ್ಲಿ ವನಿಂದು ಹಸರಂಗ ಹಾಗೂ ಆಕಾಶ್ ಮಧ್ವಾಲ್ ತಮ್ಮ ಪಿರ್ಕಿ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಬೇಕಿದೆ. ರಾಜಸ್ಥಾನ ತಂಡದ ಬೌಲರ್‌ಗಳು ಪವರ್ ಪ್ಲೇನಲ್ಲಿ ಪವರ್ ಫುಲ್ ಪ್ರದರ್ಶನ ನೀಡಬೇಕಿದೆ. ಅಲ್ಲದೆ ಮಿಡ್ಲ್ ಓವರ್‌ಗಳಲ್ಲಿ ಅಬ್ಬರಿಸಬೇಕಿದೆ.
ಯುವಕರ ಬಲ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕರಾದ ಆಯುಷ್ ಮಾತ್ರೆ ಹಾಗೂ ಉರ್ವಿಲ್ ಪಟೇಲ್ ತಮ್ಮ ಭರ್ಜರಿ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇವರು ಈ ಸ್ಥಿರ ಪ್ರದರ್ಶನವನ್ನು ಮುಂದುವರೆಸಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಡೇವನ್ ಕಾನ್ವೆ, ರವೀಂದ್ರ ಜಡೇಜಾ, ಡೇವಾಲ್ಡ್ ಬ್ರೇವಿಸ್, ಶಿವಂ ದುಬೆ ರನ್ ರೇಟ್ ಹೆಚ್ಚಿಸುವ ಕೆಲಸವನ್ನು ಮಾಡಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯ.
ಖಲೀಲ್ ಅಹ್ಮದ್, ಮತೀಶ್ ಪತಿರಾಣ್ ಹೊಸ ಚೆಂಡಿನೊಂದಿಗೆ ಬಿಗುವಿನ ದಾಳಿಯನ್ನು ನಡೆಸಬೇಕಿದೆ. ಇನ್ನು ಅಂಶುಲ್ ಕಂಬೋಜ್ ಶಿಸ್ತು ಬದ್ಧ ದಾಳಿ ನಿರ್ವಹಿಸಬೇಕಿದೆ. ಸ್ಪಿನ್ ಬೌಲರ್ ಆರ್ ಅಶ್ವಿನ್, ನೂರ್ ಅಹ್ಮದ್ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ರಾಜಸ್ಥಾನ ಬ್ಯಾಟರ್‌ಗಳನ್ನು ಕಟ್ಟಿ ಹಾಕಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications