RR vs CSK IPL 2025: ಗೆಲುವಿನ ಟ್ರ್ಯಾಕ್‌ಗೆ ಮರಳಿದ ರಾಜಸ್ಥಾನ: ಸಿಎಸ್‌ಕೆಗೆ ಎರಡನೇ ಸೋಲು
ಮಹತ್ವದ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ 6 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ. ಈ ಮೂಲಕ ರಾಜಸ್ಥಾನ ಹ್ಯಾಟ್ರಿಕ್ ಸೋಲಿನ ಅಪಾಯದಿಂದ ಪಾರಾಗಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ ಜಯದ ಖಾತೆ ಓಪನ್ ಮಾಡಿದೆ. ರಿಯಾನ್ ಪರಾಗ್ ನಾಯಕತ್ವದ ತಂಡಕ್ಕೆ ಮೊದಲ ಜಯ ಲಭಿಸಿದೆ.
18ನೇ ಆವೃತ್ತಿಯ 10ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 182 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸಿಎಸ್‌ಕೆ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಸೇರಿಸಿ ಸೋಲು ಕಂಡಿತು. ಈ ಮೂಲಕ ಚೆನ್ನೈ ಸತತ ಎರಡನೇ ಸೋಲಿಗೆ ಶರಣಾಗಿದೆ. ಚೆನ್ನೈ ಆಡಿದ 3 ಪಂದ್ಯಗಳಲ್ಲಿ 1 ಗೆಲುವು, 2 ಸೋಲು ಕಂಡಿದ್ದು, ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡದ ಆರಂಭ ಕಳಪೆಯಾಗಿತ್ತು. ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್ 4 ರನ್ ಬಾರಿಸಿ ಔಟ್ ಆದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜಸ್ಥಾನ ತಂಡಕ್ಕೆ ಸಂಜು ಸ್ಯಾಮ್ಸನ್ ಹಾಗೂ ನಿತೀಶ್ ರಾಣಾ ಜೋಡಿ ಆಧಾರವಾಯಿತು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ಸಿಎಸ್‌ಕೆ ಬೌಲರ್ಸ್ ವಿಫಲರಾದರು. ಈ ಜೋಡಿ ಎರಡನೇ ವಿಕೆಟ್‌ಗೆ 42 ಎಸೆತಗಳಲ್ಲಿ 82 ರನ್ ಸೇರಿಸಿತು. ಸಂಜು ಸ್ಯಾಮ್ಸನ್ 20 ರನ್‌ಗಳಿಗೆ ಆಟ ಮುಗಿಸಿದರು.
ನಿತೀಶ್ ರಾಣಾ ಅರ್ಧಶತಕ
ನಿತೀಶ್ ರಾಣಾ ಅವರು ಆಕ್ರಮಣಕಾರಿ ಆಟವನ್ನು ಆಡುತ್ತಿದ್ದರು. ಇವರ ಆಟಕ್ಕೆ ಬ್ರೇಕ್ ಹಾಕಲು ಧೋನಿ ಚೆಂಡನ್ನು ಅಶ್ವಿನ್ ಅವರಿಗೆ ನೀಡಿದರು. ಈ ವೇಳೆ ನಿತೀಶ್ ರಾಣಾ 81 ರನ್ ಬಾರಿಸಿದ್ದಾಗ ಔಟ್ ಆದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 10 ಬೌಂಡರಿ, 5 ಸಿಕ್ಸರ್ ಒಳಗೊಂಡಿವೆ. ಧ್ರುವ್ ಜುರೇಲ್ 3 ರನ್‌ಗೆ ಆಟ ಮುಗಿಸಿದರು. ಶಿಮ್ರೋನ್ ಹೆಟ್ಮೆಯರ್ 19 ರನ್ ಸಿಡಿಸಿ ಔಟ್ ಆದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ವೇಗದ ಬೌಲರ್ ಖಲೀಲ್ ಅಹ್ಮದ್, ಸ್ಪಿನ್ ಬೌಲರ್ ನೂರ್ ಅಹ್ಮದ್, ಮತೀಶ್ ಪತಿರಾಣಾ ತಲಾ 2 ವಿಕೆಟ್ ಕಬಳಿಸಿದರು.
ಸಿಎಸ್‌ಕೆ ಕಳಪೆ ಆರಂಭ
ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ರಚಿನ್ ರವೀಂದ್ರ, ಜೋಪ್ರಾ ಆರ್ಚರ್ ಎಸೆತವನ್ನು ತಪ್ಪಾಗಿ ಅರ್ಥಹಿಸಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು. ಎರಡನೇ ವಿಕೆಟ್‌ಗೆ ರಾಹುಲ್ ತ್ರಿಪಾಠಿ ಜೊತೆ ಇನಿಂಗ್ಸ್ ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಂಡ ರುತುರಾಜ್ ಗಾಯಕ್ವಾಡ್ 46 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ರಾಹುಲ್ ತ್ರಿಪಾಠಿ 23 ರನ್ ಬಾರಿಸಿ ಔಟ್ ಆದರು.

ಶಿವಂ ದುಬೆ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 18 ರನ್ ಬಾರಿಸಿದ್ದಾಗ ಸ್ಪಿನ್ ಬೌಲರ್ ವನಿಂದು ಹಸರಂಗ ಎಸೆತದಲ್ಲಿ ಮಿಡ್ ಆಫ್‌ನಲ್ಲಿದ್ದ ರಿಯಾನ್ ಪರಾಗ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ವಿಜಯ್ ಶಂಕರ್ (9) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
ರುತುರಾಜ್ ಅರ್ಧಶತಕ
ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 63 ರನ್ ಸಿಡಿಸಿ ಔಟ್ ಆದರು. ಜಡೇಜಾ ಅಜೇಯ 32 ಹಾಗೂ ಧೋನಿ 16 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ರಾಜಸ್ಥಾನ ಪರ ವನಿಂದು ಹಸರಂಗ 35 ರನ್ ನೀಡಿ 4 ವಿಕೆಟ್ ಕಬಳಿಸಿದರು. ಜೋಫ್ರಾ ಆರ್ಚರ್, ಸಂದೀಪ್ ಶರ್ಮಾ ತಲಾ 1 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications