IPL 2025: ರಾಜಸ್ಥಾನ ತಂಡಕ್ಕೆ ಇನ್ನೂ ಪ್ಲೇಆಫ್ ತಲುಪುವ ಅವಕಾಶ ಇದೆ...
ಐಪಿಎಲ್ 2025 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಅಂದುಕೊಂಡಂತೆ ಏನೂ ನಡೆಯುತ್ತಿಲ್ಲ. ರಾಜಸ್ಥಾನ ರಾಯಲ್ಸ್ ಗೆಲ್ಲುವ ಪಂದ್ಯಗಳನ್ನು ಸತತವಾಗೊ ಸೋಲುತ್ತಿದೆ. ಗುರುವಾರ ಕೂಡ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ರಾಜಸ್ಥಾನ ತಂಡ ಸೋಲನ್ನು ಎದುರಿಸಿದೆ. ಈ ಸೋಲಿನೊಂದಿಗೆ ರಾಜಸ್ಥಾನ ರಾಯಲ್ಸ್ ಪ್ಲೇಆಫ್‌ಗೆ ಹೋಗುವ ಹಾದಿ ಈಗ ತುಂಬಾ ಕಷ್ಟಕರವಾಗಿದೆ, ಆದರೆ ಅಸಾಧ್ಯವಲ್ಲ.
ಐಪಿಎಲ್ 2025 ರಲ್ಲಿ ರಾಜಸ್ಥಾನ ರಾಯಲ್ಸ್ ಕಳೆದ 5 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ರಾಜಸ್ಥಾನ ರಾಯಲ್ಸ್ ಇದುವರೆಗೆ 9 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 7 ಪಂದ್ಯಗಳಲ್ಲಿ ಸೋತಿದೆ. ಪ್ರಸ್ತುತ 4 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ 8ನೇ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿಯೂ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ತಲುಪುವ ಅವಕಾಶವನ್ನು ಹೊಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ರಾಜಸ್ಥಾನ ರಾಯಲ್ಸ್ ತಂಡವು ಐಪಿಎಲ್ 2025 ರ ಪಾಯಿಂಟ್ ಟೇಬಲ್‌ನಲ್ಲಿ ಎಂಟನೇ ಸ್ಥಾನದಲ್ಲಿದೆ. ಆದಾಗ್ಯೂ, 7 ಪಂದ್ಯಗಳನ್ನು ಸೋತರೂ, ರಾಜಸ್ಥಾನ ರಾಯಲ್ಸ್ ತಂಡವು ಪ್ಲೇಆಫ್‌ಗೆ ತಲುಪ ನಿರೀಕ್ಷೆಯಲ್ಲಿದೆ. ರಾಜಸ್ಥಾನ ಪ್ಲೇಆಫ್‌ಗೆ ತಲುಪಲು ಉಳಿದ 5 ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಬೇಕಾಗಿದೆ. ಇದಲ್ಲದೆ, ಗುಂಪು ಹಂತವನ್ನು ಮೂರಕ್ಕಿಂತ ಹೆಚ್ಚು ತಂಡಗಳು 14 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಮುಗಿಸಬಾರದು ಎಂದು ರಾಜಸ್ಥಾನ ಪ್ರಾರ್ಥಿಸಬೇಕಾಗಿದೆ. ಈ ಪವಾಡ ನಡೆದರೆ ರಾಜಸ್ಥಾನ 14 ಅಂಕಗಳು ಮತ್ತು ಇತರ ತಂಡಗಳಿಗಿಂತ ಉತ್ತಮ ನಿವ್ವಳ ರನ್ ರೇಟ್‌ನೊಂದಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ.
ಸಂಪೂರ್ಣ ಸಮೀಕರಣ
ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈಗಾಗಲೇ ತಲಾ 12 ಅಂಕಗಳನ್ನು ಗಳಿಸಿವೆ. ಈ ಮೂರು ತಂಡಗಳು ಇನ್ನೂ ಕನಿಷ್ಠ 5 ಪಂದ್ಯಗಳನ್ನು ಆಡಬೇಕಾಗಿದೆ. ಈ ಮೂರು ತಂಡಗಳು ಕನಿಷ್ಠ ಎರಡು ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ ರಾಯಲ್ಸ್ ಅವರನ್ನು ಸರಿಗಟ್ಟಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜಸ್ಥಾನ ಗುಜರಾತ್, ಡೆಲ್ಲಿ ಮತ್ತು ಬೆಂಗಳೂರು ಹೊರತುಪಡಿಸಿ, ಯಾವುದೇ ನಾಲ್ಕನೇ ತಂಡವು 14 ಅಂಕಗಳಿಗಿಂತ ಹೆಚ್ಚು ಗಳಿಸಲು ಸಾಧ್ಯವಾಗದಿರಲಿ ಎಂದು ಪ್ರಾರ್ಥಿಸಬೇಕಾಗುತ್ತದೆ. ಆದಾಗ್ಯೂ, ಈ ಸ್ಥಾನವನ್ನು ತಲುಪಲು, ಮೊದಲನೆಯದಾಗಿ ರಾಜಸ್ಥಾನ ತನ್ನ ಉಳಿದ 5 ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಬೇಕಾಗುತ್ತದೆ.
ರಾಜಸ್ಥಾನ ಮುಂದಿನ ಪಂದ್ಯಗಳು
ರಾಜಸ್ಥಾನ ರಾಯಲ್ಸ್ ತನ್ನ ಉಳಿದ ಐದು ಪಂದ್ಯಗಳಲ್ಲಿ ಯಾವುದಾದರೂ ಒಂದನ್ನು ಸೋತರೆ ಅಥವಾ ಯಾವುದೇ ಪಂದ್ಯ ಮಳೆಯಿಂದಾಗಿ ರದ್ದಾದರೆ, ಪ್ಲೇಆಫ್ ರೇಸ್‌ನಿಂದ ಹೊರಗುಳಿಯಲಿದೆ. ರಾಜಸ್ಥಾನ ಸೋಮವಾರ (ಏಪ್ರಿಲ್ 28) ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ನಂತರ ಮೇ 1 ರಂದು ಅದೇ ಮೈದಾನದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ತಮ್ಮ ಕೊನೆಯ ಮೂರು ಲೀಗ್ ಹಂತದ ಪಂದ್ಯಗಳಲ್ಲಿ ರಾಜಸ್ಥಾನ ಮೇ 4 ರಂದು ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಮೇ 12 ರಂದು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮೇ 16 ರಂದು ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡಗಳನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications