IPL MVP: ಕಿಂಗ್ಸ್‌ಗೆ ಬೋನಿನಲ್ಲಿ ತಳ್ಳಿದ ರಾಯಲ್ಸ್ ಪೇಸರ್
ಪ್ರಸಕ್ತ ಐಪಿಎಲ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಹೊರತು ಪಡಿಸಿ ಉಳಿದೆಲ್ಲಾ ತಂಡಗಳು ಸೋಲು ಕಂಡಿವೆ. ಈ ಲೀಸ್ಟ್‌ಗೆ ಲೇಟೆಸ್ಟ್ ಎಂಟ್ರಿ ಪಂಜಾಬ್ ಕಿಂಗ್ಸ್. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಮೋಘ ಪ್ರದರ್ಶನ ನೀಡಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರುವ ಪಂಜಾಬ್ ಆಸೆ ಕಮರಿದೆ. ರಾಜಸ್ಥಾನ ರಾಯಲ್ಸ್ ಈಗ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದು, ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ರಾಜಸ್ಥಾನ ಪಂದ್ಯವನ್ನು ಗೆಲ್ಲುವಲ್ಲಿ ಸಂಘಟಿ ಆಟಗಾರರ ಆಟ ಎದ್ದು ಕಾಣುತ್ತದೆ. ಆದರೆ ಆ ಓಬ್ಬ ಪ್ಲೇಯರ್ ಮ್ಯಾಜಿಕ್ ತಂಡಕ್ಕೆ ಜಯದ ಮಾಲೆ ತೊಡಿಸಿದೆ.
ಮುಲ್ಲನ್‌ಪುರನಲ್ಲಿ ನಡೆದ ಐಪಿಎಲ್‌ನ 18ನೇ ಪಂದ್ಯದಲ್ಲಿ ಪಂಜಾಬ್ 206 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿದೆ. ಈ ವೇಳೆ ಕಿಂಗ್ಸ್ ತಂಡ 50 ರನ್‌ಗಳ ಸೋಲು ಕಂಡಿದೆ. ಪಂಜಾಬ್ ಈ ಸೋಲಿನ ಬಳಿಕ ಅಂಕ ಪಟ್ಟಿಯಲ್ಲಿ ಕುಸಿತ ಕಂಡಿದೆ. ಪಂಜಾಬ್ ಈ ಸ್ಥಿತಿಗೆ ಕಾರಣವಾದವರು, ರಾಜಸ್ಥಾನ ತಂಡದ ಆ ಪ್ಲೇಯರ್. ಇವರ ಬಿಗುವಿನ ದಾಳಿಯ ಪರಿಣಾಮವೇ ಪಂಜಾಬ್ ಮಕಾಡೆ ಮಲಗಿದೆ.

ಎಸ್‌ಆರ್‌ಎಚ್ ವಿರುದ್ಧ ಪಂದ್ಯದಲ್ಲಿ ದುಬಾರಿ ಆಗಿದ್ದ ಜೋಫ್ರಾ ಆರ್ಚರ್, ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿದರು. ರಾಜಸ್ಥಾನ ರಾಯಲ್ಸ್ ಆಡಿದ್ದ ತನ್ನ ಮೊದಲ ಪಂದ್ಯದಲ್ಲಿ ಜೋಫ್ರಾ ಬಿಗುವಿನ ದಾಳಿ ನಡೆಸುವಲ್ಲಿ ಎಡವಿದ್ದರು. ಈ ಪಂದ್ಯದಲ್ಲಿ 76 ರನ್‌ಗಳನ್ನು ನೀಡಿದ್ದ ಜೋಫ್ರಾ ಕೈ ಸುಟ್ಟುಕೊಂಡಿದ್ದರು. ಅಲ್ಲದೆ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮನಮೋಹಕ ಬೌಲಿಂಗ್ ನಡೆಸಿ ಮಿಂಚಿದರು. ಇವರು ಸರಿಯಾದ ಸ್ಥಳದಲ್ಲಿ ಬೌಲಿಂಗ್ ಮಾಡಿ ವಿಕೆಟ್ ಬೇಟೆ ನಡೆಸಿದರು.
ಜೋಫ್ರಾ ಮ್ಯಾಜಿಕ್
ಬೃಹತ್ ಮೊತ್ತ ಹಿಂಬಾಲಿಸಿದ ಪಂಜಾಬ್ ತಂಡಕ್ಕೆ ಆರಂಭದಲ್ಲೇ ಪೆಟ್ಟು ನೀಡಿದ ಜೋಫ್ರಾ ರಾಜಸ್ಥಾನ ಪಾಳಯದಲ್ಲಿ ಮಂದಹಾಸ ಮೂಡಿಸಿದರು. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ಶ್ರೇಯಸ್ ಅಯ್ಯರ್‌ಗೆ ಖೆಡ್ಡಾ ತೋಡಿ ಪಂಜಾಬ್‌ಗೆ ಶಾಕ್ ನೀಡಿದರು. ಈ ಮೂಲಕ ಪಂಜಾಬ್ ಗೆಲುವಿನ ಆಸೆಗೆ ಆರಂಭದಲ್ಲೇ ಬ್ರೇಕ್ ಬಿದ್ದಿತ್ತು. ಈ ಹೊಡೆತದಿಂದ ಪಂಜಾಬ್ ಮೆಲೆದ್ದು ಬರಲು ಆಗಲೇ ಇಲ್ಲ. ಕೊನೆಯಲ್ಲಿ ಅರ್ಷದೀಪ್ ಸಿಂಗ್ ಅವರ ವಿಕೆಟ್ ಪಡೆಯುವ ಮೂಲಕ ಜೋಫ್ರಾ ತಮ್ಮ ಫಾರ್ಮ್ ಇನ್ನು ಭರ್ಜರಿಯಾಗಿದೆ ಎಂಬುದನ್ನು ಸಾಬೀತು ಪಡಿಸಿದರು.
ಜೋಫ್ರಾ ಆರ್ಚರ್ ಅವರು ಪಂಜಾಬ್ ವಿರುದ್ಧ 4 ಓವರ್ ಬೌಲ್ ಮಾಡಿ 25 ರನ್ ನೀಡಿ ಅಮೂಲ್ಯ ಮೂರು ವಿಕೆಟ್ ಕಬಳಿಸಿದರು. ಇವರ ಬಿಗುವಿನ ದಾಳಿಯಲ್ಲಿ 14 ಡಾಟ್ ಬೌಲ್ ಸಹ ಸೇರಿದ್ದವು. ಇವರು ಕೇವಲ 4 ಬೌಂಡರಿ ನೀಡಿದರು. ಇವರ ಭರ್ಜರಿ ಪ್ರದರ್ಶನದ ಫಲವಾಗಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications