ಐಪಿಎಲ್ 2020: ಬೆನ್ ಸ್ಟೋಕ್ಸ್ ಲಭ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ಥಾನ್ ರಾಯಲ್ಸ್ ಕೋಚ್

ರಾಜಸ್ಥಾನ್ ರಾಯಲ್ಸ್ ಐಪಿಎಲ್ ಇತಿಹಾಸದ ಮೊದಲ ಚಾಂಪಿಯನ್ ತಂಡ. ಈ ಬಾರಿಯ ಆವೃತ್ತಿಯಲ್ಲಿ ಆರ್‌ಆರ್ ತಂಡ ಶಾರ್ಜಾದಲ್ಲಿ ಸೆಪ್ಟೆಂಬರ್ 22 ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಮುಖಾಮುಖಿಯಾಗುವ ಮೂಲಕ ಆರಂಭಿಸಲಿದೆ. ಆದರೆ ಮುಖ್ಯ ಆಟಗಾರನ ಲಭ್ಯತೆಯ ಬಗ್ಗೆ ತಂಡದಲ್ಲಿ ಇನ್ನೂ ಸ್ಪಷ್ಟತೆಯಿಲ್ಲ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯನ್ನು ಹೊಂದಿದ್ದ ಬೆನ್ ಸ್ಟೋಕ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರಾ ಇಲ್ಲವೋ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ತಂದೆಯ ಅನಾರೋಗ್ಯದ ಕಾರಣದಿಂದಾಗಿ ನ್ಯೂಜಿಲೆಂಡ್‌ಗೆ ತೆರಳಿರುವ ಸ್ಟೋಕ್ಸ್ ಐಪಿಎಲ್‌ಗೆ ಲಭ್ಯತೆಯ ಬಗ್ಗೆ ಇನ್ನೂ ಖಚಿತಪಡಿಸಿಲ್ಲ.
ರಾಜಸ್ಥಾನ್ ರಾಯಲ್ಸ್ ತಂಡ ಬೆನ್ ಸ್ಟೋಕ್ಸ್ ಈ ಟೂರ್ನಿಗೆ ಲಭ್ಯವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ ತಂಡದ ಕೋಚ್ ಆಂಡ್ರ್ಯೂ ಮ್ಯಾಕ್‌ಡೊನಾಲ್ಡ್ ಆತನ ಕುಟುಂಬದ ಸ್ಥಿತಿಯ ಕಾರಣದಿಂದಾಗಿ ಲಭ್ಯತೆಯ ಬಗ್ಗೆ ಊಹೆ ಮಾಡಲು ತಾನಿ ಸಿದ್ಧನಿಲ್ಲ ಎಂದು ಹೇಳಿದ್ದಾರೆ.
ಸ್ಟೋಕ್ಸ್ ಕುಟುಂಬದ ಬಗ್ಗೆ ನಾವು ಯೋಚಿಸುತ್ತೇವೆ. ಆತನಿಗೆ ಇದು ತುಂಬಾ ಕಷ್ಟಕರವಾದ ಸನ್ನಿವೇಶವಾಗಿದೆ. ಹಾಗಾಗಿ ನಾವು ಆತನಿಗೆ ಅಗತ್ಯವಿರುವ ಸಮಯಾವಕಾಸವನ್ನು ನೀಡುತ್ತಿದ್ದೇವೆ ಹಾಗೂ ಆತನೊಂದಿಗೆ ಸಾದ್ಯವಾದಷ್ಟು ಉತ್ತಮವಾಗಿ ಸಂಪರ್ಕವನ್ನು ಸಾಧಿಸುತ್ತೇವೆ ಎಂದು ಮ್ಯಾಕ್‌ಡೊನಾಲ್ಡ್ ಹೇಳಿದ್ದಾರೆ.
ಇನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ತಲೆಗೆ ಗಾಯ ಮಾಡಿಕೊಂಡಿರುವ ಸ್ಟೀವ್ ಸ್ಮಿತ್ ಬಗ್ಗೆ ಮಾತನಾಡಿದ ಕೋಚ್ ಮ್ಯಾಕ್‌ಡೊನಾಲ್ಡ್ ಆತನಿಗೆ ಸ್ಥಿತಿಯ ಬಗ್ಗೆ ಹೆಚ್ಚು ಸ್ಪಷ್ಟತೆಯಿದೆ. ದೀರ್ಘಕಾಲದ ಅಡ್ಡಪರಿಣಾಮವಾಗುವ ಆ ಕಾರಣ ಸ್ಮಿತ್‌ಗೆ ಹೆಚ್ಚಿನ ವಿಶ್ರಾಂತಿಯನ್ನು ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಮೂರೇ ಪಂದ್ಯದಲ್ಲಿ ಆತ ಮತ್ತೆ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಅವರು ವಿಶ್ವಾಸವನ್ನು ವ್ಯಕ್ತಪಡಿಸಿದರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications