Sanju Samson: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ತಂಡವನ್ನು ಯಾವಗ ಸೇರುತ್ತಾರೆ? ಇಲ್ಲಿದೆ ಅಪ್‌ಡೇಟ್
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಭಾಗವಹಿಸಲಿರುವ ತಂಡಗಳು ಭರ್ಜರಿ ತಾಲೀಮು ನಡೆಸಿವೆ. ಸ್ಟಾರ್ ಆಟಗಾರರು ಇನ್ನು ಕ್ಯಾಂಪ್ ಸೇರಿಕೊಳ್ಳಬೇಕಿದೆ. ಆದರೆ ಮಾಜಿ ಆಟಗಾರರು ಹಾಗೂ ದೇಶೀಯ ಆಟಗಾರರು ಈಗಾಗಲೇ ತಂಡಗಳ ಕ್ಯಾಂಪ್ ಸೇರಿಕೊಂಡಿದ್ದು, ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಇನ್ನು ತಂಡಗಳಲ್ಲಿ ಗಾಯಗೊಂಡಿರುವ ಆಟಗಾರರ ಸಂಖ್ಯೆಯೂ ದಿನೇ ದಿನೇ ಏರಿಕೆ ಆಗುತ್ತಲೇ ಇದೆ. ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಗಾಯಕ್ಕೆ ತುತ್ತಾಗಿದ್ದು, ಇವರು ಆರಂಭಿಕ ಪಂದ್ಯಗಳಲ್ಲಿ ತಂಡವನ್ನು ಸೇರಿಕೊಳ್ಳುವುದು ಡೌಟ್ ಎಂದಾಗಿದೆ.
ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ಮತ್ತೊಂದು ಆವೃತ್ತಿಗೆ ಆಯ್ಕೆ ಆಗಿದ್ದಾರೆ. ಆದರೆ ಇವರು ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಸಂಜು ಸ್ಯಾಮ್ಸನ್ ಸದ್ಯ ಎನ್‌ಸಿಎನಲ್ಲಿ ಪನರ್ವಸತಿ ನಡೆಸುತ್ತಿದ್ದಾರೆ. ಇವರು ಚೇತರಿಕೆ ಹಂತದಲ್ಲಿದ್ದು, ಇದೇ ಶನಿವಾರ ಅಥವಾ ಭಾನುವಾರ ಕ್ಯಾಂಪ್ ಸೇರಬಹುದು ಎಂದು ನಂಬಲಾಗಿದೆ.

ಟೀಮ್ ಇಂಡಿಯಾ ಪರ ಆಡುವಾಗ ಗಾಯಕ್ಕೆ ತುತ್ತಾಗಿದ್ದ ಸಂಜು, ಈಗ ಚೇತರಿಕೆ ಹಂತ ತಲುಪಿದ್ದಾರೆ. ಇದು ನಿಜಕ್ಕೂ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್‌ಗೆ ಸಮಾಧಾನದ ಸಂಗತಿ. ಇದಕ್ಕೂ ಮೊದಲು ಬಂದ ವರದಿಗಳನ್ನು ನಂಬುವುದಾದರೆ, ಇವರು ಆರಂಭಿಕ ಪಂದ್ಯಗಳಿಂದ ದೂರ ಉಳಿಯಬಹುದು ಎಂದು ನಂಬಂಲಾಗಿತ್ತು. ಆದರೆ ಈಗ ಬರುತ್ತಿರುವ ಸುದ್ದಿಯಂತೆ ಸಂಜು ಸ್ಯಾಮ್ಸನ್ ಐಪಿಎಲ್ ಆರಂಭಕ್ಕೂ ಮುನ್ನವೇ ರಾಜಸ್ಥಾನ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯ ವೇಳೆ ಸಂಜು ಸ್ಯಾಮ್ಸನ್ ಗಾಯಕ್ಕೆ ತುತ್ತಾಗಿದ್ದರು. ಇದೇ ಸರಣಿಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ ಎಸೆದ ಚೆಂಡು ಇವರಿಗೆ ಬಡೆದು ಗಾಯವಾಗಿತ್ತು. ಹೀಗಾಗಿ ಸಂಜು ಸ್ಯಾಮ್ಸನ್ ಬೆಂಗಳೂರಿನ ಎನ್‌ಸಿಎನಲ್ಲಿ ಪನರ್ವಸತಿ ಪಡೆಯುತ್ತಿದ್ದಾರೆ. ಸದ್ಯ ಇವರು ಚೇತರಿಕೆ ಹಂತವನ್ನು ಕಾಣುತ್ತಿದ್ದು, ಶೀಘ್ರದಲ್ಲಿ ರಾಜಸ್ಥಾನ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ.
ಸಂಜು ಸ್ಯಾಮ್ಸನ್ ಸಾಧನೆ
ಸಂಜು ಸ್ಯಾಮ್ಸನ್ ಐಪಿಎಲ್ ಅಖಾಡದಲ್ಲಿ ಅನುಭವಿ ಬ್ಯಾಟರ್. ಅಲ್ಲದೆ ಒಬ್ಬ ಅನುಭವಿ ನಾಯಕ. ಇವರು ಐಪಿಎಲ್‌ನಲ್ಲಿ ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡವನ್ನು 61 ಪಂದ್ಯಗಳಲ್ಲಿ ಮುನ್ನಡೆಸುತ್ತಿದ್ದಾರೆ. ಇವರ ನಾಯಕತ್ವದಲ್ಲಿ ತಂಡ 31 ರಲ್ಲಿ ಜಯ, 29 ರಲ್ಲಿ ಸೋಲು ಕಂಡಿದೆ. ಐಪಿಎಲ್‌ನಲ್ಲಿ ಇವರ ಗೆಲುವಿನ ಶೇಕಡಾ ವಾರು 51 ಆಗಿದೆ. ಇನ್ನು ಐಪಿಎಲ್‌ನಲ್ಲಿ ಸಂಜು ಆಡಿದ 167 ಪಂದ್ಯಗಳಲ್ಲಿ 138ರ ಸ್ಟ್ರೈಕ್ ರೇಟ್‌ನಲ್ಲಿ 4419 ರನ್ ಕಲೆ ಹಾಕಿದ್ದಾರೆ. ಈ ವೇಳೆ 25 ಅರ್ಧಶತಕ ಹಾಗೂ 3 ಶತಕಗಳನ್ನು ಬಾರಿಸಿದ್ದಾರೆ.

ಸಂಜು ಸ್ಯಾಮ್ಸನ್ ಅವರ ಮುಂದಾಳತ್ವದಲ್ಲಿ ತಂಡ ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದಿದೆ. ಈ ಬಾರಿಯ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ತಂಡಕ್ಕೆ ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನು ತೊಡಿಸುವ ಕನಸನ್ನು ಕಾಣುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications