Riyan Parag: ರಾಜಸ್ಥಾನ ಗೆಲುವಿನ ಜೋಶ್ ಕಡಿಮೆ ಮಾಡಿದ ದಂಡ: ರಿಯಾನ್ ಪರಾಗ್‌ಗೆ ಬರೆ
ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಜಸ್ಥಾನ ಪ್ರಸಕ್ತ ಸಾಲಿನ ಮೊದಲ ಗೆಲುವಿನ ನಗೆ ಬೀರಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಮಣಿಸಿದ ರಾಜಸ್ಥಾನ ಅಬ್ಬರಿಸಿದೆ. ಹ್ಯಾಟ್ರಿಕ್ ಸೋಲಿನ ಭೀತಿಯಿಂದ ತಂಡವನ್ನು ಪಾರು ಮಾಡಿದ ರಿಯಾನ್ ಪರಾಗ್ ಎಲ್ಲರ ಚಿತ್ತ ಕದ್ದಿದ್ದಾರೆ. ಈ ಪಂದ್ಯದಲ್ಲಿ ಇವರು ತೋರಿರುವ ನಾಯಕತ್ವದ ಗುಣಗಳು ಎಲ್ಲರ ಚಿತ್ತ ಕದ್ದಿವೆ. ಆದರೆ ಪಂದ್ಯ ಮುಗಿದ ಬಳಿಕ ಇವರು ಮಾಡಿದ ಆ ಒಂದು ತಪ್ಪಿಗೆ ಶಿಕ್ಷೆ ವಿಧಿಸಲಾಗಿದೆ.
ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿತು. ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ಚೆನ್ನೈ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಸೇರಿಸಿ ಸೋಲು ಕಂಡಿತು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದಾಖಲಿಸಿದ ಎರಡನೇ ಸೋಲಾಗಿದೆ. ಗೆಲುವಿನ ಜೋಶ್ ಆರ್‌ಆರ್ ತಂಡದ ನಾಯಕನ ಜೋಶ್ ಕಡಿಮೆ ಮಾಡಿದೆ.

ರಿಯಾನ್ ಪರಾಗ್‌ಗೆ ಭಾರಿ ದಂಡ ವಿಧಿಸಲಾಗಿದೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ದರಕ್ಕಾಗಿ ಅವರಿಗೆ ಈ ದಂಡ ವಿಧಿಸಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ ಈ ಮಾಹಿತಿಯನ್ನು ನೀಡಿದೆ. 11 ನೇ ಪಂದ್ಯದಲ್ಲಿ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಅವರಿಗೆ ದಂಡ ವಿಧಿಸಲಾಗಿದೆ.
ಏನು ದಂಡ?
ಹೊಸ ನಿಯಮದ ಪ್ರಕಾರ ರಿಯಾನ್ ಪರಾಗ್ ದಂಡ ವಿಧಿಸಲಾಗಿದೆ. ರಿಯಾನ್ ಪರಾಗ್ ಅವರು ನಿಗದಿತ ಅವಧಿಯಲ್ಲಿ ಪಂದ್ಯವನ್ನು ಮುಗಿಸಿದ ಹಿನ್ನಲೆಯಲ್ಲಿ ಈ ದಂಡವನ್ನು ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ನಿಯಮ 2.2 ರ ಅಡಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸ್ಲೋ ಓವರ್ ರೇಟ್‌ಗಾಗಿ ರಿಯಾನ್ ಪರಾಗ್ ಅವರಿಗೆ 12 ಲಕ್ಷ ದಂಡವನ್ನು ವಿಧಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications