ಐಪಿಎಲ್ 2025ರ ಬಿಸಿ ಈಗಿನಿಂದಲೇ ಆರಂಭವಾಗಿದೆ. ಬಿಸಿಸಿಐ ರಿಟೇನ್ಷನ್ ಪಾಲೀಸ್ ರಿಲೀಸ್ ಮಾಡುವವರೆಗೂ ಅದಕ್ಕಾಗಿ ಕಾಯುತ್ತಿದ್ದ ಐಪಿಎಲ್ ಮಾಲೀಕರು ಈಗ ಲೆಕ್ಕಾಚಾರ ಆರಂಭಿಸಿದ್ದಾರೆ. ರಿಟೇನ್ಷನ್ ಪಾಲಿಸಿ ರಿಲೀಸ್ ಆಗಿ ಮೂರು ವಾರಗಳೇ ಕಳೆದರೂ, ಇನ್ನು ಯಾವ ತಂಡವೂ ಇನ್ನು ಸಹ ಉಳಿಸಿಕೊಳ್ಳುವ ಆಟಗಾರರು ಹಾಗೂ ಕೈ ಬಿಟ್ಟ ಆಟಗಾರರ ಬಗ್ಗೆ ಯಾವುದೇ ಸುಳಿವನ್ನು ನೀಡಿಲ್ಲ. ಬಿಸಿಸಿಐಗೆ ತಾವು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ನೀಡಲು ದಿನಗಣನೆ ಆರಂಭವಾಗಿದೆ.
ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಎಲ್ಲ 10 ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿ ಇದೇ 31ರೊಳಗೆ ರಿಲೀಸ್ ಮಾಡಬೇಕು. ಇದಕ್ಕಾಗಿ ಕೇವಲ ಒಂದು ವಾರ ಮಾತ್ರ ಉಳಿದಿದೆ. ಈ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಲೀಕರು ಸಹ ರಿಟೇನ್ಷನ್ ಲೀಸ್ಟ್ ಸಿದ್ಧ ಪಡಿಸಲು ತಯಾರಿ ನಡೆಸಿದ್ದಾರೆ. ಈ ಮಧ್ಯ ಐಪಿಎಲ್ 2008ರ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಾನು ಉಳಿಸಿಕೊಳ್ಳುವ ಆಟಗಾರನ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದೆ.

ರಾಜಸ್ಥಾನ ರಾಯಲ್ಸ್ ಸಾಮಾಜಿಕ ತಾಣದಲ್ಲಿ ಫೋಟೋ ಒಂದನ್ನು ಹಾಕಿದೆ. ಈ ಫೋಟೋ ಈಗ ಸಖತ್ ಸದ್ದು ಮಾಡುತ್ತಿದೆ. ಈ ಫೋಟೋ ಸಾವಿರ ಪದಗಳನ್ನು ಸೇರಿಸಿ ಲೇಖನ ಬರೆದಂತೆ ಕಾಣುತ್ತಿದೆ. ರಾಜಸ್ಥಾನ ರಾಯಲ್ಸ್ ತನ್ನ ಭರವಸೆಯ ಬ್ಯಾಟರ್‌ನೊಬ್ಬನನ್ನು ಉಳಿಸಿಕೊಂಡಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ರಾಜಸ್ಥಾನ ರಾಯಲ್ಸ್ ಸಾಮಾಜಿಕ ತಾಣದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದೆ. ಈ ಫೊಟೋದಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಡೈರೆಕ್ಟರ್ ಕುಮಾರ್ ಸಂಗಕ್ಕಾರ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಇರುವ ಫೋಟೋದಲ್ಲಿ ಮತ್ತೊಬ್ಬ ಪ್ಲೇಯರ್ ಸಹ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಸಹ ಕಾಣಬಹುದಾಗಿದೆ. ಫೊಟೋದಲ್ಲಿ ಸಂಜು ಅವರನ್ನು ಕಾಣುತ್ತಿದ್ದಂತೆ ಅಭಿಮಾನಿಗಳು, ಮಾಲೀಕರು ಸಂಜು ಅವರನ್ನು ಉಳಿಸಿಕೊಂಡಿದ್ದಾರೆ ಎಂದು ಚರ್ಚೆ ಆರಂಭಿಸಿದ್ದಾರೆ. ಆದರೆ ಫ್ರಾಂಚೈಸಿ ಕಡೆಯಿಂದ ಇನ್ನು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಸಾಮಾಜಿಕ ತಾಣದಲ್ಲಿ ಫೊಟೋವನ್ನು ಹಂಚಿಕೊಂಡಿರುವ ರಾಜಸ್ಥಾನ, ಮುಂದಿನ ಒಂದು ವಾರಕ್ಕೆ ತಾವೆಲ್ಲಾ ಸಿದ್ಧತೆ ನಡೆಸಿದ್ದಾಗಿ ಬರೆದುಕೊಂಡಿದೆ. ಇನ್ನೊದು ವಾರದಲ್ಲಿ ಎಲ್ಲ ತಂಡಗಳು ಉಳಿಸಿಕೊಳ್ಳುವ ಆಟಗಾರರ ಹೆಸರನ್ನು ಘೋಷಿಸಬೇಕಿದೆ. ರಾಜಸ್ಥಾನ ತಂಡದ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳ ಜೊತೆ ಸಂಜು ಕಾಣಿಸಿಕೊಂಡಿದ್ದು, ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.
ಸಂಜು ಸ್ಯಾಮ್ಸನ್ ಇತ್ತೀಚಿಗೆ ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಶತಕ ಬಾರಿಸಿದ್ದರು. ಇವರ ಭರ್ಜರಿ ಶತಕದ ಬಲದಿಂದ ಟೀಮ್ ಇಂಡಿಯಾ ಗೆಲುವು ಸಾಧಿಸಿತ್ತು. ಅಲ್ಲದೆ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ಸ್ಥಿರ ಪ್ರದರ್ಶನ ನಿಡುತ್ತಿರುವುದು ರಾಜಸ್ಥಾನ ತಂಡ ಇವರನ್ನು ಉಳಿಸಿಕೊಳ್ಳುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.